ಆರ್‌ಸಿಬಿ vs ಡೆಲ್ಲಿ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
RCB vs DC: ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಡೆಲ್ಲಿ ತಂಡ ಐದನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಜಯಗಳೊಂದಿಗೆ ಅವರು ತಮ್ಮ ಅಭಿಯಾನವನ್ನು ಸಕಾರಾತ್ಮಕವಾಗಿ ಪ್ರಾರಂಭಿಸಿದರು. ಆದರೆ ನಂತರ ಗುಜರಾತ್ ಟೈಟಾನ್ಸ್ (GT) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಹಿನ್ನಡೆಯನ್ನು ಎದುರಿಸಿದರು. ಈ ಸೋಲುಗಳಿಂದ ಚೇತರಿಸಿಕೊಂಡು ಗೆಲುವಿನ ಹಾದಿಗೆ ಮರಳಲು ಉತ್ಸುಕವಾಗಿದೆ.
RCB vs DC -
ಬೆಂಗಳೂರು, ಎ.17: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ(M. Chinnaswamy Stadium)ದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs DC) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಲಿದೆ. ಇತ್ತಂಡಗಳ ನಡುವಣ ಈ ಪಂದ್ಯ ಶನಿವಾರ ನಡೆಯಲಿದೆ.
ಹಾಲಿ ಚಾಂಪಿಯನ್ ಆರ್‌ಸಿಬಿ ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದೆ. ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧದ ಮಾತ್ರ ಏಕೈಕ ಸೋಲು ಕಂಡಿದ್ದು ಉಳಿದ ನಾಲ್ಕು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಡೆಲ್ಲಿ ತಂಡ ಐದನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಮುಂಬೈ ಇಂಡಿಯನ್ಸ್ (MI) ವಿರುದ್ಧದ ಜಯಗಳೊಂದಿಗೆ ಅವರು ತಮ್ಮ ಅಭಿಯಾನವನ್ನು ಸಕಾರಾತ್ಮಕವಾಗಿ ಪ್ರಾರಂಭಿಸಿದರು. ಆದರೆ ನಂತರ ಗುಜರಾತ್ ಟೈಟಾನ್ಸ್ (GT) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಹಿನ್ನಡೆಯನ್ನು ಎದುರಿಸಿದರು. ಈ ಸೋಲುಗಳಿಂದ ಚೇತರಿಸಿಕೊಂಡು ಗೆಲುವಿನ ಹಾದಿಗೆ ಮರಳಲು ಉತ್ಸುಕವಾಗಿದೆ.
ಆರ್‌ಸಿಬಿ ಆಟಗಾರರು ನಿರ್ಮಿಸಬಹುದಾದ ಮೈಲಿಗಲ್ಲುಗಳು
ವಿರಾಟ್ ಕೊಹ್ಲಿ ಟಿ20ಯಲ್ಲಿ 450 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಅಗತ್ಯ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 800 ಬೌಂಡರಿಗಳನ್ನು ತಲುಪಲು 4 ಬೌಂಡರಿಗಳು ಬೇಕು.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್ ಬೇಕಾಗಿದೆ.
ದೇವದತ್ ಪಡಿಕ್ಕಲ್ ಟಿ20ಯಲ್ಲಿ 3500 ರನ್‌ಗಳನ್ನು ತಲುಪಲು 3 ರನ್ ಬೇಕಿದೆ.
ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲಿ 2000 ರನ್‌ಗಳನ್ನು ತಲುಪಲು 59 ರನ್‌ಗಳು ಅಗತ್ಯವಿದೆ.
ಟಿಮ್ ಡೇವಿಡ್ ಐಪಿಎಲ್‌ನಲ್ಲಿ 1000 ರನ್‌ಗಳನ್ನು ತಲುಪಲು 7 ರನ್ ಬೇಕಿದೆ.
ಜಿತೇಶ್ ಶರ್ಮಾ ಟಿ20ಯಲ್ಲಿ 300 ಬೌಂಡರಿಗಳನ್ನು ತಲುಪಲು 8 ಬೌಂಡರಿಗಳು ಬೇಕಾಗಿದೆ.
ಜಾಕೋಬ್ ಡಫಿ ಟಿ20ಯಲ್ಲಿ 200 ವಿಕೆಟ್‌ಗಳನ್ನು ತಲುಪಲು 5 ವಿಕೆಟ್‌ಗಳು ಅಗತ್ಯ.
ಮುಂಬೈ ತಂಡದಲ್ಲಿ ಬಿರುಕು; ಪಾಂಡ್ಯ ನಾಯಕತ್ವದ ಬಗ್ಗೆ ಬುಮ್ರಾ ಅತೃಪ್ತ; ವಿಡಿಯೊ ವೈರಲ್
ಡೆಲ್ಲಿ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು
ಕೆ.ಎಲ್ ರಾಹುಲ್ ಐಪಿಎಲ್‌ನಲ್ಲಿ ತಮ್ಮ 150 ನೇ ಪಂದ್ಯವನ್ನು ಆಡಲಿದ್ದಾರೆ.
ಐಪಿಎಲ್‌ನಲ್ಲಿ 1000 ರನ್ ಗಳಿಸಲು ಸಮೀರ್ ರಿಜ್ವಿಗೆ 42 ರನ್‌ಗಳು ಬೇಕಾಗಿದೆ.
ಟಿ20ಯಲ್ಲಿ 250 ಬೌಂಡರಿಗಳನ್ನು ತಲುಪಲು ಅಕ್ಷರ್ ಪಟೇಲ್‌ಗೆ 4 ಬೌಂಡರಿಗಳು ಅಗತ್ಯ.
ಐಪಿಎಲ್‌ನಲ್ಲಿ 2000 ರನ್‌ಗಳನ್ನು ತಲುಪಲು ಅಕ್ಷರ್ ಪಟೇಲ್‌ಗೆ 81 ರನ್‌ಗಳು ಬೇಕಿದೆ.
ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು ಅಕ್ಷರ್ ಪಟೇಲ್‌ಗೆ 6 ಸಿಕ್ಸರ್‌ಗಳು ಅಗತ್ಯ.
ಟಿ20ಯಲ್ಲಿ 550 ಸಿಕ್ಸರ್‌ಗಳನ್ನು ತಲುಪಲು ಡೇವಿಡ್ ಮಿಲ್ಲರ್‌ಗೆ 5 ಸಿಕ್ಸರ್ ಬೇಕಾಗಿದೆ.
ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ತಲುಪಲು ಡೇವಿಡ್ ಮಿಲ್ಲರ್‌ಗೆ 8 ಸಿಕ್ಸರ್ ಅಗತ್ಯ.
ಟಿ20ಯಲ್ಲಿ 250 ವಿಕೆಟ್‌ಗಳನ್ನು ತಲುಪಲು ಕುಲದೀಪ್ ಯಾದವ್‌ಗೆ 6 ವಿಕೆಟ್ ಬೇಕಿದೆ.