ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL) ಇತಿಹಾಸದಲ್ಲಿಯೇ ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ 2014ರಲ್ಲಿ ಚಾಂಪಿಯನ್ ಆಗುವಲ್ಲಿ ರಾಬಿನ್ ಉತ್ತಪ್ಪ ಪ್ರಮುಖ ಪಾತ್ರವಹಿಸಿದ್ದರು. ಅವರು ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದರು. ಇದರ ಹೊರತಾಗಿಯೂ ಅವರು ಕೆಕೆಆರ್‌ತಂಡವನ್ನು ತೊರೆಯಲು ನಿರ್ಧರಿಸಿದ್ದರು. ಇದರ ಬಗ್ಗೆ 11 ವರ್ಷಗಳ ಬಳಿಕ ರಾಬಿನ್ ಉತ್ತಪ್ಪ ಮಾತನಾಡಿದ್ದಾರೆ. 2014ರ ಐಪಿಎಲ್ ಟೂರ್ನಿಯ ಬಳಿಕ ಕೆಕೆಆರ್ ತಂಡವನ್ನು ತೊರೆಯಲು ನಿರ್ಧರಿಸಿದ್ದೇಕೆಂದು ಉತ್ತಪ್ಪ ರಿವೀಲ್ ಮಾಡಿದ್ದಾರೆ.
2013ರಲ್ಲಿ ಪುಣೆ ವಾರಿಯರ್ಸ್ ತಂಡದ ಪರ ಆಡಿದ್ದ ಬಳಿಕ ರಾಬಿನ್ ಉತ್ತಪ್ಪ ಅವರು 2014ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಈ ಆವೃತ್ತಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ರಾಬಿನ್ ಉತ್ತಪ್ಪ, 44ರ ಸರಾಸರಿಯಲ್ಲಿ 660 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಈ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು ಹಾಗೂ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೂ ಅವರು 2015ರ ಐಪಿಎಲ್ ಟೂರ್ನಿಯ ಹರಾಜಿಗೆ ಹೋಗಲು ನಿರ್ಧರಿಸಿದ್ದರು.
PAK vs WI: ಪಾಕಿಸ್ತಾನ ತಂಡ ಕೇವಲ 92 ರನ್‌ಗಳಿಗೆ ಆಲ್‌ಔಟ್, ಒಡಿಐ ಸರಣಿ ಗೆದ್ದ ವೆಸ್ಟ್ ಇಂಡೀಸ್!
ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, "ಪುಣೆ ವಾರಿಯರ್ಸ್ ಪರ ಆಡಿದ ಬಳಿಕ 5 ಕೋಟಿ ರು. ಗಳನ್ನು ಪಡೆಯುವ ಮೂಲಕ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದೆ. ಆ ಸೀಸನ್ (2014) ನನ್ನ ಪಾಲಿಗೆ ದೊಡ್ಡದಾಗಿತ್ತು ಹಾಗೂ ನಾನು ಆರೆಂಜ್ ಕ್ಯಾಪ್ ಗೆದ್ದಿದ್ದೆ. ಆದರೂ ನನ್ನನ್ನು ಬಿಡುಗಡೆ ಮಾಡಬೇಕೆಂದು ಬಯಸಿದ್ದೆ. ನಾನು ಮತ್ತೊಮ್ಮೆ ಹರಾಜಿಗೆ ಹೋಗಬೇಕೆಂದು ಬಯಸಿದ್ದೆ. ನಾನು ಇನ್ನಷ್ಟು ಹೆಚ್ಚಿನ ಅವಕಾಶಗಳನ್ನು ಪಡೆಯುವ ಮೂಲಕ ನನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳಲು ಬಯಿಸಿದ್ದೆ. ಇದನ್ನು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು ಮುಂದಿನ ಎಷ್ಟು ವರ್ಷ ಆಡಬಹುದು? 35, 36. ನನಗೆ ಆಗ 29 ವರ್ಷ ವಯಸ್ಸಾಗಿತ್ತು. ಹಾಗಾಗಿ ನಾನು ನನ್ನ ಗಳಿಕೆಯನ್ನು ಏರಿಸಿಕೊಳ್ಳಲು ಬಯಸಿದ್ದೆ," ಎಂದು ಹೇಳಿದ್ದಾರೆ.
ವಿಕೆಟ್ ಕೀಪರ್-ಬ್ಯಾಟರ್ 2019ರವರೆಗೆ ಕೋಲ್ಕತಾ ಫ್ರಾಂಚೈಸಿ ಪರ ಆಡಿದ್ದರು. ನಂತರ ಅವರು 3 ಕೋಟಿ ರು ಗಳಿಗೆ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿದ್ದರು. ನಂತರ ಅವರು ಎರಡು ಋತುಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು ಮತ್ತು 2021ರ ಅಭಿಯಾನದ ಅಂತ್ಯದಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ್ದರು.
WI vs PAK: 18ನೇ ಒಡಿಐ ಶತಕ ಸಿಡಿಸಿ ಬ್ರಿಯಾನ್ ಲಾರಾ ಸನಿಹ ಬಂದ ಶೇಯ್ ಹೋಪ್!
"ನಾನು ಕೆಕೆಆರ್ ತಂಡದ ನಾಯಕತ್ವದ ಗುಂಪಿನಲ್ಲಿ ಸಂಭಾಷಣೆ ನಡೆಸಿದೆ. ಅವರು ನನ್ನನ್ನು ಬಿಡುಗಡೆಗೊಳಿಸಲು ನಿರಾಕರಿಸಿದ್ದರು. ನೀವು ನಮ್ಮ ಪರ ಆಡಬೇಕು. ನೀವು ಸಾಧ್ಯವಾದಷ್ಟು ದೀರ್ಘಾವಧಿ ಆಡಬೇಕೆಂದು ಅವರು ಬಯಸಿದ್ದರು. ನಾನು ಕೂಡ ಅವರ ಬಳಿ ಮಾತನಾಡಿದ್ದೆ ಆದರೆ, ನನಗೆ 5 ಕೋಟಿ ರು. ಗಿಂತ ಹೆಚ್ಚಿನ ಮೊತ್ತವನ್ನು ಸಿಗಲಿಲ್ಲ. ಹಾಗಾಗಿ ನಾನು ಹೊರಗಡೆ ಹೋಗಲು ಬಯಿಸಿದ್ದೆ," ಎಂದು ಹೇಳಿದ್ದಾರೆ.