ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ರಿಷಭ್‌ ಪಂತ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಇದೀಗ ತಂಡದ ನಾಯಕತ್ವದಲ್ಲಿ ಅಕ್ಷರ್‌ ಪಟೇಲ್‌ ಅವರನ್ನು ಮುಂದುವರಿಸಲಾಗುತ್ತಾ? ಅಥವಾ ಪಂತ್‌ಗೆ ನಾಯಕತ್ವವನ್ನು ನೀಡಲಾಗುತ್ತಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ನಾಯಕತ್ವ ಯಾರಿಗೆ?

ರಿಷಭ್‌ ಪಂತ್‌ಗೆ ಬೆಂಬಲ ವ್ಯಕ್ತಪಡಿಸಿದ ಅಕ್ಷರ್‌ ಪಟೇಲ್‌. -

Profile
Ramesh Kote Jun 24, 2026 4:23 PM

ನವದೆಹಲಿ: ರಿಷಭ್‌ ಪಂತ್‌ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದರೂ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2027) ಟೂರ್ನಿಯಲ್ಲಿಯೂ ತಾವೇ ತಂಡದ ನಾಯಕರಾಗಿ ಮುಂದುವರಿಯುವುದಾಗಿ ಅಕ್ಷರ ಪಟೇಲ್‌ (Axar Patel) ದೃಢಪಡಿಸಿದ್ದಾರೆ. ಆ ಮೂಲಕ ಪಂತ್ ಅವರು ಮುಕ್ತವಾಗಿ ಬ್ಯಾಟಿಂಗ್‌ ನಡೆಸಲು ಅನುವು ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ರಿಷಭ್‌ ಪಂತ್ ಅವರು 27 ಕೋಟಿ ರು ಮೊತ್ತದ ಒಪ್ಪಂದದೊಂದಿಗೆ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಸೇರ್ಪಡೆಯಾದ ಬಳಿಕ, ದೆಹಲಿ ಮೂಲದ ಫ್ರಾಂಚೈಸಿಯ ನಾಯಕನಾಗಿ ಅಕ್ಷರ್ ಪಟೇಲ್ ಅವರನ್ನು ನೇಮಿಸಲಾಗಿತ್ತು. ಆ ಮೂಲಕ ಪಂತ್ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಆದರೆ ಇದೀಗ ಎಲ್‌ಎಸ್‌ಜಿ, 15 ಕೋಟಿ ರು ಮೊತ್ತಕ್ಕೆ ಪಂತ್ ಅವರನ್ನು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್ ಮಾಡಿದ್ದು, ಪ್ರತಿಯಾಗಿ 13.25 ಕೋಟಿ ರು. ಗಳ ರಿಟೆನ್ಷನ್ ಮೌಲ್ಯದಲ್ಲಿ ಕುಲ್ದೀಪ್‌ ಯಾದವ್‌ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಪಂತ್ ತಂಡಕ್ಕೆ ಮರಳಿರುವುದರಿಂದ ನಾಯಕತ್ವ ಅಥವಾ ಜವಾಬ್ದಾರಿಗಳ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ ಎಂದು ಅಕ್ಷರ್ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಐಪಿಎಲ್‌ಗೂ ಮುನ್ನವೇ ಡೆಲ್ಲಿ ತಂಡ ಸೇರಿದ ರಿಷಭ್‌ ಪಂತ್‌

"ನಮ್ಮಿಬ್ಬರ ನಡುವೆ ಸ್ನೇಹಿತರಾಗಿ ಅಥವಾ ನಾಯಕ-ಆಟಗಾರರಾಗಿ ಎಂದಿಗೂ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಮೂಲತಃ ಅವರು ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಇದ್ದಾಗ ನನ್ನ ನಾಯಕನಾಗಿದ್ದರು ಮತ್ತು ನನಗೆ ಮಾರ್ಗದರ್ಶನ ನೀಡುತ್ತಿದ್ದರು. ಆಗಲೂ ನಮ್ಮ ನಡುವೆ 'ನಾನು ನಾಯಕ, ನೀನು ನಾನು ಹೇಳಿದಂತೆ ಮಾಡಬೇಕು' ಎಂಬ ರೀತಿಯ ಯಾವುದೇ ನಿಯಮ ಇರಲಿಲ್ಲ," ಎಂದು ಅಕ್ಷರ್‌ ಪಟೇಲ್‌ ಅವರು ಡೆಲ್ಲಿ ಕ್ಯಾಪಿಟಲ್ಸ್‌ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೊದಲ್ಲಿ ಹೇಳಿದ್ದಾರೆ.



"ನಾವು ಪರಸ್ಪರ ಅರ್ಥೈಸಿಕೊಳ್ಳುವಿಕೆಯೊಂದಿಗೆ ಕೆಲಸ ಮಾಡಿದ್ದೇವೆ. ನಾವು ಇಬ್ಬರೂ ಹಿರಿಯ ಆಟಗಾರರಾಗಿರುವುದರಿಂದ, ಯಾವುದೇ ಪರಿಸ್ಥಿತಿಯಲ್ಲಿ ಒಬ್ಬರ ಸಾಮರ್ಥ್ಯ ಮತ್ತು ಪಾತ್ರ ಏನು ಎಂಬುದು ಇಬ್ಬರಿಗೂ ಚೆನ್ನಾಗಿ ತಿಳಿದಿದೆ. ಸ್ನೇಹಿತನಾಗಿಯೂ ಮತ್ತು ನಾಯಕನಾಗಿಯೂ ನಾನು ಅವರಿಗೆ ಹೇಳುವುದೇನೆಂದರೆ, ಅವರಿಗೆ ತನ್ನ ಆಟದ ಬಗ್ಗೆ ಸಂಪೂರ್ಣ ಅರಿವು ಇದೆ. ನನ್ನಿಂದಾಗಲಿ ಅಥವಾ ಫ್ರಾಂಚೈಸಿಯಿಂದಾಗಲಿ ಅವರ ಮೇಲೆ ಯಾವುದೇ ಹೆಚ್ಚುವರಿ ಒತ್ತಡ ಇರುವುದಿಲ್ಲ. ಇದು ಅವರ ತವರು ತಂಡ. ಅವರು ಹಲವು ವರ್ಷಗಳಿಂದ ಇಲ್ಲಿ ಆಡಿದ್ದಾರೆ. ಡೆಲ್ಲಿ ಅವನ ಮನೆ ಇದ್ದಂತೆಯೇ. ಅವರಿಗೆ ನಾನು ಹೆಚ್ಚು ಹೇಳಬೇಕಾದ ಅಗತ್ಯವಿಲ್ಲ. ನಾಯಕನಾಗಿ ನನ್ನಿಂದ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆಯಲಿದೆ," ಎಂದು ಅವರು ತಿಳಿಸಿದ್ದಾರೆ.

ಪಂತ್‌ಗೆ ಸ್ವಾಗತ ಕೋರಿದ ಅಕ್ಷರ್‌ ಪಟೇಲ್‌

ಇದಲ್ಲದೆ, ಗುಜರಾತ್ ಮೂಲದ ಕ್ರಿಕೆಟಿಗ ಅಕ್ಷರ್‌ ಪಟೇಲ್ ಅವರು ಹರಿದ್ವಾರ ಮೂಲದ ರಿಷಭ್‌ ಪಂತ್‌ ಅವರಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ಮುಂಬರುವ ಋತುವಿಗೂ ಮುನ್ನ ತಂಡಕ್ಕೆ ಅವರ ಮರಳುವಿಕೆಯನ್ನು ಸಂತಸದ ಕ್ಷಣವೆಂದು ಬಣ್ಣಿಸಿದರು. ಜೊತೆಗೆ, ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿರುವ ಪಂತ್ ಶೀಘ್ರದಲ್ಲೇ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಲಿದ್ದಾರೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಡೆಲ್ಲಿ ಕ್ಯಾಪಿಟಲ್ಸ್‌ ಯುವ ಆಟಗಾರನ ವಿರುದ್ಧ ಬೆಂಗಳೂರಿನ ಯುವತಿಯಿಂದ ಲೈಂಗಿಕ ಕಿರುಕುಳ ಆರೋಪ

"ನೀವು ನಿಮ್ಮ ಆಟವನ್ನು ಆನಂದಿಸಿ ಮತ್ತು ನಿಮ್ಮ ಸ್ವಭಾವಕ್ಕೆ ನಿಷ್ಠನಾಗಿರಿ. ಫಾರ್ಮ್ ತಾತ್ಕಾಲಿಕ, ಆದರೆ ಕ್ಲಾಸ್ ಶಾಶ್ವತ. ನೀವು ಆ ಮಟ್ಟದ ಆಟಗಾರ. ನಮ್ಮ ಕಡೆಯಿಂದ ನಿಮಗೆ ಸಂಪೂರ್ಣ ಸ್ವಾತಂತ್ರ್ಯ ಇರುತ್ತದೆ. ಆದ್ದರಿಂದ ಯಾವುದೇ ಒತ್ತಡವಿಲ್ಲದೆ ನಿಮ್ಮ ಸಹಜ ಆಟವನ್ನು ಆಡಿ ಮತ್ತು ಅದನ್ನು ಆನಂದಿಸಿ. ನಿಮಗಾಗಿ ನನ್ನ ಸಂದೇಶ ಇದೇ," ಎಂದು 2025ರಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ಆಲ್‌ರೌಂಡರ್ ಅಕ್ಷರ್ ಪಟೇಲ್ ಹೇಳಿದ್ದಾರೆ.