ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ತಮ್ಮ ಕುತ್ತಿಗೆ ಗಾಯದ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ಲುಂಗಿ ಎನ್‌ಗಿಡಿ!

ಪಂಜಾಬ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್‌ನಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ವೇಗದ ಬೌಲರ್ ಲುಂಗಿ ಎನ್‌ಗಿಡಿ ಗಂಭೀರವಾಗಿ ಗಾಯಗೊಂಡಿದ್ದರು. ಅವರ ತಲೆಯ ಹಿಂಭಾಗಕ್ಕೆ ಗಾಯವಾಗಿತ್ತು. ಅವರು ಈಗ ತಮ್ಮ ಗಾಯದ ಬಗ್ಗೆ ಪ್ರಮುಖ ಅಪ್‌ಡೇಟ್‌ ನೀಡಿದ್ದಾರೆ.

ತಮ್ಮ ಗಾಯದ ಬಗ್ಗೆ ಅಪ್ಡೇಟ್‌ ನೀಡಿದ ಲುಂಗಿ ಎನ್‌ಗಿಡಿ.

ನವದೆಹಲಿ: ಪಂಜಾಬ್ ಕಿಂಗ್ಸ್ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 35ನೇ ಪಂದ್ಯದ (PBKS vs DC) ವೇಳೆ ಕ್ಯಾಚ್ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲುಂಗಿ ಎನ್‌ಗಿಡಿ (Lungi Ngidi) ಅವರ ತಲೆಯ ಹಿಂಭಾಗಕ್ಕೆ ತೀವ್ರ ಗಾಯವಾಯಿತು. ಈ ವೇಳೆ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ನಿಂತುಕೊಳ್ಳಲು ಸಾಧ್ಯವಾಗದೇ ನೆಲದ ಮೇಲೆಯೇ ನೋವು ತಿಂದಿದ್ದ ವೇಗಿಯನ್ನು ಫಿಸಿಯೊ ಹಾಗೂ ತಂಡದ ವೈದ್ಯಕೀಯ ಸಿಬ್ಬಂದಿ ತಪಾಸನೆ ನಡೆಸಿದ ಬಳಿಕ ಅವನ್ನು ಆಂಬ್ಯೂಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರನ್ನು ದೆಹಲಿಯ ರಾಜೇಂದ್ರ ನಗರದಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು ಮತ್ತು ಕೆಲವೇ ಗಂಟೆಗಳ ನಂತರ ಅವರನ್ನು ಡಿಶ್ಚಾರ್ಜ್‌ ಮಾಡಲಾಗಿತ್ತು. ಇದರನಡುವೆ ಡೆಲ್ಲಿ ಕ್ಯಾಪಿಟಲ್ಸ್‌ನ ಸಹ-ಮಾಲೀಕ ಮತ್ತು ಅಧ್ಯಕ್ಷೆ ಕಿರಣ್ ಗಾಂಧಿ ಕೂಡ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ವೇಗದ ಬೌಲರ್ ಈಗ ಅವರ ಗಾಯದ ಬಗ್ಗೆ ಸ್ವತಃ ಅಪ್‌ಡೇಟ್‌ ನೀಡಿದ್ದಾರೆ.

DC vs PBKS: ಫೀಲ್ಡಿಂಗ್‌ ವೇಳೆ ಲುಂಗಿ ಎನ್‌ಗಿಡಿಗೆ ಗಂಭೀರ ಗಾಯ, ಮೈದಾನಕ್ಕೆ ಆಗಮಿಸಿದ ಆಂಬ್ಯುಲೆನ್ಸ್‌!

ತಮ್ಮ ಗಾಯದ ಬಗ್ಗೆ ಅಪ್‌ಡೇಟ್‌ ನೀಡಿದ ಎನ್‌ಗಿಡಿ

ಲುಂಗಿ ಎನ್‌ಗಿಡಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು "ನಿಮ್ಮೆಲ್ಲರ ಸಂದೇಶಗಳಿಗೆ ಧನ್ಯವಾದಗಳು; ಎಲ್ಲವೂ ಚೆನ್ನಾಗಿದೆ" ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ಕಿಂಗ್ಸ್‌ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ಗಾಯಗೊಂಡಿದ್ದರು. ಪಂದ್ಯದಲ್ಲಿ ಒಂದೇ ಒಂದು ಓವರ್ ಬೌಲ್ ಮಾಡದೆ ಗಾಯದಿಂದಾಗಿ ಅವರು ಹೊರಗುಳಿದಿದ್ದರು.

ಆದಾಗ್ಯೂ, ಪಂದ್ಯದ ಸಮಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಅವರ ಅನುಪಸ್ಥಿತಿಯನ್ನು ತೀವ್ರವಾಗಿ ಅನುಭವಿಸಿತು. ಡೆಲ್ಲಿ ಕ್ಯಾಪಿಟಲ್ಸ್ 265 ರನ್‌ಗಳ ಗುರಿಯನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು ಮತ್ತು ಪಂಜಾಬ್ ಕಿಂಗ್ಸ್‌ ಪ್ರಬ್‌ಸಿಮ್ರಾನ್‌ ಸಿಂಗ್‌ ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

ಲುಂಗಿ ಎನ್‌ಗಿಡಿ ಗಾಯದ ಬಗ್ಗೆ ಅಪ್ಡೇಟ್ ನೀಡಿದ ಐಪಿಎಲ್ ಮಂಡಳಿ

2026ರ ಐಪಿಎಲ್ ಟೂರ್ನಿಯಲ್ಲಿ ಲುಂಗಿ ಎನ್‌ಗಿಡಿ ಪ್ರದರ್ಶನ

ದಕ್ಷಿಣ ಆಫ್ರಿಕಾದ ಲುಂಗಿ ಎನ್‌ಗಿಡಿ ಈ ಋತುವಿನಲ್ಲಿ ಇಲ್ಲಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರಮುಖ ಬೌಲರ್ ಆಗಿದ್ದಾರೆ. ಅವರು ಇಲ್ಲಿಯವರೆಗೆ 7 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸೀಸನ್‌ನ ಬಹುತೇಕ ಪಂದ್ಯಗಳಲ್ಲಿ ಸುಮಾರು 200 ರನ್‌ಗಳನ್ನು ಗಳಿಸುತ್ತಿರುವ ಸಮಯದಲ್ಲಿ, ಎನ್‌ಗಿಡಿ ಇನ್ನೂ ಕೇವಲ 8.70 ರ ಎಕಾನಮಿ ರೇಟ್‌ ಅನ್ನು ಕಾಯ್ದುಕೊಂಡಿದ್ದಾರೆ. ಅವರು ಪಂಜಾಬ್ ವಿರುದ್ಧ ತಮ್ಮ ಪೂರ್ಣ 4-ಓವರ್‌ಗಳ ಸ್ಪೆಲ್ ಅನ್ನು ಬೌಲ್ ಮಾಡಿದ್ದರೆ, ಪಂದ್ಯದ ಫಲಿತಾಂಶವು ಬಹುಶಃ ವಿಭಿನ್ನವಾಗಿರುತ್ತಿತ್ತು. ಏಪ್ರಿಲ್ 27 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎನ್‌ಗಿಡಿ ಆಡುತ್ತಾರೋ ಇಲ್ಲವೋ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.