ನವದೆಹಲಿ: ತಮ್ಮ ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) ಮರಳುವ ಮೂಲಕ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant), ಲಖನೌ ಸೂಪರ್ ಜಯಂಟ್ಸ್ ತಂಡದ ಜೊತೆಗಿನ ತಮ್ಮ ಎರಡು ವರ್ಷ ಪಯಣವನ್ನು ಮುಕ್ತಾಯಗೊಳಿಸಿದ್ದಾರೆ. ಅವರು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ 27 ಕೋಟಿ ರು. ಗಳ ದಾಖಲೆಯ ಮೊತ್ತಕ್ಕೆ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಅವರ ನಾಯಕತ್ವದಲ್ಲಿ ಎರಡೂ ಆವೃತ್ತಿಯಲ್ಲಿಯೂ ಎಲ್‌ಎಸ್‌ಜಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಯಿತು. ಇದರಿಂದ ಬೇಸತ್ತು ತನ್ನ ತವರು ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್ ಡೀಲ್ ಮೂಲಕ ಮರಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೆ 15 ಕೋಟಿ ರು. ಗಳಿಗೆ ಪಂತ್ ಮರಳಿದ್ದರೆ, ಕುಲ್ದೀಪ್ ಯಾದವ್ ಡೆಲ್ಲಿನಿಂದ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ 13.5 ಕೋಟಿ ರು ಗಳಿಗೆ ಹೋಗಿದ್ದಾರೆ. ಡೆಲ್ಲಿಗೆ ಮರಳಿದ ಒಂದು ದಿನದ ಬೆನ್ನಲ್ಲೆ ರಿಷಭ್ ಪಂತ್ ತಮ್ಮ ಮಾಜಿ ತಂಡ ಲಖನೌ ಸೂಪರ್ ಜಯಂಟ್ಸ್‌ಗೆ ಕೊನೆಯ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ʻಥ್ಯಾಂಕ್ಯೂ ತಂಡʼ ಎಂದು ಬರೆದುಕೊಂಡಿದ್ದಾರೆ.
ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?
ರಿಷಭ್ ಪಂತ್ ಅವರು ಪುನಃ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿದ್ದಾರೆ. ಅವರು 2016 ರಿಂದ 2024ರವರೆಗೆ 9 ಸೀಸನ್‌ಗಳ ಕಾಲ ಇದೇ ತಂಡದಲ್ಲಿ ಆಡಿದ್ದು, ಒಟ್ಟು 111 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಇದು ಡಿಸಿ ಪರ ಯಾವುದೇ ಆಟಗಾರ ಆಡಿದ ಅತಿ ಹೆಚ್ಚು ಪಂದ್ಯಗಳ ದಾಖಲೆಯಾಗಿದೆ. ಅವರು 2021 ರಿಂದ 2024ರವರೆಗೆ ನಾಲ್ಕು ಸೀಸನ್‌ಗಳಲ್ಲಿ 43 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು ಮತ್ತು ಸುಮಾರು ಒಂದು ದಶಕದ ಕಾಲ ಫ್ರಾಂಚೈಸಿಯ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು.
ಐಪಿಎಲ್ ಹೇಳಿಕೆ
" ರಿಷಭ್ ಪಂತ್ ಮತ್ತು ಕುಲ್ದೀಪ್ ಯಾದವ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜಯಂಟ್ಸ್ ನಡುವಿನ ಉನ್ನತ ಮಟ್ಟದ ಟ್ರೇಡ್ ಅನ್ನು ಪೂರ್ಣಗೊಳಿಸಿದ್ದಾರೆ. ಲಖನೌ ಸೂಪರ್ ಜಯಂಟ್ಸ್‌ನ ಮಾಜಿ ನಾಯಕ ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲಿದ್ದಾರೆ, ಇತ್ತ ಕುಲ್ದೀಪ್ ಯಾದವ್ ಎಲ್‌ಎಸ್‌ಜಿ ತಂಡಕ್ಕೆ ಸೇರಲಿದ್ದಾರೆ. ಇದು ಇತ್ತೀಚಿನ ಐಪಿಎಲ್ ಇತಿಹಾಸದ ಅತ್ಯಂತ ಮಹತ್ವದ ಆಟಗಾರ ವಿನಿಮಯಗಳಲ್ಲಿ ಒಂದಾಗಿದೆ," ಎಂದು ಐಪಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
"ಪಂತ್ 2016 ರಿಂದ 2024ರವರೆಗೆ ಒಂಬತ್ತು ಸೀಸನ್‌ಗಳಲ್ಲಿ ಈ ಫ್ರಾಂಚೈಸಿಗೆ ಸೇವೆ ಸಲ್ಲಿಸಿದ್ದು, ಒಟ್ಟು 111 ಪಂದ್ಯಗಳಲ್ಲಿ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎಂಬ ದಾಖಲೆ ಕೂಡ ಪಂತ್ ಹೆಸರಿನಲ್ಲಿದೆ. ಸುಮಾರು ಒಂದು ದಶಕದ ಕಾಲ ಫ್ರಾಂಚೈಸಿಯಲ್ಲಿ ಪಂತ್ ಕೀ ಆಟಗಾರರಾಗಿದ್ದರು. ಅವರು 2021 ರಿಂದ 2024ರವರೆಗೆ ನಾಲ್ಕು ಸೀಸನ್‌ಗಳಲ್ಲಿ 43 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು. ಟಾಟಾ ಐಪಿಎಲ್ 2025 ಆಟಗಾರರ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಎಲ್‌ಎಸ್‌ಜಿ 27 ಕೋಟಿ ರು.ಗಳ ದಾಖಲೆಯ ಮೊತ್ತಕ್ಕೆ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಬಿಡ್ ಆಗಿತ್ತು," ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.