IPL 2026: ಐಪಿಎಲ್ ಇತಿಹಾಸದಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದೊಡ್ಡ ದಾಖಲೆಗಳು!
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ ಇಲ್ಲಿಯವರೆಗೂ ಸಾಕಷ್ಟು ದಾಖಲೆಗಳು ಮೂಡಿ ಬಂದಿವೆ. ಆದರೆ, ಪಂಜಾಬ್ ಕಿಂಗ್ಸ್ ತಂಡ ಬರೆದ ಮೂರು ದಾಖಲೆಗಳನ್ನು ಇಂದಿಗೂ ಮುರಿಯಲು ಯಾವುದೇ ತಂಡದಿಂದ ಸಾಧ್ಯವಾಗಿಲ್ಲ. ಇವುಗಳನ್ನು ಇಲ್ಲಿ ವಿವರಿಸಲಾಗಿದೆ.
ಯಾರಿಂದಲೂ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ ಈ 3 ದಾಖಲೆಗಳು. -
ನವದೆಹಲಿ: ಪಂಜಾಬ್ ಕಿಂಗ್ಸ್ (Punjab Kings) ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭವಾದ ಮೊದಲ ಸೀಸನ್‌ನಿಂದಲೇ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಮೈದಾನದಲ್ಲಿನ ಯಶಸ್ಸು ಹೆಚ್ಚು ಇರದಿದ್ದರೂ, ಈ ತಂಡವನ್ನು ಐಪಿಎಲ್ ಇತಿಹಾಸದಲ್ಲಿನ ಅತ್ಯಂತ ಮನರಂಜನಾತ್ಮಕ ಫ್ರಾಂಚೈಸಿಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಹಲವು ಸ್ಮರಣೀಯ ಪಂದ್ಯಗಳಲ್ಲಿ ಈ ತಂಡ ಭಾಗಿಯಾಗಿರುವುದು ಗಮನಾರ್ಹವಾಗಿದೆ.
ಕಳೆದ ವರ್ಷ ಶ್ರೇಯಸ್ ಅಯ್ಯರ್ ನಾಯಕತ್ವದ ತಂಡ, ತಮ್ಮ ಇತಿಹಾಸದಲ್ಲೇ ಕೇವಲ ಎರಡನೇ ಬಾರಿ ಐಪಿಎಲ್ ಫೈನಲ್‌ಗೆ ಪ್ರವೇಶಿಸಿತು. ಫೈನಲ್‌ವರೆಗೆ ಸಾಗುವ ಮಾರ್ಗದಲ್ಲಿ ಈ ತಂಡ ಹಲವು ರೋಚಕ ಪಂದ್ಯಗಳನ್ನು ಆಡಿದ್ದು, ಅವುಗಳು ಈಗ ಐಪಿಎಲ್ ಕತೆಗಳ ಭಾಗವಾಗಿವೆ. ಪಂಜಾಬ್ ಕಿಂಗ್ಸ್ ಬರೆದಿರುವ ಪ್ರಮುಖ ಮೂರು ದಾಖಲೆಗಳನ್ನು ಇಲ್ಲಿಯವರೆಗೂ ಯಾವುದೇ ತಂಡ ಬ್ರೇಕ್ ಮಾಡಿಲ್ಲ. ಅವುಗಳನ್ನು ಇಲ್ಲಿ ವಿವರಿಸಲಾಗಿದೆ.
IPL 2026: ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ನಡುವೆ ಗೆಲ್ಲುವ ನೆಚ್ಚಿನ ತಂಡ ಯಾವುದು?
ಐಪಿಎಲ್ ಟೂರ್ನಿಯಲ್ಲಿ ಮುರಿಯಲಾಗದ ಪಂಜಾಬ್ ಕಿಂಗ್ಸ್‌ನ 3 ದಾಖಲೆಗಳು
1.ಅತ್ಯಂತ ಕಡಿಮೆ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ದಾಖಲೆ
ಪಂಜಾಬ್ ಕಿಂಗ್ಸ್ ತಂಡ, ಐಪಿಎಲ್ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತವನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿಕೊಂಡ ದಾಖಲೆಯನ್ನೂ ಹೊಂದಿದೆ. ಈ ಸಾಧನೆ 2025ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೂಡಿ ಬಂದಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್ ಕಿಂಗ್ಸ್ ತಂಡವನ್ನು ಹರ್ಷಿತ್ ರಾಣಾ, ಸುನೀಲ್ ನರೇನ್ ಹಾಗೂ ವರುಣ್ ಚಕ್ರವರ್ತೀ ಅವರ ಬೌಲಿಂಗ್ ನೆರವಿನಿಂದ ಕೇವಲ 111 ರನ್‌ಗಳಿಗೆ ಆಲ್‌ಔಟ್ ಕೆಕೆಆರ್ ಆಲ್‌ಔಟ್ ಮಾಡಿತ್ತು.
ಕಡಿಮೆ ಗುರಿಯನ್ನು ನೀಡಿದ ಹೊರತಾಗಿಯೂ ಪಂಜಾಬ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಯುಜ್ವೇಂದ್ರ ಚಹಲ್ ತಮ್ಮ ಜೀವನದ ಅತ್ಯುತ್ತಮ ಸ್ಪೆಲ್ ಮಾಡಿ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಮಾರ್ಕೊ ಯೆನ್ಸನ್ ಮೂರು ವಿಕೆಟ್‌ಗಳನ್ನು ಪಡೆದು ಕೆಕೆಆರ್ ತಂಡವನ್ನು 62/3ರಿಂದ 95ಕ್ಕೆ ಆಲ್‌ಔಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ ತಂಡ 16 ರನ್‌ಗಳ ಅಚ್ಚರಿಯ ಜಯ ದಾಖಲಿಸಿತು.
IPL 2026: ಆರ್‌ಸಿಬಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅಭಿನಂದನ್ ಸಿಂಗ್ ಯಾರು!
2.ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ
ಪಂಜಾಬ್ ಕಿಂಗ್ಸ್, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್‌ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆಯನ್ನು ಹೊಂದಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 262 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟಿದ ಪಂಜಾಬ್, ಪ್ರತಿ ಓವರ್‌ಗೆ 13 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಎಂಟು ಬಾಲ್‌ಗಳು ಬಾಕಿ ಇರುವಾಗಲೇ ಎಂಟು ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆ ಸಮಯದಲ್ಲಿ ತಂಡದ ನಾಯಕರಾಗಿದ್ದ ಸ್ಯಾಮ್ ಕರನ್ ಅವರ ನೇತೃತ್ವದಲ್ಲಿ ಈ ಐತಿಹಾಸಿಕ ಸಾಧನೆ ಸಾಧ್ಯವಾಯಿತು.
ಈ ಗೆಲುವಿನಲ್ಲಿ ಪ್ರತಿಯೊಬ್ಬ ಬ್ಯಾಟ್ಸ್‌ಮನ್ ಕೂಡ ಕೊಡುಗೆ ನೀಡಿದರೂ, ಜಾನ್ ಬೈರ್‌ಸ್ಟೋ 48 ಬಾಲ್‌ಗಳಲ್ಲಿ 108 ರನ್‌ಗಳ ಇನಿಂಗ್ಸ್ ವಿಶೇಷವಾಗಿ ಗಮನಸೆಳೆಯಿತು. ಇವರ ಜೊತೆಗೆ ಪ್ರಭ್‌ಸಿಮ್ರನ್ ಸಿಂಗ್ 20 ಬಾಲ್‌ಗಳಲ್ಲಿ 54 ರನ್‌ಗಳ ಸ್ಫೋಟಕ ಆಟ ಮತ್ತು ಶಶಾಂಕ್ ಸಿಂಗ್ 28 ಬಾಲ್‌ಗಳಲ್ಲಿ ಅಜೇಯ 68 ರನ್ ಗಳಿಸಿದ್ದರು.
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್ ಹೇಝಲ್‌ವುಡ್!
3.ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ನಾಯಕರು
ಕಳೆದ 18 ಐಪಿಎಲ್ ಸೀಸನ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಕನಿಷ್ಠ ಒಂದು ಪಂದ್ಯವನ್ನು ನಾಯಕತ್ವ ವಹಿಸಿದ ಅತ್ಯಧಿಕ ಕ್ಯಾಪ್ಟನ್‌ಗಳ ದಾಖಲೆಯನ್ನು ಹೊಂದಿದೆ. ಒಟ್ಟು 17 ನಾಯಕರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಇವರಲ್ಲಿ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಆಡಂ ಗಿಲ್‌ಕ್ರಿಸ್ಟ್, ಶಿಖರ್ ಧವನ್, ಕುಮಾರ್ ಸಂಗಕ್ಕಾರ, ಮತ್ತು ಮಹೇಲಾ ಜಯವರ್ಧನೆ ಪ್ರಮುಖರು.
ಆದರೆ, ಈ 17 ನಾಯಕರಲ್ಲಿ ಕೇವಲ ಇಬ್ಬರು ಮಾತ್ರ ಫ್ರಾಂಚೈಸಿಯನ್ನು ಐಪಿಎಲ್ ಫೈನಲ್‌ಗೆ ತಲುಪಿಸಲು ಯಶಸ್ವಿಯಾದರು. 2014ರಲ್ಲಿ ಜಾರ್ಜ್ ಬೈಲಿ ಮತ್ತು 2025ರಲ್ಲಿ ಶ್ರೇಯಸ್ ಅಯ್ಯರ್. ಆದರೆ, ಈ ಎರಡೂ ಬಾರಿ ಪಂಜಾಬ್ ಕಿಂಗ್ಸ್ ಫೈನಲ್‌ನಲ್ಲಿ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.