ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಚೆನೈ ಸೂಪರ್‌ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್‌, ರಾಜಸ್ಥಾನ್‌ ಜೊತೆ ಟ್ರೇಡ್‌ ಡೀಲ್‌ಗೆ ಮುಂದಾದ ಸಿಎಸ್‌ಕೆ!

ಮುಂದಿನ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ಎಲ್ಲಾ ಫ್ರಾಂಚೈಸಿಗಳು ಮಿನಿ ಹರಾಜಿಗೆ ತಯಾರಿ ನಡೆಸುತ್ತಿವೆ. ಇದರ ನಡುವೆ ಕೆಲ ಫ್ರಾಂಚೈಸಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇದರ ನಡುವೆ ಚೆನ್ನೈ ಸೂಪರ್‌ ಕಿಂಗ್ಸ್‌, ಸಂಜು ಸ್ಯಾಮ್ಸನ್‌ ಅವರನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್‌?

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರಲಿರುವ ಸಂಜು ಸ್ಯಾಮ್ಸನ್‌? -

Profile
Ramesh Kote Nov 7, 2025 10:12 PM

ನವದೆಹಲಿ: ಮುಂದಿನ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಮಿನಿ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲಿರುವ ಹಾಗೂ ಬಿಡುಗಡೆ ಮಾಡಲಿರುವ ಆಟಗಾರ್ತಿಯರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ನವೆಂಬರ್‌ 15 ರಂದು ಕೊನೆಯ ದಿನಾಂಕವಾಗಿದೆ. ಹಾಗಾಗಿ ತಂಡಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಇದರ ನಡುವೆ ಐದು ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡ, ರಾಜಸ್ಥಾನ್‌ ರಾಯಲ್ಸ್‌ ತಂಡದಿಂದ ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಟ್ರೇಡ್‌ ಡೀಲ್‌ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಸಂಜು ಸ್ಯಾಮ್ಸನ್‌ ಅವರ ಬಳಿ ಸಹಿ ಹಾಕಿಸಕೊಳ್ಳಲಿದೆ ಎಂದು ವರದಿಯಾಗಿತ್ತು. ಇದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡ ಟ್ರಿಸ್ಟನ್‌ ಸ್ಟಬ್ಸ್‌ ಅವರ ಬದಲು ಸಂಜು ಸ್ಯಾಮ್ಸನ್‌ ಅವರನ್ನು ಕರೆಸಿಕೊಳ್ಳಲು ಬಯಸಿತ್ತು.ಆದರೆ, ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೂಡ, ಸಂಜು ಸ್ಯಾಮ್ಸನ್‌ ಅವರನ್ನು ಖರೀದಿಸುವ ರೇಸ್‌ಗೆ ಮರಳಿದೆ ಎಂದು ಹೇಳಲಾಗುತ್ತಿದೆ.

IPL 2026: ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ನಿಂದ ಹೊರ ಬೀಳಲಿರುವ ಆಟಗಾರರು!

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ರಾಜಸ್ಥಾನ್ ರಾಯಲ್ಸ್‌ನಿಂದ ಸಂಜು ಸ್ಯಾಮ್ಸನ್‌ರನ್ನು ಸಹಿ ಮಾಡಲು ಸಿಎಸ್‌ಕೆ ಮತ್ತೆ ಮಾತುಕತೆಗಳನ್ನು ತೆರೆದಿದೆ. ಐದು ಬಾರಿ ಚಾಂಪಿಯನ್ಸ್‌ ತಂಡದ ದೊಡ್ಡ ಆಟಗಾರನೊಬ್ಬ ಆರ್‌ಆರ್‌ಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರಬಹುದು ಎಂದು ವರದಿ ಹೇಳುತ್ತಿರುವುದರಿಂದ, ಇದು ಒಂದು ಉನ್ನತ ಮಟ್ಟದ ವ್ಯಾಪಾರ ಒಪ್ಪಂದವಾಗಿದ್ದರೆ ಆಶ್ಚರ್ಯವೇನಿಲ್ಲ.

ರಾಜಸ್ಥಾನ್ ರಾಯಲ್ಸ್‌ಗೆ ಸ್ಥಳಾಂತರಗೊಳ್ಳಲು ಅವರು ಒಪ್ಪುತ್ತಾರೆಯೇ ಎಂದು ಫ್ರಾಂಚೈಸಿ ಈ ಆಟಗಾರನನ್ನು ಕೇಳಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

IPL 2026: ಎಂಎಸ್‌ ಧೋನಿ ಮುಂದಿನ ಐಪಿಎಲ್‌ ಟೂರ್ನಿಯಲ್ಲಿ ಆಡಲಿದ್ದಾರೆಂದ ಸಿಎಸ್‌ಕೆ ಸಿಇಒ!

ರಾಜಸ್ಥಾನ್‌ ರಾಯಲ್ಸ್‌ ಮಾಲೀಕ ಮನೋಜ್ ಬದಲೆ ಇತ್ತೀಚೆಗೆ ಲಂಡನ್‌ನಿಂದ ಮುಂಬೈಗೆ ಆಗಮಿಸಿದ್ದು, ಸಂಜು ಸ್ಯಾಮ್ಸನ್ ವಿರುದ್ಧ ತಮ್ಮ ಆಯ್ಕೆಗಳನ್ನು ಮುಕ್ತವಾಗಿಡುವ ನಿರೀಕ್ಷೆಯಿದೆ. ಅವರು ಡಿಸಿ, ಸಿಎಸ್‌ಕೆ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಲಖನೌ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ) ಸೇರಿದಂತೆ ಹಲವು ಫ್ರಾಂಚೈಸಿಗಳೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.

2026ರ ಐಪಿಎಲ್‌ನಲ್ಲಿ ಆಡಲಿರುವ ಎಂಎಸ್‌ ಧೋನಿ

ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಲಿದ್ದಾರೆಂದು ಸಿಎಸ್‌ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥ್‌ ಖಚಿತಪಡಿಸಿದ್ದಾರೆ. ಹಾಗಾಗಿ ಸದ್ಯದಲ್ಲಿ ಎಂಎಸ್‌ ಧೋನಿ ಅವರು ಐಪಿಎಲ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ ಇಲ್ಲ. ಒಂದು ವೇಳೆ ಸಂಜು ಸ್ಯಾಮ್ಸನ್‌ ಅವರು ಸಿಎಸ್‌ಕೆ ಬಂದರೆ, ಅವರಿಗೆ ನಾಯಕತ್ವವನ್ನು ನೀಡಬಹುದು. 2025ರ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ನಿರಾಶಾದಾಯಕ ಅಭಿಯಾನವನ್ನು ಹೊಂದಿತ್ತು. ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನ 10 ನೇ ಸ್ಥಾನಕ್ಕೆ ಕುಸಿದಿತ್ತು.