ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಕೆಕೆಆರ್‌ ತಂಡದ ಬೆಸ್ಟ್ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

KKR Playing XI for IPL 2026: ಭಾರತ ತಂಡದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು, ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಬೆಸ್ಟ್‌ ಪ್ಲೇಯಿಂಗ್‌ Xi ಆರಿಸಿದ್ದಾರೆ. ಇದರಲ್ಲಿ ಅವರು ಎಂಟು ಮಂದಿ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಿದ್ದು, ಇಬ್ಬರು ಆಲ್‌ರೌಂಡರ್‌ಗಳಿಗೆ ಅವಕಾಶವನ್ನು ಕಲ್ಪಿಸಿದ್ದಾರೆ.

ಕೋಲ್ಕತಾ ನೈಟ್‌ ರೈಡರ್ಸ್‌ ಪ್ಲೇಯಿಂಗ್‌ Xi ಆರಿಸಿದ ಇರ್ಫಾನ್‌ ಪಠಾಣ್‌.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್‌ (Irfan Pathan) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಕ್ಕೂ ಮುನ್ನ ಕೊಲ್ಕತಾ ನೈಟ್ ರೈಡರ್ಸ್ (KKR) ತಂಡದ ತಮ್ಮ ನೆಚ್ಚಿನ ಪ್ಲೇಯಿಂಗ್ XI ಅನ್ನು ಪ್ರಕಟಿಸಿದ್ದಾರೆ. ಪಠಾಣ್‌ ಅವರು ಆಧುನಿಕ ಟಿ20 ತಂಡಗಳು ಅನುಸರಿಸುವ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಿದ್ದಾರೆ. ಕ್ಯಾಮೆರಾನ್ ಗ್ರೀನ್ ಮತ್ತು ರಮಣ್‌ದೀಪ್ ಸಿಂಗ್ ಮೊದಲಾದ ಆಲ್‌ರೌಂಡರ್‌ಗಳನ್ನು ಒಳಗೊಂಡಂತೆ ಒಟ್ಟು ಎಂಟು ಬ್ಯಾಟರ್‌ಗಳನ್ನು ಹೊಂದಿರುವ ಸಮತೋಲನದ ತಂಡವನ್ನು ಅವರು ಕಟ್ಟಿದ್ದಾರೆ.

‌ಇರ್ಫಾನ್‌ ಪಠಾಣ್ ಅವರು ಕೆಕೆಆರ್ ತಂಡದ ಪ್ರಮುಖ ಕೀ ಆಟಗಾರ ಸುನೀಲ್‌ ನರೇನ್‌ ಅವರನ್ನು ಕೈಬಿಟ್ಟು, ಅನುಭವವಿಲ್ಲದ ತೆಜಸ್ವಿ ದಹಿಯಾ ಅವರನ್ನು ತಂಡದಲ್ಲಿ ಅವಕಾಶ ನೀಡಿದ್ದಾರೆ. 23ರ ವಯಸ್ಸಿನ ಈ ಆಟಗಾರ 2025ರ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 190.45 ಸ್ಟ್ರೈಕ್ ರೇಟ್‌ನೊಂದಿಗೆ 339 ರನ್‌ಗಳನ್ನು ಸಿಡಿಸಿದ್ದರು. ಅವರು ಸರಾಸರಿ ಸುಮಾರು 50ಕ್ಕೆ ಸಮೀಪವಾಗುವಂತೆ ಅದ್ಭುತ ಪ್ರದರ್ಶನ ನೀಡಿದ್ದರು. ಕೆಕೆಆರ್ ಅವರು ಅವರನ್ನು ಮಿನಿ ಹರಾಜಿನಲ್ಲಿ 3 ಕೋಟಿ ರು. ಗಳಿಗೆ ಖರೀದಿಸಿತ್ತು.

ಆದರೆ, ಪಠಾಣ್ ತಮ್ಮ ಆಯ್ಕೆಯ ಹಿಂದಿನ ಕಾರಣಗಳನ್ನು ವಿವರಿಸಿದ್ದು, ಒಂದು ಸಂದರ್ಭದಲ್ಲಿಯೇ ನರೇನ್ ಅವರು ಫಿನ್ ಆಲೆನ್ ಅವರ ಬದಲು ನಾಯಕ ಅಜಿಂಕ್ಯ ರಹಾನೆ ಅವರೊಂದಿಗೆ ಓಪನರ್ ಆಗಿ ಆಡಬಹುದೆಂಬ ಸಾಧ್ಯತೆಯನ್ನು ಕೂಡ ಉಲ್ಲೇಖಿಸಿದ್ದಾರೆ.

IPL 2026: ಕೆಕೆಆರ್‌ಗೆ ಮತ್ತೊಂದು ಶಾಕ್‌, ಆಕಾಶ್‌ ದೀಪ್‌ ಟೂರ್ನಿಯಿಂದ ಔಟ್‌?

“ನೀವು ತೆಜಸ್ವಿ ದಹಿಯಾ ಅವರನ್ನು ಆಡಿಸಲು ಬಯಸಿದರೆ, ಫಿನ್ ಆಲೆನ್ ಅವರ ಬದಲು ಮತ್ತೆ ಸುನಿಲ್ ನರೇನ್ ಅವರನ್ನು ಓಪನರ್ ಆಗಿ ಆಡಿಸಬಹುದು. ಆದರೆ ಅದು ಅತ್ಯುತ್ತಮ ಆಯ್ಕೆಯಾಗುವುದಿಲ್ಲ. ಸಾಮಾನ್ಯವಾಗಿ, ಈ ಮೈದಾನದಲ್ಲಿ ಈಗಾಗಲೇ ರನ್ ಗಳಿಸಿರುವ ಓಪನರ್‌ನನ್ನೇ ನೀವು ಆಯ್ಕೆ ಮಾಡಲು ಇಷ್ಟಪಡುತ್ತೀರಿ. ಫಿನ್ ಆಲೆನ್ ಸೆಮಿಫೈನಲ್‌ನಲ್ಲಿ ಶತಕ ಬಾರಿಸಿದ್ದು ಗಮನಾರ್ಹವಾಗಿದೆ ಮತ್ತು ಅವರು ವಿಶ್ವಕಪ್‌ ಟೂರ್ನಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ, ನೀವು ಅವರಿಂದಲೇ ಇನಿಂಗ್ಸ್‌ ಆರಂಭಿಸಲು ಬಯಸುತ್ತೀರಿ,” ಎಂದು ಪಠಾಣ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

“ಆದರೆ ಸ್ಪಿನ್ ಬೌಲಿಂಗ್ ಎದುರಿಸುವ ಸವಾಲು ಅವರಿಗಿನ್ನೂ ಉಳಿಯುತ್ತದೆ. ನೀವು ಈ ಬದಲಾವಣೆಯನ್ನು ಮಾಡಬಹುದು. ಮಾಡದಿದ್ದರೆ, ತೆಜಸ್ವಿ ದಹಿಯಾ ಆಡದ ಪರಿಸ್ಥಿತಿಯಲ್ಲಿ ಸುನಿಲ್ ನರೇನ್ ಎಂಟನೇ ಸ್ಥಾನದಲ್ಲಿ ಬಂದು ‘ಫ್ಲೋಟರ್’ ಪಾತ್ರವನ್ನು ನಿರ್ವಹಿಸುತ್ತಾರೆ. ಅವರು ಮಧ್ಯಕ್ರಮಾಂಕದಲ್ಲಿ ಬಂದು ಅಗತ್ಯವಿದ್ದರೆ ಮೂರನೇ ಸ್ಥಾನಕ್ಕೂ ಮೇಲಕ್ಕೆ ಬರಬಹುದಾಗಿದೆ,” ಎಂದು ಅವರು ಸೇರಿಸಿದ್ದಾರೆ.

IPL 2026: ಎಂಎಸ್‌ ಧೋನಿಯನ್ನು ಕೈಬಿಟ್ಟು ಸಿಎಸ್‌ಕೆಯ ಬಲಿಷ್ಠ XI ಕಟ್ಟಿದ ಇರ್ಫಾನ್‌ ಪಠಾಣ್‌!

ಪಠಾಣ್‌ ಅವರು ತಮ್ಮ ತಂಡದಲ್ಲಿ ಕ್ಯಾಮೆರಾನ್ ಗ್ರೀನ್ ಅವರನ್ನು ಮೂರನೇ ಕ್ರಮಾಂಕಕ್ಕೆ ಸೇರಿಸಿದ್ದಾರೆ. ಆಸ್ಟ್ರೇಲಿಯಾದ ಈ ಆಟಗಾರ ಈಗ ನಿವೃತ್ತರಾದ ಆಂಡ್ರೆ ರಸೆಲ್ ಅವರ ಬದಲಿಗೆ ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳಿಗೆ ಖರೀದಿಸಲಾಗಿತ್ತು. ಹಾಗಾಗಿ 2026ರ ಐಪಿಎಲ್‌ಗೆ ಭಾರಿ ನಿರೀಕ್ಷೆಗಳೊಂದಿಗೆ ಪ್ರವೇಶಿಸುತ್ತಿದ್ದಾರೆ.

ಇರ್ಫಾನ್‌ ಪಠಾಣ್‌ ಆಯ್ಕೆಯ ಕೆಕೆಆರ್‌ ಪ್ಲೇಯಿಂಗ್‌ XI

ಅಜಿಂಕ್ಯ ರಹಾನೆ (ನಾಯಕ), ಫಿನ್‌ ಆಲೆನ್‌, ಕ್ಯಾಮೆರಾನ್‌ ಗ್ರೀನ್‌, ಅಂಗಕ್ರಿಷ್‌ ರಘುವಂಶಿ/ರಾಹುಲ್‌ ತ್ರಿಪಾಠಿ, ರೊವ್ಮನ್‌ ಪೊವೆಲ್‌ಮ ರಿಂಕು ಸಿಂಗ್‌, ರಮಣ್‌ದೀಪ್‌ ಸಿಂಗ್‌, ತೇಜಸ್ವಿ ದಹಿಯಾ/ಸುನೀಲ್‌ ನರೇನ್‌, ಅನುಕುಲ್‌ ರಾಯ್‌, ವೈಭವ್‌ ಅರೋರಾ, ವರುಣ್‌ ಚಕ್ರವರ್ತಿ