IPL 2026: ಎಂಎಸ್ ಧೋನಿಯನ್ನು ಕೈಬಿಟ್ಟು ಸಿಎಸ್‌ಕೆಯ ಬಲಿಷ್ಠ XI ಕಟ್ಟಿದ ಇರ್ಫಾನ್ ಪಠಾಣ್!
Irfan Pathan Picks CSK's Best XI: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಕಳೆದ ಎರಡು ಆವೃತ್ತಿಗಳಲ್ಲಿ ವೈಫಲ್ಯ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ದಾಖಲೆಯ ಆರನೇ ಕಪ್ ಗೆಲ್ಲಲಯ ಎದುರು ನೋಡುತ್ತಿದೆ.
ಸಿಎಸ್‌ಕೆಯ ಬೆಸ್ಟ್ ಪ್ಲೇಯಿಂಗ್ XI ಆರಿಸಿದ ಇರ್ಫಾನ್ ಪಠಾಣ್. -
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 19ನೇ ಆವೃತ್ತಿಯ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅತ್ಯುತ್ತಮ ಪ್ಲೇಯಿಂಗ್ XIನಲ್ಲಿ ಎಂಎಸ್ ಧೋನಿ ಸ್ಥಾನ ಪಡೆಯುವುದಿಲ್ಲ ಎಂದು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ, ಆರನೇ ಕ್ರಮಾಂಕದಲ್ಲಿ ಯುವ ಬ್ಯಾಟ್ಸ್‌ಮನ್ ಸರ್ಫರಾಝ್ ಖಾನ್ ಅವರಿಗೆ ಅವಕಾಶ ನೀಡಬೇಕೆಂದು ಅವರು ಶನಿವಾರ ಆಗ್ರಹಿಸಿದ್ದಾರೆ.
ಕಳೆದ ಐದು ಐಪಿಎಲ್ ಸೀಸನ್‌ಗಳಲ್ಲಿ ಎಂಎಸ್ ಧೋನಿ ಕ್ರಮವಾಗಿ 107, 188, 57, 73 ಮತ್ತು 145 ಬಾಲ್‌ಗಳನ್ನು ಎದುರಿಸಿದ್ದಾರೆ ಹಾಗೂ 114 ಬಾಲ್‌ಗಳ ಸರಾಸರಿಯನ್ನು ಹೊಂದಿದ್ದಾರೆ. ಹೋಲಿಕೆಗೆ, ಇನ್ನೊಬ್ಬ ಫಿನಿಷರ್ ಹಾರ್ದಿಕ್ ಪಾಂಡ್ಯ ಈ ಅವಧಿಯಲ್ಲಿ ಸರಾಸರಿ 204.8 ಬಾಲ್‌ಗಳನ್ನು ಆಡಿದ್ದಾರೆ. ಇದು ಧೋನಿಯ ಕ್ಷೀಣಿಸುತ್ತಿರುವ ಶಕ್ತಿಗೆ ಸಾಕ್ಷಿಯಾಗಿದ್ದರೂ, ಸಿಎಸ್‌ಕೆ ದಂತಕಥೆಯು ಉದ್ದೇಶಪೂರ್ವಕವಾಗಿ ತನ್ನನ್ನು ತಾನು ಬ್ಯಾಟಿಂಗ್ ಕ್ರಮಾಂಕದಲ್ಲಿ ಇಳಿಸಿಕೊಂಡಿದ್ದಾರೆ. ಆದರೆ, ʻಇಂಪ್ಯಾಕ್ಟ್ ಪ್ಲೇಯರ್ʼ ನಿಯಮ ಧೋನಿಗೆ ನೆರವಾಗುತ್ತಿದೆ.
IPL 2026: ಈ ಸಲಾನು ಆರ್‌ಸಿಬಿ ಕಪ್ ಹೊಡೆಯುವುದು ಪಕ್ಕಾ ಎಂದ ಆರ್ ಅಶ್ವಿನ್!
ಆರನೇ ಕ್ರಮಾಂಕಕ್ಕೆ ಸರ್ಫರಾಝ್ ಖಾನ್ ಸೂಕ್ತ
“ಸರ್ಫರಾಝ್ ಖಾನ್ ಈ ತಂಡದಲ್ಲಿ ಆರನೇ ಕ್ರಮಾಂಕಕ್ಕೆ ಸೂಕ್ತವಾಗುತ್ತಾರೆ. ಆದರೆ ಎಂಎಸ್ ಧೋನಿ ಪ್ರತಿಯೊಂದು ಪಂದ್ಯದಲ್ಲಿ ಆಡುತ್ತೇನೆಂದು ಭಾವಿಸಿದರೆ, ವಿಶ್ವದ ಅತ್ಯುತ್ತಮ ಬ್ಯಾಟರ್‌ಗೂ ನಿವೃತ್ತಿಯಾಗಬೇಕಾದ ಸಮಯ ಬರುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಅವರು ಎಲ್ಲಾ ಪಂದ್ಯಗಳಲ್ಲಿ ಆಡ್ತಾರೆಯೇ? ಅಥವಾ ಅಲ್ಲವೇ? ಅವರು ಎರಡು ಓವರ್‌ಗಳಿಗೆ ಆಟಕ್ಕೆ ಬರಬೇಕಾದರೂ ಧೋನಿಯ ಅಭಿಮಾನಿಗಳಿಗೆ ಸಂತೋಷವಾಗುತ್ತದೆ, ಆದರೆ ಸಿಎಸ್‌ಕೆಗೆ ಇದರಿಂದ ಲಾಭವಿಲ್ಲ ಎಂದು ನಾನು ದೀರ್ಘಾವಧಿಯಿಂದ ಹೇಳುತ್ತಿದ್ದೇನೆ. ಎಂಎಸ್ ಧೋನಿ ಆಡಲು ಬಯಸಿದರೆ, ಅದು ನಾಲ್ಕು ಓವರ್‌ಗಳು ಆಗಿರಬಹುದು, ಒಂದು ವೇಳೆ ಅವರು ಆಡಲು ಬಯಸದಿದ್ದರೆ ಇದು ತಂಡದ ಇತರೆ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಬಹುದು," ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
IPL 2026: ಆರ್‌ಸಿಬಿಗೆ ಪಂದ್ಯ ಗೆದ್ದುಕೊಡಬಲ್ಲ ಐವರು ಸ್ಟಾರ್ ಆಟಗಾರರು!
ಇರ್ಫಾನ್ ಪಠಾಣ್ ಆಯ್ಕೆಯ ಸಿಎಸ್‌ಕೆಯ ಬೆಸ್ಟ್ ಪ್ಲೇಯಿಂಗ್ xi
ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ, ಋತುರಾಜ್ ಗಾಯಕ್ವಾಡ್ (ನಾಯಕ), ಶಿವಂ ದುಬೆ, ಡೆವಾಲ್ಡ್ ಬ್ರೆವಿಸ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ಅಕೀಲ್ ಹುಸೇನ್, ಮ್ಯಾಟ್ ಹೆನ್ರಿ, ನೂರ್ ಅಹ್ಮದ್ ಹಾಗೂ ಖಲೀಲ್ ಅಹ್ಮದ್(ಇಂಪ್ಯಾಕ್ಟ್ ಪ್ಲೇಯರ್)