ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಪ್ (Mohammad Kaif) ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರಿಗೆ ಬದಲಾಗುತ್ತಿರುವ ಕ್ರಿಕೆಟ್‌ಗೆ ಹೊಂದಿಕೊಳ್ಳಲು ತಮ್ಮ ಬ್ಯಾಟಿಂಗ್ ಶೈಲಿಯನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಕೂಡ ಇದೇ ರೀತಿ ಸ್ಪಿನ್ನರ್‌ಗಳ ಎದುರು ಹೆಣಗಾಡುತ್ತಿದ್ದರು. ಆದರೆ, ಅವರು ನೆಟ್ಸ್‌ನಲ್ಲಿ ಕಠಿಣ ಪರಿಶ್ರಮಪಡುವ ಮೂಲಕ ಹೊಸ ಹೊಸ ಶಾಟ್ಸ್ ಹಾಗೂ ಸ್ಪಿನ್ನರ್‌ಗಳಿಗೆ ಆಕ್ರಮಣಕಾರಿಯಾಗಿ ಆಡುವುದನ್ನು ಕಲಿತಿದ್ದಾರೆ. ಇದೇ ಹಾದಿಯನ್ನು ಅಜಿಂಕ್ಯ ರಹಾನೆ ಅನುಸರಿಸಬೇಕೆಂದು ಹೇಳಿದ್ದಾರೆ.
ಇಂಡಿಯಾ ಟುಡೇ ಜೊತೆ ಮಾತನಾಡಿದ ಕೈಫ್, “ವಿರಾಟ್ ಕೊಹ್ಲಿ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು. ಸ್ಪಿನ್ನರ್‌ಗಳ ವಿರುದ್ಧ ಅವರ ಸ್ಟ್ರೈಕ್ ರೇಟ್ ಕಡಿಮೆಯಾಗುತ್ತಿತ್ತು. ಆದರೆ ಅವರು ಸ್ಪಿನ್ನರ್‌ಗಳ ಎದುರು ಆಕ್ರಮಣಕಾರಿಯಾಗಿ ಆಡಿ ಹೊಸ ಶಾಟ್‌ಗಳನ್ನು ಕಂಡುಹಿಡಿದು ಎಲ್ಲರ ಬಾಯಿ ಮುಚ್ಚಿಸಿದರು. ರಹಾನೆ ಬಳಿ ಸ್ಪಿನ್ನರ್‌ಗಳ ವಿರುದ್ಧ ಸ್ಲಾಗ್ ಸ್ವೀಪ್ ಮಾತ್ರ ಇದೆ. ಅವರು ಡೌನ್ ದ ಗ್ರೌಂಡ್ ಪವರ್ ಹಿಟ್ಟಿಂಗ್ ಮೇಲೆ ಕೆಲಸ ಮಾಡಬೇಕು. ಸ್ಪಿನ್ನರ್‌ಗಳ ವಿರುದ್ಧ ತಮ್ಮ ಶಾಟ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು. ವಿರಾಟ್ ಕೊಹ್ಲಿ ಎಲ್ಲರಿಗೂ ಉತ್ತಮ ಉದಾಹರಣೆ ನೀಡಿದ್ದಾರೆ, ರಹಾನೆ ಕೂಡ ಅದರಿಂದ ಕಲಿಯಬಹುದು,” ಎಂದು ತಿಳಿಸಿದ್ದಾರೆ.
IPL 2026: ಎಂಎಸ್ ಧೋನಿ ನಿವೃತ್ತಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಗಂಗೂಲಿ, ಚೋಪ್ರಾ!
ಕಳೆದ ಸೀಸನ್‌ನಲ್ಲಿ ಅಜಿಂಕ್ಯ ರಹಾನೆ ಉತ್ತಮ ಆರಂಭ ಪಡೆದರೂ ಅವುಗಳನ್ನು ದೊಡ್ಡ ಇನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಮಾತನಾಡಿದ ಕೈಫ್, “ರಹಾನೆ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಸಂಪೂರ್ಣವಾಗಿ ಟೂರ್ನಿಯನ್ನು ನೋಡಿದರೆ, ಅವರು ಬಹುತೇಕ ಪ್ರತಿಯೊಂದು ಪಂದ್ಯದಲ್ಲೂ 30-40 ರನ್‌ಗಳನ್ನು ಗಳಿಸಿದರು, ಆದರೆ ಒಂದೇ ‘ಮ್ಯಾನ್ ಆಫ್ ದ ಮ್ಯಾಚ್’ ಪ್ರಶಸ್ತಿಯೂ ಬಂದಿಲ್ಲ. ಆದ್ದರಿಂದ ಅವರ ಬಗ್ಗೆ ಇನ್ನೂ ಪ್ರಶ್ನೆಗಳು ಉಳಿದಿವೆ. 30-40 ರನ್‌ಗಳು ಸರಿಯೇ, ಆದರೆ ಸ್ಪಿನ್ನರ್‌ಗಳು ಬಂದ ತಕ್ಷಣವೇ ಅವರು ಔಟ್ ಆಗುತ್ತಾರೆ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
IPL 2026: 13,600 ಕೋಟಿ ರುಗೆ ಅಮೆರಿಕಾ ಮೂಲದ ಉದ್ಯಮಿ ಪಾಲಾದ ರಾಜಸ್ಥಾನ್ ರಾಯಲ್ಸ್?
ಕೆಕೆಆರ್ ತಂಡದ ಭವಿಷ್ಯದ ನಾಯಕ ರಿಂಕು ಸಿಂಗ್?
ಮೊಹಮ್ಮದ್ ಕೈಫ್ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡ, ರಿಂಕು ಸಿಂಗ್ ಅವರನ್ನು ಭವಿಷ್ಯದ ನಾಯಕನಾಗಿ ರೂಪಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕೆಕೆಆರ್ ಈಗ ರಿಂಕು ಸಿಂಗ್ ಅವರನ್ನು ಮುಂದಿನ ನಾಯಕನಾಗಿ ಬೆಳೆಸಬೇಕಾದ ಸಮಯ ಬಂದಿದೆ. ಅವರು ಎಲ್ಲಾ ಸ್ವರೂಪಗಳಲ್ಲಿ ಆಡಬಲ್ಲ ಆಟಗಾರ. ಭಾರತ ಪರ ಟೆಸ್ಟ್ ಕ್ರಿಕೆಟ್ ಆಡದಿದ್ದರೂ, ವಿವಿಧ ಮಾದರಿಗಳಲ್ಲಿ ಅವರು ಕೊಡುಗೆ ನೀಡಬಲ್ಲರು. ನಾನು ಉತ್ತರ ಪ್ರದೇಶದವನು, ಅವರ ರಾಜ್ಯ ತಂಡಕ್ಕೆ ನೀಡಿರುವ ಕೊಡುಗೆ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಅನೇಕ ಬ್ಯಾಟ್ಸ್‌ಮನ್‌ಗಳು ರನ್‌ಗಳನ್ನು ಮಾಡುತ್ತಾರೆ, ಆದರೆ ಅವರ ರನ್‌ಗಳು ಬಹುಪಾಲು ಗೆಲುವಿನ ಪಂದ್ಯಗಳಲ್ಲಿ ಬಂದಿವೆ. ಅವರು ಈಗಲೇ ನಾಯಕತ್ವಕ್ಕೆ ಸಿದ್ಧರಾಗಿದ್ದಾರೆ,” ಎಂದು ಕೈಫ್ ಹೇಳಿದರು.