ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಸೇಡಿನ ಪಂದ್ಯಕ್ಕೆ (RCB vs DC) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗುತ್ತಿದೆ. ಆದರೆ, ಆರ್‌ಸಿಬಿ ತಂಡ ಗಾಯಾಳುಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಫಿಲ್ ಸಾಲ್ಟ್ (Phil Salt) ಗಾಯದ ಸಮಸ್ಯೆಯಿಂದ ಗುಜರಾತ್ ಟೈಟನ್ಸ್ ಎದುರು ಕಣಕ್ಕೆ ಇಳಿದಿರಲಿಲ್ಲ, ಹಾಗಾಗಿ ಅವರ ಸ್ಥಾನದಲ್ಲಿ ಜಾಕೋಬ್ ಬೆಥೆಲ್ ಆಡಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಸಾಲ್ಟ್ ಹೊರಗುಳಿಯಲಿದ್ದು, ಅವರ ಬಲದು ಬೆಥೆಲ್ ಕಣಕ್ಕೆ ಇಳಿಯಲಿದ್ದಾರೆಂದು ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಖಚಿತಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಫಿಲ್ ಸಾಲ್ಟ್ ಅವರು ಮುಂದಿನ ಪಂದ್ಯದಲ್ಲಿಯೂ ವಿಶ್ರಾಂತಿ ಪಡೆಯಲಿದ್ದಾರೆ ಹಾಗೂ ವಿರಾಟ್ ಕೊಹ್ಲಿ ಜಾಕೋಬ್ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆಂದು ತಿಳಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬೆಥೆಲ್ ಬ್ಯಾಟ್ ಮಾಡಿದ್ದರು, ಆದರೆ ಅವರಿಂದ ದೊಡ್ಡ ಮೊತ್ತ ಮೂಡಿ ಬಂದಿರಲಿಲ್ಲ. ಆದರೆ, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್‌ಗಳ ಇನಿಂಗ್ಸ್ ಆಡಿದ್ದರು.
RCB vs DC: ಆರ್‌ಸಿಬಿ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ
ಡೆಲ್ಲಿ ಪಂದ್ಯದಿಂದ ರಸಿಕ್ ಸಲಾಮ್ ಔಟ್
ಫಿಲ್ ಸಾಲ್ಟ್ ಜೊತೆಗೆ ಗಾಯದ ಸಮಸ್ಯೆ ಎದುರಿಸುತ್ತಿರುವ ಯುವ ವೇಗದ ಬೌಲರ್ ರಸಿಕ್ ದಾರ್ ಸಲಾಮ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿಯಲಿದ್ದಾರೆಂದು ದಿನೇಶ್ ಕಾರ್ತಿಕ್ ಖಚಿತಪಡಿಸಿದ್ದಾರೆ. ಗುಜರಾತ್ ಟೈಟನ್ಸ್ ಎದುರಿನ ಪಂದ್ಯದ ವೇಲೆ ರಸಿಖ್ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು, ಹಾಗಾಗಿ ಅವರು ಈ ಪಂದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಮುಗಿಸಲು ಸಾಧ್ಯವಾಗಿರಲಿಲ್ಲ. ಅವರಿನ್ನೂ ಗುಣಮುಖರಾಗಿಲ್ಲದ ಕಾರಣ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕಣಕ್ಕೆ ಇಳಿಯುವುದಿಲ್ಲ.
ಮಂಗೇಶ್ ಯಾದವ್‌ಗೆ ಅವಕಾಶ?
ರಸಿಖ್ ದಾರ್ ಸಲಾಮ್ ಗೈರಾಗಿರುವ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡ, ವೇಗದ ಬೌಲರ್ ಮಂಗೇಶ್ ಯಾದವ್ ಅವರನ್ನು ತಂಡಕ್ಕೆ ಸೇರಿಸುವ ಸಾಧ್ಯತೆ ಇದೆ. ಮಿನಿ ಹರಾಜಿನಲ್ಲಿ 5 ಕೋಟಿ ರೂಪಾಯಿಗೆ ಖರೀದಿಸಲ್ಪಟ್ಟಿದ್ದ ಮಂಗೇಶ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ ವೃತ್ತಿ ಜೀವನಕ್ಕೆ ಪದಾರ್ಪಣೆ ಮಾಡಬಹುದು. ಇನ್ನುಳಿದಂತೆ ಜಾಶ್ ಹೇಝಲ್‌ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರೊಂದಿಗೆ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
DC vs RCB: ತವರಿನ ಸೋಲಿಗೆ ಸೇಡು ತೀರಿಸಿಕೊಂಡೀತೇ ಆರ್‌ಸಿಬಿ?; ಡೆಲ್ಲಿ ಎದುರಾಳಿ
ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI
1.ವಿರಾಟ್ ಕೊಹ್ಲಿ (ಆರಂಭಿಕ ಬ್ಯಾಟ್ಸ್‌ಮನ್)
2.ಜಾಕೋಬ್ ಬೆಥಲ್ (ಆರಂಭಿಕ ಬ್ಯಾಟ್ಸ್‌ಮನ್)
3.ದೇವದತ್ ಪಡಿಕ್ಕಲ್ (ಬ್ಯಾಟ್ಸ್‌ಮನ್)
4.ರಜತ್ ಪಾಟಿದಾರ್ (ನಾಯಕ, ಬ್ಯಾಟ್ಸ್‌ಮನ್)
5.ಜಿತೇಶ್ ಶರ್ಮಾ (ವಿಕೆಟ್ ಕೀಪರ್, ಬ್ಯಾಟ್ಸ್‌ಮನ್)
6.ಟಿಮ್ ಡೇವಿಡ್ (ಆಲ್‌ರೌಂಡರ್)
7.ರೊಮ್ಯಾರಿಯೊ ಶೆಫರ್ಡ್ (ಆಲ್‌ರೌಂಡರ್)
8.ಕೃಣಾಲ್ ಪಾಂಡ್ಯ (ಆಲ್‌ರೌಂಡರ್)
9.ಭುವನೇಶ್ವರ್ ಕುಮಾರ್ (ವೇಗದ ಬೌಲರ್)
10.ಜಾಶ್ ಹೇಝಲ್‌ವುಡ್ (ವೇಗದ ಬೌಲರ್)
11.ಮಂಗೇಶ್ ಯಾದವ್ (ವೇಗದ ಬೌಲರ್)
ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ