ಲಖನೌ: ಲಖನೌ ಸೂಪರ್ ಜಯಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (LSG vs DC) ನಡುವಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 5ನೇ ಪಂದ್ಯ ಏಪ್ರಿಲ್ ಒಂದರಂದು ಲಖನೌದಲ್ಲಿರುವ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎಲ್‌ಎಸ್‌ಜಿ ತಂಡವನ್ನು ರಿಷಭ್ ಪಂತ್ (Rishabh Pant) ನಾಯಕತ್ವ ವಹಿಸಲಿದ್ದಾರೆ. ಕಳೆದ ಸೀಸನ್‌ನ ನಿರಾಶಾದಾಯಕ ಪ್ರದರ್ಶನದಿಂದ ಹೊರಬರಲು ತಂಡ ಪ್ರಯತ್ನಿಸುತ್ತಿದೆ.
ಏಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ಜಾಶ್ ಇಂಗ್ಲಿಸ್ ಮತ್ತು ನಿಕೋಲಸ್ ಪೂರನ್ ಸೇರಿದಂತೆ ವಿದೇಶಿ ಆಟಗಾರರು ಬಲಿಷ್ಠವಾಗಿದ್ದಾರೆ. ಆದರೆ, ಬೌಲಿಂಗ್ ದಾಳಿ ಸ್ವಲ್ಪ ದುರ್ಬಲವಾಗಿ ಕಾಣಿಸುತ್ತಿದ್ದು, ಮೊಹಮ್ಮದ್ ಸಿರಾಜ್ ಅತ್ಯಂತ ಅನುಭವ ಹೊಂದಿರುವ ಆಯ್ಕೆಯಾಗಿದ್ದಾರೆ. ಬ್ಯಾಟಿಂಗ್ ಬಲವನ್ನು ಬಳಸಿಕೊಂಡು ಪಂದ್ಯವನ್ನು ಆಳಲು ಎಲ್‌ಎಸ್‌ಜಿ ಯತ್ನಿಸಲಿದೆ.
IPL 2026: ʻಇವರಿಂದಲೇ ನಾವು ಸೋಲಬೇಕಾಯಿತುʼ-ಸಿಎಸ್‌ಕೆ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಋತುರಾಜ್ ಗಾಯಕ್ವಾಡ್!
ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಷರ್ ಪಟೇಲ್ ಮುನ್ನಡೆಸುತ್ತಿದ್ದಾರೆ. 2025ರ ಸಾಲಿನ ಮುಖ್ಯ ಆಟಗಾರರನ್ನು ತಂಡ ಉಳಿಸಿಕೊಂಡಿದೆ. ಕೆಎಲ್ ರಾಹುಲ್, ಟ್ರಿಸ್ಟನ್ ಸ್ಟಬ್ಸ್, ಮಿಚೆಲ್ ಸ್ಟಾರ್ಕ್, ಕರುಣ್ ನಾಯರ್ ಮತ್ತು ಅಭಿಷೇಕ್ ಪೊರೆಲ್ ಪ್ರಮುಖವಾಗಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಸೀಸನ್‌ನಲ್ಲಿ ಐದನೇ ಸ್ಥಾನ ಪಡೆದಿದ್ದ ಡಿಸಿ, ಈ ಬಾರಿ ಉತ್ತಮ ಪ್ರದರ್ಶನ ನೀಡಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉತ್ಸುಕವಾಗಿದೆ.
ಪಿಚ್ ರಿಪೋರ್ಟ್
ಲಖನೌ ಹಾಗೂ ಡೆಲ್ಲಿ ನಡುವಣ ಪಂದ್ಯ ನಡಯುವ ಏಕನಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಸರಾಸರಿ ಮೊತ್ತ 150-160 ರನ್‌ಗಳು. ಇದನ್ನು ನೋಡಿದರೆ, ಇಲ್ಲಿ ಲೀಲಾ-ಜಾಲವಾಗಿ ಬ್ಯಾಟ್ ಬೀಸಿ ರನ್ ಗಳಿಸಲು ಸಾಧ್ಯವಿಲ್ಲ. ಚೇಸಿಂಗ್‌ನಲ್ಲಿ ಬ್ಯಾಟ್ ಮಾಡುವುದು ಕಷ್ಟವಾಗುತ್ತದೆ. ಮತ್ತೊಂದೆಡೆ ಸರಿಯಾದ ಲೈನ್ ಮತ್ತು ಲೆನ್ತ್ ಕಾಪಾಡುವ ಬೌಲರ್‌ಗಳು ಪಂದ್ಯದಲ್ಲಿನ ಎಲ್ಲಾ ಹಂತಗಳಲ್ಲೂ ಪ್ರಭಾವ ಬೀರುತ್ತಾರೆ ಮತ್ತು ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುವ ಸಾಧ್ಯತೆ ಹೊಂದಿರುತ್ತಾರೆ.
IPL 2026: ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!
ಪಂದ್ಯದ ವಿವರ
ಇಂಡಿಯನ್ ಪ್ರೀಮಿಯರ್ ಲೀಗ್ 2026
ಐದನೇ ಪಂದ್ಯ
ಲಖನೌ ಸೂಪರ್ ಜಯಂಟ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ದಿನಾಂಕ: ಏಪ್ರಿಲ್ 1, 2026
ಸಮಯ: ಸಂಜೆ 07: 30ಕ್ಕೆ
ಸ್ಥಳ: ಏಕನಾ ಕ್ರೀಡಾಂಗಣ, ಲಖನೌ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 07
ಲಖನೌ ಸೂಪರ್ ಜಯಂಟ್ಸ್ ಜಯ: 03
ಡೆಲ್ಲಿ ಕ್ಯಾಪಿಟಲ್ಸ್ ಜಯ: 04
IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ!
ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಲಖನೌ ಸೂಪರ್ ಜಯಂಟ್ಸ್: ಮಿಚೆಲ್ ಮಾರ್ಷ್, ಏಡೆನ್ ಮಾರ್ಕ್ರಮ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್) ಆಯುಷ್ ಬದೋನಿ, ಅಬ್ದುಲ್ ಸಮದ್, ಎನ್ರಿಕ್ ನೊರ್ಕಿಯಾ, ಮೊಹಮ್ಮದ್ ಸಿರಾಜ್, ಆವೇಶ್ ಖಾನ್, ಮಯಾಂಕ್ ಯಾದವ್, ದಿಗ್ವೇಶ್ ರಾಥಿ
ಇಂಪ್ಯಾಕ್ಟ್ ಪ್ಲೇಯರ್: ಶಹಬಾಝ್ ಅಹ್ಮದ್
ಡೆಲ್ಲಿ ಕ್ಯಾಪಿಟಲ್ಸ್: ಪಥುಮ್ ನಿಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಷರ್ ಪಟೇಲ್ (ನಾಯಕ), ಆಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಆಕಿಬ್ ನಬಿ, ಕುಲ್ದೀಪ್ ಯಾದವ್, ಲುಂಗಿ ಎನ್ಗಿಡಿ
ಇಂಪ್ಯಾಕ್ಟ್ ಪ್ಲೇಯರ್: ಟಿ ನಟರಾಜನ್