ನವದೆಹಲಿ: ಕಳೆದ ವರ್ಷ ರನ್ನರ್ ಅಪ್ ಆಗಿದ್ದ ಪಂಜಾಬ್ ಕಿಂಗ್ಸ್ ತಂಡ ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಅಂದ ಹಾಗೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ (GT vs PBKS) ಗುಜರಾತ್ ಟೈಟನ್ಸ್ ತಂಡದ ವಿರುದ್ಧ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಕಾದಾಟ ನಡೆಸಲು ಎದುರು ನೋಡುತ್ತಿದೆ. ಈ ಪಂದ್ಯ ನವ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದೆ.
ಪಂಜಾಬ್ ಕಿಂಗ್ಸ್ ತಂಡ, ಕಳೆದ ಐಪಿಎಲ್ ಸೀಸನ್‌ನಲ್ಲಿ ತಮ್ಮ ಇತಿಹಾಸದಲ್ಲೇ ಎರಡನೇ ಬಾರಿ ಫೈನಲ್‌ಗೆ ಪ್ರವೇಶಿಸಿತ್ತು. ಆದರೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರು ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತು. ಆ ಮೂಲಕ ಚೊಚ್ಚಲ ಕಪ್ ಗೆಲ್ಲುವ ಪಂಜಾಬ್‌ನ ಕನಸು ಭಗ್ನವಾಗಿತ್ತು.
2025ರಲ್ಲಿ ಫೈನಲ್‌ಗೆ ತಲುಪಿದ್ದ ತಮ್ಮ ತಂಡದ ಮೂಲ ರಚನೆಯಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡದೇ ಉಳಿಸಿಕೊಂಡಿರುವ ಪಂಜಾಬ್ ಫ್ರಾಂಚೈಸಿ, ಮಿನಿ ಹರಾಜಿನಲ್ಲಿ ಕೇವಲ ನಾಲ್ಕು ಆಟಗಾರರನ್ನು ಮಾತ್ರ ಸೇರಿಸಿಕೊಂಡಿದೆ. ಇದರಲ್ಲಿ ಕೂಪರ್ ಕೊನ್ನೋಲಿ ಮತ್ತು ಬೆನ್ ಡ್ವಾರ್ಶುಯಿಸ್ ಪ್ರಮುಖರಾಗಿದ್ದಾರೆ.
IPL 2026: ರಹಾನೆ ಆರೋಪಕ್ಕೆ ಖಡಕ್ ಉತ್ತರ ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ
ಈ ಆವೃತ್ತಿಯಲ್ಲಿಯೂ ಪಂಜಾಬ್ ಕಿಂಗ್ಸ್ ತಂಡ ತನ್ನ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಮತ್ತು ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪ್ರದರ್ಶನದ ಮೇಲೆ ಭರವಸೆ ಇಟ್ಟುಕೊಂಡಿದೆ. ಈ ಇಬ್ಬರ ಅತ್ಯುತ್ತಮ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ ಮತ್ತೊಮ್ಮೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿದೆ.
ಇನ್ನೊಂದೆಡೆ, ಗುಜರಾತ್ ಜಯಂಟ್ಸ್ ತಂಡ, ಕಳೆದ ಸೀಸನ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದರೂ, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಕಂಡಿತ್ತು. 2022ರ ಚಾಂಪಿಯನ್ಸ್ ಉತ್ತಮ ಫಾರ್ಮ್‌ನಲ್ಲಿರುವ ಉನ್ನತ ಮಟ್ಟದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳನ್ನು ಸಮತೋಲನವನ್ನು ಹೊಂದಿದೆ. ಕಳೆದ ಸೀಸನ್‌ನಲ್ಲಿ ಪ್ರಸಿಧ್ ಕೃಷ್ಣ ಮತ್ತು ಸಾಯಿ ಸುದರ್ಶನ್ ಕ್ರಮವಾಗಿ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ವಿಜೇತರಾಗಿದ್ದರು.
IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ!
ಪಂಜಾಬ್ ಕಿಂಗ್ಸ್ ತಂಡ ಹೊಸ ಸೀಸನ್‌ನ ಆರಂಭಿಕ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಪ್ಲೇಯಿಂಗ್ XI ಅನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಆದರೆ, ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ತಂಡಕ್ಕೆ ಆರಂಭಿಕ ಹಂತಗಳಲ್ಲಿ ಲಾಕಿ ಫರ್ಗ್ಯೂಸನ್ ಅಲಭ್ಯರಾಗಿದ್ದಾರೆ, ಏಕೆಂದರೆ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಗುಜರಾತ್ ಜಯಂಟ್ಸ್ ತಂಡಕ್ಕೆ ಯಾವುದೇ ಆಟಗಾರರ ಅಲಭ್ಯತೆ ಸಮಸ್ಯೆ ಕಾಡುತ್ತಿಲ್ಲ. ಮಿನಿ ಹರಾಜಿನಲ್ಲಿ ಲ್ಯೂಕ್ ವುಡ್, ಜೇಸನ್ ಹೋಲ್ಡರ್ ಮತ್ತು ಟಾಮ್ ಬ್ಯಾನ್ಟನ್ ಅವರನ್ನು ಸೇರಿಸಿಕೊಂಡು ತಮ್ಮ ವಿದೇಶಿ ಆಟಗಾರರ ಬಳಗವನ್ನು ಜಿಟಿ ಮತ್ತಷ್ಟು ಬಲಪಡಿಸಿದೆ.
ಪಂದ್ಯದ ವಿವರ
ಐಪಿಎಲ್ 2026
ನಾಲ್ಕನೇ ಪಂದ್ಯ
ಪಂಜಾಬ್ ಕಿಂಗ್ಸ್ vs ಗುಜರಾತ್ ಜಯಂಟ್ಸ್
ದಿನಾಂಕ: ಮಾರ್ಚ್ 31, 2026
ಸಮಯ: ಸಂಜೆ 07: 30ಕ್ಕೆ
ಸ್ಥಳ: ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ನವ ಚಂಡೀಗಡ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ʼಫ್ರೀ ರೈಡ್ʼ ಆಫರ್ ನೀಡಿ ಅಭಿಮಾನ ಮೆರೆದ ಬೆಂಗಳೂರಿನ ಆಟೋ ಚಾಲಕ!
ಮುಖಾಮುಖಿ ದಾಖಲೆ
ಒಟ್ಟು ಆಡಿದ ಪಂದ್ಯಗಳು: 06
ಪಂಜಾಬ್ ಕಿಂಗ್ಸ್ ಜಯ: 03
ಗುಜರಾತ್ ಜಯಂಟ್ಸ್: 03
ಪಿಚ್ ರಿಪೋರ್ಟ್
ನ್ಯೂ ಚಂಡೀಗಢದಲ್ಲಿರುವ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಟಿ20 ಪಂದ್ಯಗಳಿಗೆ ಮಿಶ್ರ ಸ್ವರೂಪದ ಪಿಚ್ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಕಳೆದ ವರ್ಷ ಕೆಲವು ಪಂದ್ಯಗಳಲ್ಲಿ ತಂಡಗಳು ಸುಲಭವಾಗಿ 200 ರನ್ ಗಡಿ ದಾಟಿದ್ದರೆ, ಕೆಲವೊಮ್ಮೆ 120 ರನ್ ಗಳಿಸಲು ಕೂಡ ಹೋರಾಡಿದ ಉದಾಹರಣೆಗಳಿವೆ.
ನ್ಯೂ ಚಂಡೀಗಢದ ಈ ಮೈದಾನದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಮತ್ತು ಬೌಲರ್‌ಗಳಿಗೆ ಸಮಾನ ಅವಕಾಶಗಳನ್ನು ನೀಡುವ ನಿರೀಕ್ಷೆಯಿದೆ. ವಿಶೇಷವಾಗಿ, ಪಂದ್ಯ ಮುಂದುವರಿದಂತೆ ಸ್ಪಿನ್ ಬೌಲರ್‌ಗಳು ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಲಿದ್ದಾರೆ.
IPL 2026: ರೋಹಿತ್ ಶರ್ಮಾ ರನ್ ಗಳಿಸುವ ಬಗ್ಗೆ ಡೇಲ್ ಸ್ಟೇನ್ ದೊಡ್ಡ ಹೇಳಿಕೆ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭಸಿಮ್ರಾನ್ ಸಿಂಗ್, ಕೂಪರ್ ಕಾನೋಲಿ, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಮಾರ್ಕೊ ಯೆನ್ಸನ್, ಹರಪ್ರೀತ್ ಬ್ರಾರ್, ಬೆನ್ ಡ್ವಾರ್ಶುಯಿಸ್, ಅರ್ಷದೀಪ್ ಸಿಂಗ್
ಇಂಪ್ಯಾಕ್ಟ್ ಪ್ಲೇಯರ್: ಯುಜವೇಂದ್ರ ಸಿಂಗ್
ಗುಜರಾತ್ ಟೈಟನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಶಾರೂಖ್ ಖಾನ್, ಜೇಸನ್ ಹೋಲ್ಡರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ
ಇಂಪ್ಯಾಕ್ಟ್ ಪ್ಲೇಯರ್: ಸಾಯಿ ಕಿಶೋರ್