ನವದೆಹಲಿ: ಮುಂದಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಟ್ರೇಡ್ ಡೀಲ್ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ರಯತ್ನಿಸುತ್ತಿದೆ. ಈ ಬಗ್ಗೆ ರಾಜಸ್ಥಾನ್ ಫ್ರಾಂಚೈಸಿ ಮತ್ತು ಚೆನ್ನೈ ಫ್ರಾಂಚೈಸಿ ನಡುವೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಅವರನ್ನು ಕರೆಸಿಕೊಳ್ಳಲು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತ್ಯಾಗ ಮಾಡಲು ಸಿದ್ದ ಎಂದು ತಿಳಿಸಿದ್ದಾರೆ. ಸಿಎಸ್‌ಕೆ ಸಂಜುಗಾಗಿ ಜಡೇಜಾ ಮತ್ತು ಸ್ಯಾಮ್ ಕರನ್ ಅವರನ್ನು ಆರ್‌ಆರ್‌ಕೆ ಕಳುಹಿಸಲು ಸಜ್ಜಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಎಂಎಸ್ ಧೋನಿ ನಿವೃತ್ತಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್ ಅವರನ್ನು ಮಾದರಿ ಆಟ ಎಂದು ನಂಬುತ್ತಿದೆ. ಈ ಕಾರಣದಿಂದಲೇ ಚೆನ್ನೈ ಫ್ರಾಂಚೈಸಿ ಕೇರಳ ಮೂಲಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ ಅನ್ನು ಟ್ರೇಡ್ ಮಾಡಿಕೊಳ್ಳಲು ಆಸಕ್ತಿ ತೋರುತ್ತಿದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್ ಕೈಫ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡುವುದು ಎಂಎಸ್ ಧೋನಿಯ ಗುರಿಯಾಗಿದೆ. ಹಾಗಾಗಿ ಕಳೆದ ಹಲವು ವರ್ಷಗಳಲ್ಲಿ ಸಿಎಸ್‌ಕೆಗೆ ಕೀ ಆಟಗಾರನಾಗಿದ್ದ ರವೀಂದ್ರ ಜಡೇಜಾ ಅವರನ್ನು ತ್ಯಾಗ ಮಾಡಲು ಸಿದ್ದರಾಗಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IPL 2026: ಚೆನೈ ಸೂಪರ್ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್, ರಾಜಸ್ಥಾನ್ ಜೊತೆ ಟ್ರೇಡ್ ಡೀಲ್‌ಗೆ ಮುಂದಾದ ಸಿಎಸ್‌ಕೆ!
"ಸಿಎಸ್‌ಕೆ ತಂಡವನ್ನು ಚಾಂಪಿಯನ್ಸ್ ಮಾಡುವುದು ಎಂಎಸ್ ಧೋನಿಯ ದೊಡ್ಡ ಗುರಿ. ಅವರು ಮತ್ತೆ ಆಡಲು ಬಂದರೆ, ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 10ನೇ ಸ್ಥಾನಕ್ಕೆ ಕುಸಿದಿತ್ತು ಎಂಬ ಅಂಶ ಮನಸಿಗೆ ಬರುತ್ತದೆ. ಅವರು ಹೆಮ್ಮೆಯ ವ್ಯಕ್ತಿ. ಹಾಗಾಗಿ ಅವರು ಚೆನ್ನೈ ತಂಡಕ್ಕೆ ಮತ್ತೊಂದು ಟ್ರೋಫಿ ಗೆದ್ದುಕೊಡಬೇಕೆಂದು ಬಯಸುತ್ತಿದ್ದಾರೆ. ಇದು ಅವರ ದೊಡ್ಡ ಗುರಿ. ಈಗ ಇರುವ ತಂಡ ಆಟಗಾರರ ಆಧಾರದ ಮೇಲೆ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಿಲ್ಲ," ಎಂದು ಕೈಫ್ ತಿಳಿಸಿದ್ದಾರೆ.
"ತಂಡದ ಒಳಿತಿಗಾಗಿ ರವೀಂದ್ರ ಜಡೇಜಾ ಅವರನ್ನು ತ್ಯಾಗ ಮಾಡಬೇಕಾದ ಪರಿಸ್ಥಿತಿ ಬಂದರೆ, ಅದನ್ನು ಎಂಎಸ್ ಧೋನಿ ಮಾಡುತ್ತಾರೆ. ಧೋನಿ ಸ್ನೇಹದ ಆಧಾರದ ಕಾರ್ಯನಿರ್ವಹಿಸುತ್ತಾರೆ ಮತ್ತು ಇದರ ಆಧಾರದ ಮೇಲೆ ಒಂದೆರಡು ಹೆಚ್ಚುವರಿ ಅವಕಾಶಗಳನ್ನು ನೀಡುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಅದರ ಅರ್ಥ ಅವರ ಗಮನ ಗೆಲ್ಲುವುದರ ಮೇಲೆ ಹೋಗುತ್ತದೆ ಎಂದಲ್ಲ. ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡುವುದು ಗುರಿಯಾಗಿದೆ. ಅದಕ್ಕಾಗಿಯೇ ಅವರು ಜಡೇಜಾ ಅವರನ್ನು ಕೈಬಿಡುತ್ತಾರೆ. ತಂಡಕ್ಕೆ ಉತ್ತಮ ಆಯ್ಕೆ ಸಿಗಬಹುದು ಎಂದು ಧೋನಿ ಭಾವಿಸಿದರೆ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ," ಎಂದು ಮೊಹಮ್ಮದ್ ಕೈಫ್ ಟೀಕಿಸಿದ್ದಾರೆ.
ಎಂಎಸ್ ಧೋನಿ ಬಳಿಕ ಸಂಜು ಮಾತನಾಡಿರಬೇಕು
"ಸಂಜು ಸ್ಯಾಮ್ಸನ್ ಸಿಎಸ್‌ಕೆಗೆ ಸೇರ್ಪಡೆಯಾಗುವುದಾದರೆ, ಇಲ್ಲಿ ತುಂಬಾ ಕರೆಗಳು ಇರಲಿವೆ. ಸಂಜು ಅವರಿಗೆ ಖಂಡಿತವಾಗಿಯೂ ಕರೆಗಳು ಇರುತ್ತವೆ. ಪರದೆಯ ಹಿಂದೆ ತುಂಬಾ ಕರೆಗಳು ಇರುತ್ತವೆ. ಸಿಎಸ್‌ಕೆ ಜೊತೆ ಸ್ಯಾಮ್ಸನ್ ಮಾತನಾಡಬಹುದು, ಬಹುಶಃ ಧೋನಿ ಬಳಿಯೂ. ತಂಡವನ್ನು ಧೋನಿ ಮುನ್ನಡೆಸುತ್ತಾರೆ, ಸಿಎಸ್‌ಕೆ ಸಂಜು ಬಂದರೆ ಅವರೇ ಭವಿಷ್ಯದ ನಾಯಕ. ಆ ಮೂಲಕ ಇದು ಧೋನಿ ಕೊನೆಯ ವರ್ಷ ಎಂದು ಭಾವಿಸಬಹುದು. ಈ ಕಾರಣದಿಂದಲೇ 2012ರಿಂದ ಆಡುತ್ತಿರುವ ರವೀಂದ್ರ ಜಡೇಜಾ ಅವರನ್ನು ಬಿಡುತ್ತಿರುವುದು," ಎಂದು ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.