IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ʼಫ್ರೀ ರೈಡ್ʼ ಆಫರ್ ನೀಡಿ ಅಭಿಮಾನ ಮೆರೆದ ಬೆಂಗಳೂರಿನ ಆಟೋ ಚಾಲಕ!
RCB vs SRH: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳಿಗಾಗಿ ಆಟೋ ಚಾಲಕರೊಬ್ಬರು ಫ್ರೀ ರೈಡ್ ಆಫರ್ ನೀಡಿದ್ದು, ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳು ಮುಖಾಮುಖಿಯಾಗಿವೆ. ಹೋಮ್ ಗ್ರೌಂಡ್‌ನಲ್ಲಿ ಮೊದಲ ಮ್ಯಾಚ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ಅಭಿಮಾನಿಗಳ ಉತ್ಸಾಹ ಮುಗಿಲುಮುಟ್ಟಿದೆ. ಈ ನಡುವೆ ಪಂದ್ಯ ವೀಕ್ಷಿಸಲು ಆಗಮಿಸಿದ ಆರ್‌ಸಿಬಿ ಅಭಿಮಾನಿಗಳಿಗೆ ಆಟೋ ಚಾಲಕರೊಬ್ಬರು ಫ್ರೀ ರೈಡ್ ಆಫರ್ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಹೌದು, ಪಂದ್ಯ ವೀಕ್ಷಿಸಲು ಆರ್‌ಸಿಬಿ ಜೆರ್ಸಿ ಧರಿಸಿ ಬರುವ ಅಭಿಮಾನಿಗಳಿಗೆ ತಮ್ಮ ಆಟೋದಲ್ಲಿ ಉಚಿತ ಪ್ರಯಾಣದ ಆಫರ್ ಅನ್ನು ಚಾಲಕ ನೀಡಿದ್ದಾರೆ. ಆಟೋ ಚಾಲಕನ ಆಫರ್ ಕುರಿತ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್‌ಸಿಬಿ ಜೆರ್ಸಿ ಧರಿಸಿದವರಿಗೆ ಫ್ರೀ ರೈಡ್
ಆರ್‌ಸಿಬಿ ಮೇಲಿನ ಬೆಂಗಳೂರು ಆಟೋ ಚಾಲಕರೊಬ್ಬರ ಅಭಿಮಾನದ ಬಗ್ಗೆ ಮಹಿಕಾ ಜಾಧವ್ ಎಂಬುವವರು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. RCB vs SRH match day, "Free Ride if you Are wearing RCB Jerseyʼ, E sala Cup namdu 2.0, RCB Forever" ಎಂದು ಕೈಬರಹದ ಚೀಟಿಯನ್ನು ಆಟೋದಲ್ಲಿ ಅಂಟಿಸಲಾಗಿದೆ.
There’s something about cricket in India that you can’t really explain. It’s been there since childhood, in the background of every home, every conversation, every summer. And then IPL comes around and suddenly it’s everywhere again.
— Mahika Jadhav (@mahikaa101) March 28, 2026
And RCB fans, honestly, the most patient and… pic.twitter.com/KayCaxPHVO
ಭಾರತದಲ್ಲಿ ಕ್ರಿಕೆಟ್‌ಗೆ ಏನೋ ಒಂದು ವಿಶೇಷತೆ ಇದೆ, ಅದನ್ನು ನಿಜಕ್ಕೂ ವಿವರಿಸಲಾಗದು. ಇಂತಹ ವಾತಾವರಣ IPL ಬಂದಾಗ ಪ್ರತಿ ಮನೆಯಲ್ಲಿ, ಪ್ರತಿ ಸಂಭಾಷಣೆಯಲ್ಲಿ, ಬೇಸಿಗೆಯಲ್ಲಿ ಎಲ್ಲೆಡೆಗೂ ತುಂಬಿರುತ್ತದೆ. ಇನ್ನು ಆರ್‌ಸಿಬಿ ಫ್ಯಾನ್ಸ್ ಅತ್ಯಂತ ಪ್ರಾಮಾಣಿಕ ಹಾಗೂ ತಾಳ್ಮೆ ಇರುವ ಅಭಿಮಾನಿಗಳಾಗಿದ್ದಾರೆ. ಪ್ರತಿ ವರ್ಷ “ಈ ಸಲಾ ಕಪ್ ನಮ್ದೇ” ಎಂದು ಅದೇ ನಂಬಿಕೆ, ಅದೇ ಉತ್ಸಾಹದೊಂದಿಗೆ ತಂಡವನ್ನು ಬೆಂಬಲಿಸುತ್ತಾರೆ. ತಂಡದ ಬಗ್ಗೆ ಇರುವ ಇಂತಹ ಪ್ರೀತಿಯನ್ನು ಗೌರವಿಸಬೇಕು ಎಂದು ಮಹಿಕಾ ಜಾಧವ್ ತಿಳಿಸಿದ್ದಾರೆ.
IPL 2026: ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಯಾರು!
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರ್‌ಸಿಬಿ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ಯವಾಗಿದೆ. ತಂಡದ ಪ್ರದರ್ಶನ ಹೇಗೆ ಇರಲಿ, ಗೆಲ್ಲಲಿ ಅಥವಾ ಸೋಲಲಿ, ನಮ್ಮ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.