ಚಂಡೀಗಢ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತೊಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ (GT vs RR) ಅವರು ಈ ಮೈಲುಗಲ್ಲು ತಲುಪಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿಯೇ 500 ರನ್‌ಗಳನ್ನು ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಸಾಧನೆಗೆ ವೈಭವ್ ಸೂರ್ಯವಂಶಿ ಭಾಜನರಾಗಿದ್ದಾರೆ.
ಸತತ ಎರಡೂ ಪಂದ್ಯಗಳಲ್ಲಿ ಶತಕವನ್ನು ಕಳೆದುಕೊಂಡರೂ ವೈಭವ್ ಸೂರ್ಯವಂಶಿ ಗುಜರಾತ್ ಪಂದ್ಯದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 500 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ಬರೆದಿದ್ದಾರೆ. ಇದಕ್ಕೂ ಮುನ್ನ ಟಿ20 ಕ್ರಿಕೆಟ್ ಏಕೈಕ ಟೂರ್ನಿಯ ಪವರ್‌ಪ್ಲೇನಲ್ಲಿ ಅತ್ಯಧಿಕ ಸ್ಕೋರ್ ಮಾಡಿದ ದಾಖಲೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರ ಹೆಸರಿನಲ್ಲಿತ್ತು. ವಾರ್ನರ್ 2016ರ ಐಪಿಎಲ್ ಟೂರ್ನಿಯ ಪವರ್‌ಪ್ಲೇನಲ್ಲಿ 467 ರನ್‌ಗಳನ್ನು ದಾಖಲಿಸಿದ್ದರು.
IPL 2026: ವಿಶ್ವದ ಸ್ಟಾರ್ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್ ಸೂರ್ಯವಂಶಿಗೆ 12 ಕೋಟಿ ರು ಆಫರ್?
ಐಪಿಎಲ್‌ನ ಏಕೈಕ ಟೂರ್ನಿಯ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ವೈಭವ್ ಸೂರ್ಯವಂಶಿ (ಆರ್‌ಆರ್, ಐಪಿಎಲ್ 2026) – 521 ರನ್‌ಗಳು
ಡೇವಿಡ್ ವಾರ್ನರ್ (ಎಸ್‌ಆರ್‌ಎಚ್, ಐಪಿಎಲ್ 2016) – 467 ರನ್‌ಗಳು
ಟ್ರಾವಿಸ್ ಹೆಡ್ (ಎಸ್‌ಆರ್‌ಎಚ್, ಐಪಿಎಲ್ 2024) – 402 ರನ್‌ಗಳು
ಸಾಯಿ ಸುದರ್ಶನ್ (ಜಿಟಿ, ಐಪಿಎಲ್ 2025) – 402 ರನ್‌ಗಳು
ಆಡಂ ಗಿಲ್‌ಕ್ರಿಸ್ಟ್ (ಡೆಕನ್ ಚಾರ್ಜರ್ಸ್, ಐಪಿಎಲ್ 2009) – 382 ರನ್‌ಗಳು
ಈ ಸೀಸನ್‌ನಲ್ಲಿ ಅವರ ಅನೇಕ ಇನಿಂಗ್ಸ್‌ಗಳಿಗೆ ಹೋಲಿಸಿದರೆ, ಗುಜರಾತ್ ಟೈಟನ್ಸ್ ವಿರುದ್ಧದ ಆರಂಭ ಅಷ್ಟೊಂದು ಸುಲಭವಾಗಿರಲಿಲ್ಲ. ಮೊಹಮ್ಮದ್ ಸಿರಾಜ್ ಮತ್ತು ಕಗಿಸೊ ರಬಾಡ ಈ ಯುವ ಆಟಗಾರನ ವಿರುದ್ಧ ಸಮರ್ಪಕ ಸಿದ್ಧತೆಯೊಂದಿಗೆ ಬಂದಂತೆ ಕಂಡಿದ್ದರು. ಆರಂಭಿಕ ಓವರ್‌ಗಳಲ್ಲಿ ನಿಯಂತ್ರಿತ ಲೈನ್ ಮತ್ತು ಲೆನ್ತ್ ಮೂಲಕ ನಿರಂತರವಾಗಿ ಅವರನ್ನು ಪರೀಕ್ಷಿಸಿದರು. ಹಲವು ಪಂದ್ಯಗಳ ಬಳಿಕ ಮೊದಲ ಬಾರಿ ವೈಭವ್, ತಮ್ಮ ಆಕ್ರಮಣಕಾರಿ ಆಟ ಆರಂಭಿಸುವ ಮುನ್ನ ಕ್ರೀಸ್‌ನಲ್ಲಿ ಸಮಯ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.
GT vs RR: ಎರಡನೇ ಕ್ವಾಲಿಫೈಯರ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ರಾಜಸ್ಥಾನ್ ರಾಯಲ್ಸ್!
ಅವರು ಎದುರಿಸಿದ 13ನೇ ಎಸೆತದವರೆಗೂ ಮೊದಲ ಸಿಕ್ಸರ್ ಬಂದಿರಲಿಲ್ಲ. ಗುಜರಾತ್ ತಂಡದ ತಂತ್ರ ಸ್ಪಷ್ಟವಾಗಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಕೇವಲ 29 ಎಸೆತಗಳಲ್ಲಿ 97 ರನ್ ಸಿಡಿಸಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ತಂಡದ ಪರ ತಿರುಗಿಸಿದ್ದರು. ಇದನ್ನು ಗಮನಿಸಿದ್ದ ಜಿಟಿ, ಈ ಪಂದ್ಯದ ಪವರ್‌ಪ್ಲೇ ಅವಧಿಯಲ್ಲಿ ಅವರ ಬ್ಯಾಟಿಂಗ್ ವೇಗಕ್ಕೆ ಕಡಿವಾಣ ಹಾಕುವುದು ಗುಜರಾತ್‌ನ ಪ್ರಮುಖ ಉದ್ದೇಶವಾಗಿತ್ತು.