ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಎಸ್‌ಆರ್‌ಎಚ್‌ ವಿರುದ್ಧ ಜಾಶ್‌ ಹೇಝಲ್‌ವುಡ್‌ ಆಡ್ತಾರಾ? ಆಂಡಿ ಫ್ಲವರ್‌ ಸ್ಪಷ್ಟನೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮುಖ್ಯ ಕೋಚ್ ಆಂಡಿ ಫ್ಲವರ್‌, ವೇಗಿ ಜಾಶ್‌ ಹೇಝಲ್‌ವುಡ್‌ ಅವರು ಶೀಘ್ರದಲ್ಲೇ ಸಂಪೂರ್ಣ ಫಿಟ್ ಆಗಿ 2026ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರು, ಮಾರ್ಚ್ 28ರಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆಡುತ್ತಿಲ್ಲ.

ಜಾಶ್‌ ಹೇಝಲ್‌ವುಡ್‌ ಕಣಕ್ಕೆ ಇಳಿಯುವ ಬಗ್ಗೆ ಆರ್‌ಸಿಬಿ ಕೋಚ್ ಮಾಹಿತಿ.

ನವದೆಹಲಿ: ಆಸ್ಟ್ರೇಲಿಯಾದ ವೇಗದ ಬೌಲರ್ ಜಾಶ್‌ ಹೇಝಲ್‌ವುಡ್‌ (Josh Hazlewood) ಶೀಘ್ರದಲ್ಲೇ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಹೆಡ್‌ ಕೋಚ್‌ ಆಂಡಿ ಫ್ಲವರ್‌ (Andy Flower) ಎಂದು ಹೇಳಿದ್ದಾರೆ. 2025ರ ಅಕ್ಟೋಬರ್‌ನಿಂದ ಇಲ್ಲಿಯವರೆಗೂ ಹೇಜಲ್‌ವುಡ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿಲ್ಲ. ಗಾಯದ ಕಾರಣದಿಂದ ಅವರು ದಿ ಆಷಸ್‌ ಟೆಸ್ಟ್‌ ಸರಣಿ ಮತ್ತು 2026ರ ಪುರುಷರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದಲೂ ಹೊರಗುಳಿದಿದ್ದರು.

ಕ್ರಿಕೆಟ್‌ ಆಸ್ಟ್ರೇಲಿಯಾ ಹೇಳಿಕೆಯ ಪ್ರಕಾರ ಜಾಶ್‌ ಹೇಝಲ್‌ವುಡ್ ಜೊತೆಗೆ ಪ್ಯಾಟ್‌ ಕಮಿನ್ಸ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಕೂಡ 2026ರ ಐಪಿಎಲ್ ಆರಂಭಿಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಆದರೆ, ಹೇಝಲ್‌ವುಡ್ ಮಾರ್ಚ್ 26ರಂದು ಆರ್‌ಸಿಬಿ ತಂಡಕ್ಕೆ ಸೇರಿಕೊಂಡು ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಅವರು ತಂಡದೊಂದಿಗೆ ಲಘು ಅಭ್ಯಾಸಗಳಲ್ಲಿ ಭಾಗವಹಿಸುತ್ತಿರುವುದು ಕಾಣಿಸಿಕೊಂಡಿದೆ.

2026ರ ಐಪಿಎಲ್‌ ಟೂರ್ನಿಯ ಆರಂಭಕ್ಕೂ ಮುನ್ನ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಂಡಿ ಫ್ಲವರ್, ಜಾಶ್‌ ಹೇಝಲ್‌ವುಡ್ ಫಿಟ್ ಆಗಿರುವಂತೆ ಕಾಣಿಸುತ್ತಿದ್ದಾರೆ ಮತ್ತು ಅವರನ್ನು ಮತ್ತೆ ಡ್ರೆಸಿಂಗ್ ರೂಮ್‌ನಲ್ಲಿ ಕಾಣುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಅಪ್‌ಡೇಟ್‌ ಕೊಟ್ಟ ಆರ್‌ಸಿಬಿ ಕೋಚ್‌!

"ಜಾಶ್‌ ಹೇಝಲ್‌ವುಡ್ ಗುರುವಾರ ಇಲ್ಲಿಗೆ ಬಂದಿದ್ದಾರೆ ಮತ್ತು ಅವರು ಫಿಟ್ ಆಗಿರುವಂತೆ ಕಾಣಿಸುತ್ತಿದ್ದಾರೆ. ಅವರನ್ನು ಮತ್ತೆ ಡ್ರೆಸಿಂಗ್ ರೂಮ್‌ನಲ್ಲಿ ಹಾಗೂ ನಮ್ಮ ಮೀಟಿಂಗ್‌ಗಳಲ್ಲಿ ಕಾಣುವುದು ಸಂತೋಷಕರವಾಗಿದೆ. ಆದರೆ ಅವರು ಗುರುವಾರ ಬಂದಿರುವುದರಿಂದ ಶನಿವಾರದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯಕ್ಕೆ ಸಿದ್ಧರಾಗಿರುವುದಿಲ್ಲ. ಅವರ ಫಿಟ್‌ನೆಸ್ ಅನ್ನು ನಾವು ಸಮೀಪದಿಂದ ಗಮನಿಸುತ್ತೇವೆ ಮತ್ತು ಅವರು ಶೀಘ್ರದಲ್ಲೇ ಐಪಿಎಲ್‌ನಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದೇವೆ,” ಎಂದು ಫ್ಲವರ್ ತಿಳಿಸಿದ್ದರೆ.

ಜಾಶ್‌ ಹೇಝಲ್‌ವುಡ್ ಅವರು ಆರ್‌ಸಿಬಿ ಪರ 12 ಪಂದ್ಯಗಳಲ್ಲಿ 17.55ರ ಸರಾಸರಿಯಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: ಎಸ್‌ಆರ್‌ಎಚ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ, ನುವಾನ್‌ ತುಷಾರ್‌ ಔಟ್‌?

ಭಾರತೀಯ ವೇಗದ ಬೌಲರ್‌ಗಳ ಬಗ್ಗೆ ಸಂತೋಷ’

ಆರ್‌ಸಿಬಿ ತಂಡಕ್ಕೆ ಆರಂಭಿಕ ಕೆಲವು ಪಂದ್ಯಗಳಲ್ಲಿ ಜಾಶ್‌ ಹೇಝಲ್‌ವುಡ್‌ ಲಭ್ಯವಿರಲಿಲ್ಲದೇ ಇರುವುದು ಮಾತ್ರವಲ್ಲದೆ, ವೈಯಕ್ತಿಕ ಕಾರಣಗಳಿಂದ ಯಶ್‌ ದಯಾಳ್‌ ಸಂಪೂರ್ಣ ಸೀಸನ್‌ಗೆ ಹೊರಗುಳಿದಿದ್ದಾರೆ. ಆದರೆ ಹರಾಜಿನಲ್ಲಿ ಮಂಗೇಶ್‌ ಯಾದವ್‌ ಮತ್ತು ಅಭಿನಂದನ್‌ ಸಿಂಗ್‌ ಅವರನ್ನು ತಂಡ ಸೇರಿಸಿಕೊಂಡಿದ್ದು, ಜೊತೆಗೆ ರಾಸಿಖ್‌ ದಾರ್‌ ಸಲಾಮ್‌ ಹಾಗೂ ಭುವನೇಶ್ವರ್‌ ಕುಮಾರ್‌ ಕೂಡ ತಂಡದಲ್ಲಿದ್ದಾರೆ.

ಹೊಸ ಸೀಸನ್ ಮುನ್ನ ಭಾರತೀಯ ವೇಗದ ಬೌಲರ್‌ಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯ ಕೋಚ್ ಆಂಡಿ ಫ್ಲವರ್‌, ಅವಕಾಶ ಸಿಕ್ಕಾಗ ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್‌ ಹೇಝಲ್‌ವುಡ್‌!

“ನಮ್ಮ ತಂಡದಲ್ಲಿರುವ ಭಾರತೀಯ ವೇಗದ ಬೌಲರ್‌ಗಳ ಬಗ್ಗೆ ನಾವು ಸಂತೋಷವಾಗಿದ್ದೇವೆ. ರಸಿಖ್ ಕಳೆದ ವರ್ಷಕ್ಕಿಂತ ಉತ್ತಮ ಬೌಲರ್ ಆಗಿದ್ದು, ತನ್ನ ಆಟದ ಮೇಲೆ ತುಂಬಾ ಶ್ರಮಪಟ್ಟಿದ್ದಾರೆ. ಮಂಗೇಶ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಕ್ಕೂ ನಾವು ಸಂತೋಷಪಟ್ಟಿದ್ದೇವೆ ಮತ್ತು ಅಭಿನಂದನ್ ಅವರ ಇತ್ತೀಚಿನ ಪ್ರಗತಿಯೂ ನಮ್ಮನ್ನು ಉತ್ತೇಜಿಸಿದೆ. ಈ ಮೂವರು ಆಟಗಾರರಲ್ಲೂ ಉತ್ತಮ ಗುಣಗಳಿದ್ದು, ಅವರಿಗೆ ಅವಕಾಶ ಸಿಕ್ಕರೆ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವಿದೆ,” ಎಂದು ಫ್ಲವರ್ ತಿಳಿಸಿದ್ದಾರೆ.