ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ 26ನೇ ಪಂದ್ಯದಲ್ಲಿ (RCB vs DC) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹಸಿರು ಉಪಕ್ರಮದ ಅಂಗವಾಗಿ ಹಸರಿ ಬಣ್ಣದ ಜೆರ್ಸಿಗಳನ್ನು ಧರಿಸಿ ಕಣಕ್ಕೆ ಇಳಿಯಲಿದ್ದಾರೆ. ಈ ವಿಶೇಷ ಜೆರ್ಸಿಗಳನ್ನು ಮರುಬಳಕೆ ಮಾಡಲಾದ ವಸ್ತುಗಳಿಂದ ತಯಾರಿಸಲಾಗಿದ್ದು, ಪರಿಸರ ಸಂರಕ್ಷಣೆಯತ್ತ ಫ್ರಾಂಚೈಸಿಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಆರ್‌ಸಿಬಿ ಜಗತ್ತಿನಲ್ಲೇ ಕಾರ್ಬನ್ ನ್ಯೂಟ್ರಲ್ ಆಗಿರುವ ಏಕೈಕ ಟಿ20 ಫ್ರಾಂಚೈಸಿಯಾಗಿ ಗುರುತಿಸಿಕೊಂಡಿದೆ.
ಆರ್‌ಸಿಬಿ ತಂಡ 2011ರಿಂದ ಈ ಉಪಕ್ರಮವನ್ನು ತನ್ನ ಕಾರ್ಯಾಚರಣೆಗಳಲ್ಲಿ ಪರಿಸರ ಸುಸ್ಥಿರತೆಯನ್ನು ನಿರಂತರವಾಗಿ ಅಳವಡಿಸಿಕೊಂಡು ಬಂದಿದೆ. ಮಾಪನ, ಹೊಣೆಗಾರಿಕೆ ಹಾಗೂ ಅಭಿಮಾನಿಗಳ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ, ಕಾರ್ಬನ್ ಪಾಸಿಟಿವ್ ಗುರಿಯನ್ನು ಸಾಧಿಸುವತ್ತ ತಂಡ ಪ್ರಯತ್ನಿಸುತ್ತಿದೆ.
ಆರ್‌ಸಿಬಿ vs ಡೆಲ್ಲಿ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
ಆರ್‌ಸಿಬಿ ಇಸಿಒ ಹೇಳಿದ್ದೇನು?
ಈ ಕುರಿತು ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಮಾತನಾಡಿ, “ಟಿ20 ಫ್ರಾಂಚೈಸಿಯಾಗಿ ಕಾರ್ಬನ್-ನ್ಯೂಟ್ರಲ್ ಸ್ಥಾನಮಾನ ಸಾಧಿಸುವುದು ವರ್ಷಗಳ ಪರಿಶ್ರಮದ ಫಲವಾಗಿದೆ. ಹಸಿರು ಜೆರ್ಸಿಗಳು ಈ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ನಮ್ಮ ಅಭಿಮಾನಿಗಳು ಮತ್ತು ಪಾಲುದಾರರು ಹೆಚ್ಚು ಜವಾಬ್ದಾರಿಯುತ ಹಾಗೂ ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ಈ ಉಪಕ್ರಮ ಪ್ರೇರೇಪಿಸುತ್ತದೆ ಎಂದು ನಾವು ಆಶಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಅಗ್ರ ಸ್ಥಾನದ ಮೇಲೆ ಆರ್‌ಸಿಬಿ ಕಣ್ಣು
ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಗೆಲುವು ಪಡೆದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತ್ತು. ಆದರೆ, ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಆರ್‌ಸಿಬಿಯನ್ನು ಹಿಂದಿಕ್ಕಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇದೀಗ ಆರ್‌ಸಿಬಿ ತಂಡ, ಶನಿವಾರ ಡೆಲ್ಲಿ ತಂಡವನ್ನು ಮಣಿಸಿ ಪುನಃ ಅಗ್ರ ಸ್ಥಾನಕ್ಕೇರಲು ಎದುರು ನೋಡುತ್ತಿದೆ. ಅಂದ ಹಾಗೆ ಪಂಜಾಬ್ ತಂಡಕ್ಕಿಂತ ಬೆಂಗಳೂರು ತಂಡದ ರನ್‌ರೇಟ್ ಉತ್ತಮವಾಗಿದೆ.
IPL 2026: ಗುಜರಾತ್ ಟೈಟನ್ಸ್‌ಗೆ ಸೇರ್ಪಡೆಯಾದ ಕಾನರ್ ಎಸ್ಟರ್‌ಹುಯಿಜೆನ್ ಯಾರು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಟಿಮ್ ಡೇವಿಡ್, ಜಾಕೋಬ್ ಬೆಥೆಲ್, ರೊಮಾರಿಯೊ ಶೆಫರ್ಡ್, ಜಾಶ್ ಹೇಝಲ್‌ವುಡ್, ನುವಾನ್ ತುಷಾರ, ದೇವದತ್ ಪಡಿಕ್ಕಲ್, ಜಿತೇಶ ಶರ್ಮಾ, ಕೃಣಾಲ್ ಪಾಂಡ್ಯ, ರಸಿಖ್ ದಾರ್ ಸಲಾಮ್, ಭುವನೇಶ್ವರ್ ಕುಮಾರ್, ಜೋರ್ಡನ್ ಕಾಕ್ಸ್, ಸುಯಾಶ್ ಶರ್ಮಾ, ವೆಂಕಟೇಶ್ ಅಯ್ಯರ್, ಸ್ವಪ್ನಿಲ್ ಸಿಂಗ್, ಜಾಕೋಬ್ ಡಫಿ, ಕಾನಿಷ್ಕ್ ಚೌವ್ಹಾಣ್, ಅಭಿನಂದನ್ ಸಿಂಗ್, ಮಂಗೇಶ್ ಯಾದವ್, ಫಿಲ್ ಸಾಲ್ಟ್, ಸಾತ್ವಿಕ್ ದೆಸ್ವಾಲ್, ವಿಕ್ಕಿ ಒತ್ವ್ಸಾಲ್, ವಿಹಾನ್ ಮೆಲ್ಹೋತ್ರಾ