IND vs AUS: ಆಸ್ಟ್ರೇಲಿಯಾ ಒಡಿಐ ಸರಣಿಯಲ್ಲಿ ವಿಶೇಷ ದಾಖಲೆ ಬರೆಯುವ ಸನಿಹದಲ್ಲಿ ಶುಭಮನ್ ಗಿಲ್!
ಭಾರತ ತಂಡದ ನಾಯಕ ಶುಭಮನ್ ಗಿಲ್ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 3000 ರನ್‌ಗಳ ಸನಿಹದಲ್ಲಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 225 ರನ್‌ಗಳನ್ನು ಕಲೆ ಹಾಕಿದರೆ, 50 ಓವರ್‌ಗಳ ಸ್ವರೂಪದಲ್ಲಿ ಈ ಮೈಲುಗಲ್ಲು ತಲುಪಲಿದ್ದಾರೆ.

3000 ಒಡಿಐ ರನ್‌ಗಳ ಸನಿಹದಲ್ಲಿ ಶುಭಮನ್ ಗಿಲ್. -

ಪರ್ತ್: ಭಾರತ ತಂಡದ ನೂತನ ನಾಯಕ ಶುಭಮನ್ ಗಿಲ್ (Shubman Gill), ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ(IND vs AUS) ನೂತನ ಮೈಲುಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಅಕ್ಟೋಬರ್ 19 ರಂದು ಇಲ್ಲಿನ ಅಪ್ಟಸ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ ತಂಡ (India) ಮೊದಲನೇ ಏಕದಿನ ಪಂದ್ಯವನ್ನು ಆಡಲಿದೆ. ಶುಭಮನ್ ಗಿಲ್ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 3000 ರನ್‌ಗಳನ್ನು ಪೂರ್ಣಗೊಳಿಸಲು ಇನ್ನು ಕೇವಲ 225 ರನ್‌ಗಳ ಅಗತ್ಯವಿದೆ. ಅವರು ಈ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈ ಸಾಧನೆಗೆ ಭಾಜನವಾಗಬಹುದು. ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಸರಣಿಯಲ್ಲಿನ ಅತ್ಯುತ್ತಮ ಫಾರ್ಮ್‌ನೊಂದಿಗೆ ಗಿಲ್, ಆಸ್ಟ್ರೇಲಿಯಾಗೆ ಬಂದಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಶುಭಮನ್ ಗಿಲ್ ಆಡಿರುವುದು ಕೇವಲ ಒಂದೇ ಒಂದು ಏಕದಿನ ಪಂದ್ಯ ಮಾತ್ರ, ಅದರಲ್ಲಿ ಅವರು ಗಳಿಸಿರುವುದು ಕೇವಲ 33 ರನ್ ಮಾತ್ರ. ಒಟ್ಟಾರೆಯಾಗಿ ಆಸ್ಟ್ರೇಲಿಯಾ ವಿರುದ್ಧ ಯೋಗ್ಯ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಎಂಟು ಒಡಿಐ ಪಂದ್ಯಗಳಿಂದ ಒಂದು ಶತಕ ಹಾಗೂ ಒಂದು ಅರ್ಧಶತಕದ ಬಲದಿಂದ 280 ರನ್‌ಗಳನ್ನು ಕಲೆ ಹಾಕಿದ್ದಾರೆ. ಭಾರತ ಏಕದಿನ ತಂಡದ ನಾಯಕನಾಗಿ ಆಸ್ಟ್ರೇಲಿಯಾ ಎದುರಿನ ಮೊದಲನೇ ಏಕದಿನ ಸರಣಿಯಾಗಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20ಐ ಸರಣಿ ಇದಾಗಿದೆ.
IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಅಕ್ಟೋಬರ್ 19 ರಂದು ಪರ್ತ್‌ನ ಅಪ್ಟಸ್‌ನಲ್ಲಿ ಮೊದಲನೇ ಏಕದಿನ ಪಂದ್ಯದಲ್ಲಿ ಆಡಿದರೆ, ಅಕ್ಟೋಬರ್ 23 ರಂದು ಅಡಿಲೇಡ್ ಓವಲ್‌ನಲ್ಲಿ ಎರಡನೇ ಪಂದ್ಯ ನಡೆದರೆ, ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಲಿದೆ. ಐದು ಪಂದ್ಯಗಳ ಟಿ20ಐ ಸರಣಿಯು ಅಕ್ಟೋಬರ್ 29 ರಂದು ನವೆಂಬರ್ 8 ರವರೆಗೆ ನಡೆಯಲಿದೆ. ಭಾರತ ಏಕದಿನ ತಂಡದ ನಾಯಕನಾಗಿ ಶುಭಮನ್ ಗಿಲ್‌ಗೆ ಆಸ್ಟ್ರೇಲಿಯಾ ತುಂಬಾ ಮುಖ್ಯವಾಗಿದೆ. ಅವರು ಟೆಸ್ಟ್ ನಾಯಕನಾಗಿ ಯಶಸ್ವಿಯಾಗಿದ್ದಾರೆ. 2027 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನಿಮಿತ್ತ ಗಿಲ್‌ಗೆ ಅವರ ನಾಯಕತ್ವಕ್ಕೆ ಪರೀಕ್ಷೆ ಇದಾಗಿದೆ. ನಾಯಕನಾಗಿ ಹಾಗೂ ಬ್ಯಾಟ್ಸ್‌ಮನ್ ಆಗಿ ಹೇಗೆ ಆಡಲಿದ್ದಾರೆಂದು ಕಾದು ನೋಡಬೇಕಾಗಿದೆ.
IND vs AUS: ಆಸೀಸ್‌ಗೆ ಮತ್ತೊಂದು ಗಾಯದ ಆಘಾತ; ಸರಣಿಯಿಂದ ಹೊರಬಿದ್ದ ಗ್ರೀನ್
ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿತ್ತು. ಈ ಸರಣಿಯಲ್ಲಿ ಭಾರಯ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ನಂತರ ವೆಸ್ಟ್ ಇಂಡೀಸ್ ವಿರುದ್ದ ಟೀಮ್ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತ್ತು.
ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್.