ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಡಗೌಟ್‌ನಲ್ಲಿ ಫೋನ್‌ ಬಳಸಿದ್ದ ರಾಜಸ್ಥಾನ್‌ ರಾಯಲ್ಸ್‌ ಮ್ಯಾನೇಜರ್‌ಗೆ ಒಂದು ಲಕ್ಷ ರು ದಂಡ!

IPL 2026: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಬಳಿಸಿದ್ದ ಕಾರಣ ರಾಜಸ್ಥಾನ್‌ ರಾಯಲ್ಸ್‌ ತಂಡದ ಮ್ಯಾನೇಜರ್‌ ರೋಮಿ ಭಿಂದರ್‌ಗೆ ಒಂದು ಲಕ್ಷ ರು ದಂಡವನ್ನು ವಿಧಿಸಲಾಗಿದ ಬಿಸಿಸಿಐ ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ನೀಡಿದೆ.

ಆರ್‌ಆರ್‌ ಮ್ಯಾನೇಜರ್‌ ರೋಮಿ ಭಿಂದರ್‌ಗೆ ಒಂದು ಲಕ್ಷ ರು ದಂಡ.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ (IPL 2026) ಪಂದ್ಯವೊಂದರಲ್ಲಿ ಮೊಬೈಲ್‌ ಫೋನ್‌ ಬಳಸಿ ಐಪಿಎಲ್‌ ಹಾಗೂ ಪಂದ್ಯದ ಅಧಿಕಾರಿಗಳಿಗೆ ಸಂಬಂಧಿಸಿದ ನಿಯಮವನ್ನು ಉಲ್ಲಂಘಿಸಿದ ಕಾರಣ ರಾಜಸ್ಥಾನ್‌ ರಾಯಲ್ಸ್‌ ತಂಡದ ಮ್ಯಾನೇಜರ್‌ ರೋಮಿ ಭಿಂದರ್‌ (Romi Bhinder) ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಒಂದು ಲಕ್ಷ ರು ದಂಡ ಹಾಗೂ ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ನೀಡಿದ್ದಾರೆ.

ಗುವಾಹಟಿಯ ಬರ್ಸಪರ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ ಪಂದ್ಯದಲ್ಲಿ ಡಗೌಟ್‌ನಲ್ಲಿ ಕುಳಿತಿದ್ದ ರೋಮಿ ಭಿಂದರ್‌ ಅವರು ಮೊಬೈಲ್‌ ಫೋನ್‌ ಬಳಸುತ್ತಿದ್ದಿದ್ದು ಖಚಿತವಾಗಿದೆ ಹಾಗೂ ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ರೋಮಿ ಭಿಂದರ್‌ ಅವರು ಬಿಸಿಸಿಐಯ ಭಷ್ರಚಾರ ನಿಯಂತ್ರಣ ಮಂಡಳಿ ಮುಂದ ವಿವರಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಇಂಡಿಯಾ ಟುಡೇಗೆ ಖಚಿತಪಡಿಸಿದ್ದಾರೆ.

IPL 2026: ಆರ್‌ಸಿಬಿ ಪಂದ್ಯದ ವೇಳೆ ಡಗೌಟ್‌ನಲ್ಲಿ ಫೋನ್‌ ಬಳಸಿದ ರಾಜಸ್ಥಾನ್‌ ರಾಯಲ್ಸ್‌ ಮ್ಯಾನೇಜರ್‌!

ಭಿಂದರ್ ಅವರು ಭ್ರಷ್ಟಚಾರ ನಿಯಂತ್ರಣ ಮಂಡಳಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಘಟನೆಯ ಹಿನ್ನೆಲೆಯನ್ನು ವಿವರಿಸಿದರು. ಆದರೆ ಅವರ ಸ್ಪಷ್ಟೀಕರಣವು ಎಸಿಯುಗೆ ಸಂಪೂರ್ಣ ತೃಪ್ತಿಕರವಾಗಿರಲಿಲ್ಲ. ಇದರ ಹಿನ್ನೆಲೆಯಲ್ಲಿ, ಸಂಬಂಧಿತ ಘಟನೆಯ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಎಸಿಯು ಶಿಫಾರಸು ಮಾಡಿದೆ.

ಈ ಹಿನ್ನೆಲೆಯಲ್ಲಿ ಆರ್‌ಆರ್‌ ತಂಡದ ಮ್ಯಾನೇಜರ್‌ಗೆ 1 ಲಕ್ಷ ರು ದಂಡವನ್ನು ವಿಧಿಸಲಾಗಿದ್ದು, ಮುಂದಿನ ಆವೃತ್ತಿಗಳಲ್ಲಿ ಇಂತಹ ಉಲ್ಲಂಘನೆಗಳನ್ನು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದೆ. ಇದೇ ವೇಳೆ ಬಿಸಿಸಿಐ ಪಿಎಂಒಎ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವೆಂದು ಪುನರುಚ್ಚರಿಸಿದ್ದು, ಯಾವುದೇ ಉಲ್ಲಂಘನೆ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ʻಮುಂಬೈ ಇಂಡಿಯನ್ಸ್‌ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಿʼ-ಮನೋಜ್‌ ತಿವಾರಿ!

ಏಪ್ರಿಲ್‌ 10 ರಂದು ನಡೆದಿದ್ದ ಘಟನೆ

ಏಪ್ರಿಲ್‌ 10 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವಣ ಪಂದ್ಯದ ಸಮಯದಲ್ಲಿ ಟಿವಿ ಕ್ಯಾಮೆರಾಗಳು ರೋಮಿ ಭಿಂದರ್‌ ಡಗೌಟ್‌ನಲ್ಲಿ ಮೊಬೈಲ್ ಫೋನ್ ಬಳಸುತ್ತಿರುವ ದೃಶ್ಯಗಳನ್ನು ಸೆರೆಹಿಡಿದ ನಂತರ ಈ ವಿವಾದ ಬೆಳಕಿಗೆ ಬಂದಿತ್ತು.

ಐಪಿಎಲ್ ನಿಯಮಗಳ ಪ್ರಕಾರ, ಡಗೌಟ್ ಪ್ರದೇಶದಲ್ಲಿ ಮೊಬೈಲ್ ಫೋನ್ ಹಾಗೂ ಇತರೆ ಸಂವಹನ ಸಾಧನಗಳ ಬಳಕೆ ಸಂಪೂರ್ಣ ನಿಷೇಧಿತವಾಗಿದೆ. ಈ ಪ್ರದೇಶವು ಪಿಎಂಒಎ (PMOA) ನಿಯಂತ್ರಿತ ವಲಯಕ್ಕೆ ಒಳಪಟ್ಟಿದ್ದು, ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ಅಂಗಣಕ್ಕೆ ಪ್ರವೇಶಿಸುವುದಕ್ಕೂ ಮುನ್ನ ತಮ್ಮ ಫೋನ್‌ಗಳನ್ನು ನೀಡಬೇಕಾಗುತ್ತದೆ. ಆದರೆ, ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೀಮಿತ ವಿನಾಯಿತಿಯನ್ನು ನೀಡಲಾಗುತ್ತದೆ.