ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಟೂರ್ನಿಯಲ್ಲಿ (IPL 2026) ಲಖನೌ ಸೂಪರ್ ಜಯಂಟ್ಸ್ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಬಳಿಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಅವರು ನಾಯಕತ್ವವನ್ನು ತೊರೆದಿದ್ದರು. ಈ ಈ ಸೀಸನ್‌ನಲ್ಲಿ ಎಲ್‌ಎಸ್‌ಜಿ ಆಡಿದ್ದ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ ನಾಲ್ಕರಲ್ಲಿ ಮಾತ್ರ ಹಾಗೂ ಇನ್ನುಳಿದ 10ರಲ್ಲಿ ಸೋಲು ಅನುಭವಿಸಿತು. ಇದರಿಂದ ಬೇಸತ್ತ ಪಂತ್ ನಾಯಕತ್ವವನ್ನು ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ (Aakash Chopra) ಅವರು, ಎಲ್‌ಎಸ್‌ಜಿ ತಂಡಕ್ಕೆ ನೂತನ ನಾಯಕನನ್ನು ಆರಿಸಿದ್ದಾರೆ.
2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿನಲ್ಲಿ ಲಖನೌ ಫ್ರಾಂಚೈಸಿ ಬೆಟ್ಟದಷ್ಟು ನಿರೀಕ್ಷೆಗಳೊಂದಿಗೆ ರಿಷಭ್ ಪಂತ್ ಅವರನ್ನು 27 ಕೋಟಿ ರು. ಗಳ ಮೊತ್ತಕ್ಕೆ ಖರೀದಿಸಿತ್ತು. ಆದರೆ, ಪಂತ್ ಅವರು ಫ್ರಾಂಚೈಸಿಯ ನಿರೀಕ್ಷೆಗಳನ್ನು ಹುಸಿ ಮಾಡಿದ್ದಾರೆ. ಕಳೆದ ಎರಡೂ ಸೀಸನ್‌ಗಳಲ್ಲಿ ಎಲ್‌ಎಸ್‌ಜಿ ತಂಡ ಪ್ಲೇಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಪಂತ್ ನಾಯಕತ್ವದಲ್ಲಿ ವಿಫಲವಾಗುವ ಜೊತೆಗೆ ಬ್ಯಾಟ್ಸ್‌ಮನ್ ಆಗಿಯೂ ವಿಫಲರಾದರು. ಇದರ ಪರಿಣಾಮ ರಿಷಭ್ ಪಂತ್ ನಾಯಕತ್ವವನ್ನು ತ್ಯಜಿಸಿದ್ದಾರೆ.
IPL 2026: ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕತ್ವವನ್ನು ತೊರೆದ ರಿಷಭ್ ಪಂತ್!
ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿ, ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ನಾಯಕನಾಗಬಲ್ಲ ಇಬ್ಬರು ಆಟಗಾರರ ಹೆಸರುಗಳನ್ನು ಆರಿಸಿದ್ದಾರೆ. ಮಿಚೆಲ್ ಮಾರ್ಷ್ ಹಾಗೂ ಏಡೆನ್ ಮಾರ್ಕ್ರಮ್ ಅವರಲ್ಲಿ ಒಬ್ಬರಿಗೆ ಎಲ್‌ಎಸ್‌ಜಿ ನಾಯಕತ್ವವನ್ನು ನೀಡಬೇಕೆಂದು ಚೋಪ್ರಾ ಸಲಹೆ ನೀಡಿದ್ದಾರೆ. ಈ ಇಬ್ಬರ ಜೊತೆಗೆ ಆಸ್ಟ್ರೇಲಿಯಾ ಒಡಿಐ ನಾಯಕತ್ವವನ್ನು ನಿರ್ವಹಿಸಿದ್ದ ಜಾಶ್ ಇಂಗ್ಲಿಸ್ ಅವರ ಹೆಸರನ್ನು ಕೂಡ ಸೂಚಿಸಿದ್ದಾರೆ.
ಏಡೆನ್ ಮಾರ್ಕ್ರಮ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಮಾರ್ಕ್ರಮ್ ಅವರ ನಾಯಕತ್ವದಲ್ಲಿ ಎಸ್‌ಆರ್‌ಎಚ್ ತಂಡ 2023ರ ಟೂರ್ನಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಮುಂದಿನ ಐಪಿಎಲ್ ಮಿನಿ ಆಕ್ಷನ್‌ನಲ್ಲಿ ಎಲ್‌ಎಸ್‌ಜಿ ಬಯಸಿದರೆ ಹೊಸ ನಾಯಕನನ್ನು ಖರೀದಿಸಬಹುದು.
IPL 2026 winner prize money: ಐಪಿಎಲ್ ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
ಎಲ್‌ಎಸ್‌ಜಿ ನಾಯಕನಾಗಿ ರಿಷಭ್ ಪಂತ್ ಅಂಕಿ ಅಂಶಗಳು
ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ರಿಷಭ್ ಪಂತ್ ಅವರ ನಾಯಕತ್ವದಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡ 28 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 10ರಲ್ಲಿ ಮಾತ್ರ. 2025ರ ಟೂರ್ನಿಯಲ್ಲಿ 6ರಲ್ಲಿ ಗೆಲುವು ಪಡೆಯುವ ಮೂಲಕ 12 ಅಂಕಗಳನ್ನು ಕಲೆ ಹಾಕಿತ್ತು. ಆದರೆ, ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿತ್ತು.
ಕೆಎಲ್ ರಾಹುಲ್ ನಾಯಕತ್ವದಲ್ಲಿ ಎಲ್‌ಎಸ್‌ಜಿ ಪ್ರದರ್ಶನ
2022ರ ಮೆಗಾ ಹರಾಜಿನಲ್ಲಿ ಕೆಎಲ್ ರಾಹುಲ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿಸಿತ್ತು ಹಾಗೂ ಕನ್ನಡಿಗನಿಗೆ ನಾಯಕತ್ವವನ್ನು ನೀಡಲಾಗಿತ್ತು. ಅವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಮೂರು ಸೀಸನ್‌ಗಳಲ್ಲಿ ಆಡಿತ್ತು. 2023ರಲ್ಲಿ ಎರಡನೇ ಅವಧಿ ವೇಳೆಗೆ ಕೆಎಲ್ ರಾಹುಲ್ ಅವರು ಗಾಯಕ್ಕೆ ತುತ್ತಾಗಿದ್ದರು ಹಾಗೂ ಕೊನೆಯ ಅವಧಿಯಲ್ಲಿ ಕೃಣಾಲ್ ಪಾಂಡ್ಯ ಅವರು ಎಲ್‌ಎಸ್‌ಜಿ ತಂಡವನ್ನು ಮುನ್ನಡೆಸಿದ್ದರು. 2024ರಲ್ಲಿ ಲಖನೌ ತಂಡ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
RCB vs GT: 2026ರ ಐಪಿಎಲ್ ಫೈನಲ್ ಆಡಲು ಅಹಮದಾಬಾದ್‌ಗೆ ತಡವಾಗಿ ಆಗಮಿಸಿದ ಗುಜರಾತ್ ಟೈಟನ್ಸ್!
ಇದಾದ ಬಳಿಕ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಅವರನ್ನು ಲಖನೌ ಫ್ರಾಂಚೈಸಿ ರಿಲೀಸ್ ಮಾಡಿತ್ತು. ನಂತರ ಮೆಂಟರ್ ಗೌತಮ್ ಗಂಭೀರ್ ಅವರು ಕೂಡ ಭಾರತ ತಂಡಕ್ಕೆ ಹೆಡ್ ಕೋಚ್ ಸ್ಥಾನವನ್ನು ಅಲಂಕರಿಸಿದ್ದರು. ಆ ಮೂಲಕ ರಾಹುಲ್ ಹಾಗೂ ಗಂಭೀರ್ ಅವರ ಪಾಲುದಾರಿಕೆ ಎಲ್‌ಎಸ್‌ಜಿಯಲ್ಲಿ ಅಂತ್ಯವಾಗಿತ್ತು.