ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026 Mini Auction: ಸ್ಯಾಮ್ಸನ್ ಬೇಕೆಂದರೆ ಇಬ್ಬರು ಆಟಗಾರರನ್ನು ಬಿಟ್ಟುಕೊಡುವಂತೆ ಚೆನ್ನೈಗೆ ರಾಜಸ್ಥಾನ್‌ ಬೇಡಿಕೆ

ಕಳೆದ ಕೆಲವು ದಿನಗಳಿಂದ ಕ್ರಿಕ್‌ಬಜ್ ವರದಿ ಮಾಡಿದಂತೆ, ಪ್ರಸ್ತುತ ಮುಂಬೈನಲ್ಲಿರುವ ರಾಜಸ್ಥಾನ ರಾಯಲ್ಸ್‌ನ ಯುಕೆ ಮೂಲದ ಪ್ರಮುಖ ಮಾಲೀಕ ಮನೋಜ್ ಬಡಾಲೆ ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ನಿಲುವಿನಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ. ಬ್ರೆವಿಸ್ ಅವರನ್ನು ಬಿಟ್ಟು ವ್ಯವಹಾರದಲ್ಲಿ ಬೇರೆ ಆಟಗಾರನನ್ನು ಸೇರಿಸಿಕೊಳ್ಳುವ ಉದ್ದೇಶ ಅವರಿಗಿಲ್ಲ.

ಸ್ಯಾಮ್ಸನ್ ಬೇಕೆಂದರೆ ಜಡೇಜಾ ಬಿಟ್ಟುಕೊಡುವಂತೆ ರಾಜಸ್ಥಾನ್‌ ಬೇಡಿಕೆ

ಸ್ಯಾಮ್ಸನ್ ಬೇಕೆಂದರೆ ಜಡೇಜಾ ಬಿಟ್ಟುಕೊಡುವಂತೆ ರಾಜಸ್ಥಾನ್‌ ಬೇಡಿಕೆ -

Abhilash BC
Abhilash BC Nov 9, 2025 12:30 PM

ಜೈಪುರ: ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜಿಗೂ(IPL 2026 Mini Auction) ಮುನ್ನ ಟ್ರೇಡ್‌ ವಿಂಡೋ ಓಪನ್ ಆಗಿದ್ದು, ಹಲವು ಸ್ಟಾರ್‌ ಆಟಗಾರರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಈ ಮಧ್ಯೆ ಸಂಜು ಸ್ಯಾಮ್ಸನ್(Sanju Samson) ಅವರನ್ನು ಕರೆ ತರಲು ಚೆನ್ನೈ ಸೂಪರ್ ಕಿಂಗ್ಸ್(IPL 2026 Mini Auction) ಫ್ರಾಂಚೈಸಿ ಶತಾಯಗತಾಯ ಪ್ರಯತ್ನದಲ್ಲಿದೆ. ಇದರ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ.

ಸಂಜು ಸ್ಯಾಮ್ಸನ್‌ ಅವರನ್ನು ನೀಡಬೇಕಿದ್ದರೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರವೀಂದ್ರ ಜಡೇಜಾ ಮತ್ತು ಮತೋರ್ವ ಆಟಗಾರನನ್ನು ಬಿಟ್ಟುಕೊಡಬೇಕು ಎಂದು ಬೇಡಿಕೆ ಇಟ್ಟಿರುವುದಾಗಿ ವರದಿಯಾಗಿದೆ. ಜಡೇಜಾ ಮತ್ತು ಸ್ಯಾಮ್ಸನ್ ಇಬ್ಬರೂ 18 ಕೋಟಿ ರೂ. ಮೌಲ್ಯದ ಆಟಗಾರರಾಗಿದ್ದಾರೆ. ಹೀಗಾಗಿ ಆಟಗಾರರ ವಿನಿಮಯ ಕೂಡ ಸುಗಮವಾಗಲಿದೆ.

ಆದಾಗ್ಯೂ, ರಾಜಸ್ಥಾನ ರಾಯಲ್ಸ್ ತಂಡವು ನೇರ ವಿನಿಮಯಕ್ಕೆ ಇನ್ನೂ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಫ್ರಾಂಚೈಸಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್‌ಗೂ ಬೇಡಿಕೆ ಇಟ್ಟಿದೆ ಎಂದು ತಿಳಿದುಬಂದಿದೆ. ಇದು ಅಂತಿಮವಾಗಿ ಸಮಸ್ಯೆಯಾಗಬಹುದು.

ಇದನ್ನೂ ಓದಿ IPL 2026 Mini Auction: ಸಂಜು ಅಥವಾ ಸುಂದರ್?; ಐಪಿಎಲ್ 2026 ಮಿನಿ ಹರಾಜಿಗೂ ಮುನ್ನ ಸಿಎಸ್‌ಕೆ ಸಿಇಒ ಮಹತ್ವದ ಹೇಳಿಕೆ

ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನಂತಹ ತಂಡಗಳೊಂದಿಗೆ ತಮ್ಮ ಸಂವಹನ ಮಾರ್ಗಗಳನ್ನು ಮುಕ್ತವಾಗಿರಿಸಿಕೊಳ್ಳುವುದರ ಜೊತೆಗೆ, ರಾಯಲ್ಸ್ ಆಡಳಿತ ಮಂಡಳಿಯು ಸನ್‌ರೈಸರ್ಸ್‌ನ ಕೆಲ ಆಟಗಾರರಿಗ ಗಾಳ ಹಾಕಿದೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಕ್ರಿಕ್‌ಬಜ್ ವರದಿ ಮಾಡಿದಂತೆ, ಪ್ರಸ್ತುತ ಮುಂಬೈನಲ್ಲಿರುವ ರಾಜಸ್ಥಾನ ರಾಯಲ್ಸ್‌ನ ಯುಕೆ ಮೂಲದ ಪ್ರಮುಖ ಮಾಲೀಕ ಮನೋಜ್ ಬಡಾಲೆ ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ನಿಲುವಿನಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ. ಬ್ರೆವಿಸ್ ಅವರನ್ನು ಬಿಟ್ಟು ವ್ಯವಹಾರದಲ್ಲಿ ಬೇರೆ ಆಟಗಾರನನ್ನು ಸೇರಿಸಿಕೊಳ್ಳುವ ಉದ್ದೇಶ ಅವರಿಗಿಲ್ಲ.

ಸನ್‌ರೈಸರ್ಸ್ ತಂಡದ ಪರ ಆಡುವ ಆಟಗಾರರ ಬಗ್ಗೆ ಹೇಳುವುದಾದರೆ, ಹೈದರಾಬಾದ್ ತಂಡವು ಸ್ಯಾಮ್ಸನ್ ಬಗ್ಗೆ ಹೆಚ್ಚು ಉತ್ಸುಕವಾಗಿಲ್ಲ ಎಂದು ತಿಳಿದುಬಂದಿದೆ. ಏಕೆಂದರೆ, ಫ್ರ್ಯಾಂಚೈಸ್‌ನಲ್ಲಿ ಮೂವರು ಸ್ಥಾಪಿತ ಆರಂಭಿಕ ಆಟಗಾರರು ಇದ್ದಾರೆ. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶಾನ್. ಈ ಆಟಗಾರರನ್ನು ಹರಾಜಿಗೆ ಬಿಡುವ ಯಾವುದೇ ಉದ್ದೇಶವಿಲ್ಲ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.