ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs DC: ಆರ್‌ಸಿಬಿ ಪಂದ್ಯಕ್ಕೆ ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ

IPL 2026: ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಪಂದ್ಯದ ಮೊದಲಾರ್ಧದಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಇಲ್ಲಿನ ಪಿಚ್ ಪಂದ್ಯ ಮುಂದುವರೆದಂತೆ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗುತ್ತದೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಒಟ್ಟು 529 ರನ್‌ ದಾಖಲಾಗಿತ್ತು. ಹೀಗಾಗಿ ಸೋಮವಾರದ ಪಂದ್ಯವನ್ನೂ ಹೈ ಸ್ಕೋರಿಂಗ್‌ ನಿರೀಕ್ಷೆ ಮಾಡಬಹುದು.

ಡೆಲ್ಲಿ vs ಆರ್‌ಸಿಬಿ ಮುಖಾಮುಖಿಯ ಪ್ಲೇಯಿಂಗ್‌ ಇಲೆವೆನ್‌ ಹೇಗಿರಲಿದೆ?

rahul and virat -

Abhilash BC
Abhilash BC Apr 26, 2026 11:58 AM

ನವದೆಹಲಿ, ಎ.26: ಪಂಜಾಬ್‌ ಕಿಂಗ್ಸ್‌ ವಿರುದ್ಧ ದಾಖಲೆಯ 264 ರನ್‌ ಬಾರಿಸಿಯೂ ಇದನ್ನು ರಕ್ಷಿಸಿಕೊಳ್ಳಲಾಗದೆ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ ನಡೆಯುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026,)ನ 39ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ(RCB vs DC,)ಯ ಸವಾಲು ಎದುರಿಸಲಿದೆ. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ಡೇವಿಡ್‌ ಮಿಲ್ಲರ್‌ ಬ್ಯಾಟಿಂಗ್‌ ಸಾಹಸದಿಂದ ರೋಚಕ ಗೆಲುವು ಸಾಧಿಸಿತ್ತು. ಈ ಸೋಲಿಗೆ ರಜತ್‌ ಪಾಟೀದಾರ್‌ ಸೇಡು ತೀರಿಸಿಕೊಂಡಿತೇ ಎನ್ನುವುದು ಪಂದ್ಯದ ಕೌತುಕ.

ಕಳೆದ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಜೋಶ್‌ನಲ್ಲಿರುವ ಆರ್‌ಸಿಬಿ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಆದರೆ ಡೆಲ್ಲಿ ತಂಡದಲ್ಲಿ ಕೆಲ ಬದಲಾವಣೆ ಗೋಚರಿಸಿದೆ. ಗಾಯಗೊಂಡ ಲುಂಗಿ ಎನ್‌ಗಿಡಿ ಬದಲು ದುಷ್ಮಂತ ಚಮೀರ ಅಥವಾ ಕೈಲ್‌ ಜೇಮಿಸನ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಪಿಚ್‌ ರಿಪೋರ್ಟ್‌

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವು ಪಂದ್ಯದ ಮೊದಲಾರ್ಧದಲ್ಲಿ ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತದೆ. ಆದಾಗ್ಯೂ, ಇಲ್ಲಿನ ಪಿಚ್ ಪಂದ್ಯ ಮುಂದುವರೆದಂತೆ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗುತ್ತದೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಒಟ್ಟು 529 ರನ್‌ ದಾಖಲಾಗಿತ್ತು. ಹೀಗಾಗಿ ಸೋಮವಾರದ ಪಂದ್ಯವನ್ನೂ ಹೈ ಸ್ಕೋರಿಂಗ್‌ ನಿರೀಕ್ಷೆ ಮಾಡಬಹುದು.

IPL 2026: ಮಂಡಿರಜ್ಜು ಗಾಯಕ್ಕೆ ತುತ್ತಾದ ವೈಭವ್ ಸೂರ್ಯವಂಶಿ; ರಾಜಸ್ಥಾನ್‌ಗೆ ಆತಂಕ!

ಹವಾಮಾನ

ದೆಹಲಿಯಲ್ಲಿ ಒಣ ಹವೆ ಇದ್ದು ಯಾವುದೇ ಮಳೆ ಭೀತಿ ಎದುರಾಗಿಲ್ಲ. ಹೀಗಾಗಿ ಪಂದ್ಯವನ್ನು ಪ್ರೇಕ್ಷಕರು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ದ್ವಿತೀಯ ಇನಿಂಗ್ಸ್‌ ವೇಳೆ ಕೊಂಚ ಇಬ್ಬನಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಆರ್‌ಸಿಬಿ vs ಡೆಲ್ಲಿ ಮುಖಾಮುಖಿ

ಒಟ್ಟು ಪಂದ್ಯಗಳು: 33

ಆರ್‌ಸಿಬಿ ಗೆಲುವು: 20

ಡೆಲ್ಲಿ ಗೆಲುವು: 12

ಫಲಿತಾಂಶವಿಲ್ಲ: 1

ಅತ್ಯಧಿಕ ಸ್ಕೋರ್ (ಆರ್‌ಸಿಬಿ): 215/8

ಅಗ್ರಸ್ಥಾನ ಉಳಿಸಿಕೊಂಡ ಪಂಜಾಬ್‌, ಮೂರಕ್ಕೇರಿದ ಸನ್‌ರೈಸಸರ್ಸ್‌

ಕೊನೆಯ 5 ಪಂದ್ಯಗಳ ಫಲಿತಾಂಶಗಳು

ಏಪ್ರಿಲ್ 18, 2026: ಆರ್‌ಸಿಬಿ 6 ವಿಕೆಟ್‌ಗಳಿಂದ ಗೆದ್ದಿತು.

ಏಪ್ರಿಲ್ 27, 2025: ಆರ್‌ಸಿಬಿ 6 ವಿಕೆಟ್‌ಗಳಿಂದ ಗೆದ್ದಿತು.

ಏಪ್ರಿಲ್ 10, 2025: ಡೆಲ್ಲಿ 6 ವಿಕೆಟ್‌ಗಳಿಂದ ಗೆದ್ದಿತು.

ಮೇ 12, 2024: ಆರ್‌ಸಿಬಿ 47 ರನ್‌ಗಳಿಂದ ಗೆದ್ದಿತು.

ಮೇ 6, 2023: ಡೆಲ್ಲಿ 7 ವಿಕೆಟ್‌ಗಳಿಂದ ಗೆದ್ದಿತು.

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್‌: ಕೆ.ಎಲ್ ರಾಹುಲ್ (ವಿ.ಕೀ.), ಪಾತುಮ್ ನಿಸ್ಸಾಂಕ, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ದುಷ್ಮಂತ ಚಮೀರ/ಕೈಲ್‌ ಜಾಮಿಸನ್‌, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಶ್ ಶರ್ಮಾ, ರಾಸಿಖ್ ಸಲಾಮ್ ದಾರ್.