IPL 2026: ವಿಶ್ವದ ಸ್ಟಾರ್ ಬೌಲರ್‌ಗಳಿಗೆ ನಿದ್ರೆ ಕೆಡಿಸಿರುವ ವೈಭವ್ ಸೂರ್ಯವಂಶಿಗೆ 12 ಕೋಟಿ ರು ಆಫರ್?
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ರನ್ ಹೊಳೆ ಹರಿಸಿರುವ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ 12 ಕೋಟಿ ರು ಬೃಹತ್ ಆಫರ್ ಬಂದಿದೆ ಎಂದು ವರದಿಯಾಗಿದೆ. ಸದ್ಯ 19ನೇ ಸೀಸನ್‌ನಲ್ಲಿ ವೈಭವ್ 700ಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ 12 ಕೋಟಿ ರು ಆಫರ್. -
ನವದೆಹಲಿ: ಕ್ರಿಕೆಟ್ ಅಂಗಣದಲ್ಲಿ ದೊಡ್ಡ ಹೆಸರು ಮಾಡಿದರೆ, ಹಣ ತಾನಾಗಿಯೇ ಹರಿಯಲಿದೆ ಎಂಬುದಕ್ಕೆ ಉತ್ತಮ ಉದಾಹರಣೆ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದ ಯುವ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi). ತನ್ನ 15ನೇ ವಯಸ್ಸಿನಲ್ಲಿಯೇ ವೈಭವ್, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಐಪಿಎಲ್ ಪಂದ್ಯಗಳಲ್ಲಿ ಅಂತಾರಾಷ್ಟ್ರೀಯ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಜಸ್‌ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಸೇರಿದಂತೆ ವಿಶ್ವದ ಅಗ್ರ ದರ್ಜೆಯ ಬೌಲರ್‌ಗಳಿಗೆ ಮುಲಾಜಿಲ್ಲದೆ ಸಿಕ್ಸರ್-ಫೋರ್‌ಗಳ ಮೂಲಕ ಕ್ರಿಕೆಟ್ ಜಗತ್ತಿನ ಗಮನವನ್ನು ಸೆಳೆದಿದ್ದಾರೆ. ಒಂದೇ ಒಂದು ಐಪಿಎಲ್ ಆವೃತ್ತಿಯಲ್ಲಿಯೇ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಆಡಿದ 16 ಪಂದ್ಯಗಳಿಂದ ಎಡಗೈ ಬ್ಯಾಟ್ಸ್‌ಮನ್ 46.73ರ ಸರಾಸರಿ ಮತ್ತು 240.07ರ ಸ್ಟ್ರೈಕ್‌ರೇಟ್‌ನಲ್ಲಿ 700ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದ್ದಾರೆ. ಆ ಮೂಲಕ ಆರೆಂಜ್ ಕ್ಯಾಪ್ ಆಟಗಾರರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಂತೆ ವೈಭವ್ ಅವರ ಬ್ರ್ಯಾಂಡ್ ಮೌಲ್ಯ ಏರಿಕೆಯಾಗಿದೆ. ಸದ್ಯ ತಾವು ಬಳಸುತ್ತಿರುವ ಬ್ಯಾಟ್‌ನಿಂದಾಗಿ ಎಡಗೈ ಬ್ಯಾಟ್ಸ್‌ಮನ್ ವಾರ್ಷಿಕವಾಗಿ 50 ಲಕ್ಷ ರು ಗಳನ್ನು ಪಡೆಯುತ್ತಿದ್ದಾರೆ.
ವೈಭವ್ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್ ಚೋಪ್ರಾ ವಾರ್ನಿಂಗ್!
ವೈಭವ್ ಸೂರ್ಯವಂಶಿ ಅವರ ಆಟವನ್ನು ನೋಡಿದ ಬಳಿಕ ಹಲವು ಕಾರ್ಪೋರೇಟ್ ಕಂಪನಿಗಳು ಯುವ ಬ್ಯಾಟ್ಸ್‌ಮನ್‌ಗೆ ಬ್ಯಾಟ್ ಸ್ಪಾನ್ಸರ್‌ಷಿಪ್ ಡೀಲ್ ನೀಡಲು ಮುಂದಾಗಿದ್ದಾರೆ. ದೇಶದ ಪ್ರಮುಖ ಟೈರ್ ಬ್ರ್ಯಾಂಡ್‌ಗಳು ಸೇರಿದಂತೆ ಹಲವು ಕಂಪನಿಗಳು ವೈಭವ್ ಬಳಿ ಡೀಲ್‌ಗೆ ಸಹಿ ಮಾಡಿಸಿಕೊಳ್ಳಲು ಆಸಕ್ತಿ ತೋರಿವೆ.
ವೈಭವ್ ಸೂರ್ಯವಂಶಿ ಬ್ಯಾಟ್ ಸ್ಪಾನ್ಸರ್‌ಷಿಪ್‌ಗೆ 12 ಕೋಟಿ ರು?
ಈ ಯುವ ಆಟಗಾರನಿಗೆ ಬ್ಯಾಟ್ ಸ್ಪಾನ್ಸರ್‌ಷಿಪ್‌ಗಾಗಿ ವರ್ಷಕ್ಕೆ ಬರೋಬ್ಬರಿ 12 ಕೋಟಿ ರು ಆಫರ್ ಮಾಡಲಾಗಿದೆ ಎಂದು ಮತ್ತೊಂದು ವರದಿಯಾಗಿದೆ. ಇದಲ್ಲದೆ, ಆಸಕ್ತಿ ತೋರಿದ ಸ್ಪಾನ್ಸರ್‌ಗಳಲ್ಲಿ ಒಬ್ಬರು ಅವರ ಎಂಡೋರ್ಸ್‌ಮೆಂಟ್ ಪಡೆಯಲು ಖಾಲಿ ಚೆಕ್ ನೀಡುವ ಮಟ್ಟಕ್ಕೂ ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
SRH vs RR: 97 ರನ್ ಚಚ್ಚಿದ ವೈಭವ್ ಸೂರ್ಯವಂಶಿಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
ಈ ಒಪ್ಪಂದ ಅಂತಿಮಗೊಂಡರೆ, ಅದು ಕ್ರಿಕೆಟ್ ಜಾಹೀರಾತು ಮತ್ತು ಎಂಡೋರ್ಸ್‌ಮೆಂಟ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಜೊತೆಗೆ ಈ ಯುವ ಆಟಗಾರ ವಾಣಿಜ್ಯ ಕ್ಷೇತ್ರದ ದೊಡ್ಡ ಶಕ್ತಿಯಾಗಿ ವೇಗವಾಗಿ ರೂಪಾಂತರಗೊಳ್ಳುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.
“ಏಕೈಕ ಮಾದರಿಯಲ್ಲಿ ಭಾರತ ತಂಡದ ಪರ ಆಡುತ್ತಿರುವ ರಿಷಭ್ ಪಂತ್ ಅವರಿಗೆ ವರ್ಷಕ್ಕೆ 8 ಕೋಟಿ ರು ಬೇಡಿಕೆ ಇರಬಹುದಾದರೆ, ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಮೌಲ್ಯವನ್ನು ಗಗನಕ್ಕೇರಿಸಿರುವುದು ಸ್ಪಷ್ಟ,” ಎಂದು ವರದಿಯಲ್ಲಿ ಮೂಲವೊಂದು ತಿಳಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಹುತೇಕ ಬ್ಯಾಟ್ ತಯಾರಿಕಾ ಕಂಪನಿಗಳು ಸಾಮಾನ್ಯವಾಗಿ ಪ್ರದರ್ಶನ ಆಧಾರಿತ ಬೋನಸ್‌ಗಳೊಂದಿಗೆ 5 ಕೋಟಿ ರು ವರೆಗೆ ಒಪ್ಪಂದ ನೀಡಲು ಸಿದ್ಧವಾಗಿರುತ್ತವೆ. ಆದರೆ ಇದೀಗ ಎಂಆರ್‌ಎಫ್ ಮತ್ತು ಸಿಯಾಟ್ ಮೊದಲಾದ ಟೈರ್ ದಿಗ್ಗಜ ಕಂಪನಿಗಳು ಬ್ಯಾಟ್ ಬ್ರ್ಯಾಂಡಿಂಗ್ ಒಪ್ಪಂದಗಳಿಗೆ ಭಾರೀ ಮೊತ್ತ ಹೂಡಲು ಮುಂದಾಗಿವೆ.