ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Auction Highest Paid Players: ಕಳೆದ ಐಪಿಎಲ್‌ ಸೀಸನ್‌ನ ಟಾಪ್‌ 5 ದುಬಾರಿ ಆಟಗಾರರು!

IPL 2025 Auction Top Players: ಬಹುನಿರೀಕ್ಷಿರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಮಿನಿ ಹರಾಜು ಪ್ರಕ್ರಿತೆ ಡಿಸೆಂಬರ್‌ 16 ರಂದು ಮಂಗಳವಾರ ಅಬುಧಾಬಿಯಲ್ಲಿ ನಡೆಯಲಿದೆ. ಈ ಮಿನಿ ಹರಾಜಿಯಲ್ಲಿ 359 ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಅಂದ ಹಾಗೆ ಕಳೆದ 2025ರ ಐಪಿಎಲ್‌ ಟೂರ್ನಿಯ ಅತ್ಯಂತ ಐವರು ದುಬಾರಿ ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

2025ರ ಐಪಿಎಲ್‌ ಟೂರ್ನಿಯ ದುಬಾರಿ ಆಟಗಾರರು.

ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ(IPL 2026 Mini Auction) ಮಿನಿ ಹರಾಜಿಗೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿ ಇದೆ. ಡಿಸೆಂಬರ್‌ 16 ರಂದು ಅಬುಧಾಬಿಯಲ್ಲಿ ಒಟ್ಟು 359 ಆಟಗಾರರು ಮಿನಿ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಹರಾಜಿನ ಪಟ್ಟಿಯಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸ್ಟಾರ್‌ ಆಟಗಾರರು ಇದ್ದಾರೆ. ಕ್ಯಾಮೆರಾನ್‌ ಗ್ರೀನ್‌ (Cameron Green), ಡೇವಿಡ್‌ ಮಿಲ್ಲರ್‌ (David Miller), ರವಿ ಬಿಷ್ಣೋಯ್‌, ಸ್ಟೀವನ್‌ ಸ್ಮಿತ್‌, ವೆಂಕಟೇಶ್‌ ಅಯ್ಯರ್‌ ಸೇರಿದಂತೆ ಹಲವು ಸ್ಟಾರ್‌ಗಳು ಮಿನಿ ಹರಾಜಿನ ಪ್ರಮುಖ ಆಕರ್ಷಣೆಯಾಗಿದೆ.

ಅಂದ ಹಾಗೆ ಕಳೆದ ಬಾರಿ ಮೆಗಾ ಹರಾಜು ನಡೆದಿತ್ತು. ಹಾಗಾಗಿ ಈ ಬಾರಿ ಮಿನಿ ಹರಾಜು ನಡೆಯಲಿದೆ. 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಪ್ರಾಬಲ್ಯ ಸಾಧಿಸಿದ್ದರು. ಅವರು ಐಪಿಎಲ್‌ ಟೂರ್ನಿಯ ಇತಿಹಾಸದ ಅಂತ್ಯಂದ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಅಂದ ಹಾಗೆ ಇದೀಗ 2025ರ ಐಪಿಎಲ್‌ ಟೂರ್ನಿಯ ಮೆಗಾ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತ ಪಡೆದಿದ್ದ ಅಗ್ರ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2026 Retained Players: ತಂಡಗಳು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

2025ರ ಐಪಿಎಲ್‌ ಟೂರ್ನಿಯ ಟಾಪ್‌ ದುಬಾರಿ ಆಟಗಾರರು

1.ರಿಷಭ್‌ ಪಂತ್‌

ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರು 2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಐಪಿಎಲ್‌ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ 2021ರಲ್ಲಿ ಡಿಸಿಗೆ ನಾಯಕರಾಗಿ ಬಡ್ತಿ ಪಡೆದಿದ್ದರು. ಆದರೂ ಇವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರನ್ನು 2025ರ ಮೆಗಾ ಹರಾಜಿಗೆ ಬಿಡಲಾಗಿತ್ತು ಹಾಗೂ ಹರಾಜಿನಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ತಂಡ 27 ಕೋಟಿ ರು ಗಳಿಗೆ ಪಂತ್‌ ಅವರನ್ನು ಖರೀದಿಸಿತ್ತು. ಆ ಮೂಲಕ ಐಪಿಎಲ್‌ ಹರಾಜಿನಲ್ಲಿಯೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

2.ಶ್ರೇಯಸ್‌ ಅಯ್ಯರ್‌

ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಅತ್ಯಂತ ಮೌಲ್ಯಯುತ ಆಟಗಾರರಾಗಿದ್ದಾರೆ. ಅವರು ಬ್ಯಾಟಿಂಗ್‌ ಜತೆಗೆ ಅದ್ಭುತ ನಾಯಕತ್ವದ ಗುಣವನ್ನು ಹೊಂದಿದ್ದಾರೆ. ಇವರ ನಾಐಕತ್ವದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ 2024ರಲ್ಲಿ ಚಾಂಪಿಯನ್‌ ಆಗಿತ್ತು.ಆದರೂ ಅವರನ್ನು 2025ರ ಐಪಿಎಲ್‌ ಮೆಗಾ ಹರಾಜಿಗೆ ಬಿಡುಗಡೆ ಮಾಡಲಾಗಿತ್ತು. ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ 26.75 ಕೋಟಿ ರು. ಗಳಿಗೆ ಶ್ರೇಯಸ್‌ ಅಯ್ಯರ್‌ ಅವರನ್ನು ಖರೀದಿಸಿತ್ತು ಹಾಗೂ ಇವರ ನಾಯಕತ್ವದಲ್ಲಿ ಪಂಜಾಬ್‌ ಫೈನಲ್‌ಗೆ ಪ್ರವೇಶ ಮಾಡಿತ್ತು.

IPL 2026 Mini Auction: ಪಂಜಾಬ್‌ ಕಿಂಗ್ಸ್‌ ಟಾರ್ಗೆಟ್‌ ಮಾಡಬಲ್ಲ ಐವರು ಆಟಗಾರರು!

3.ವೆಂಕಟೇಶ ಅಯ್ಯರ್‌

ವೆಂಕಟೇಶ್‌ ಅಯ್ಯರ್‌ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಬಹುತೇಕ ಸೀಸನ್‌ಗಳನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಪರ ಕಳೆದಿದ್ದಾರೆ. 2024ರಲ್ಲಿ ಕೆಕೆಆರ್‌ ಚಾಂಪಿಯನ್‌ ಆಗಿದ್ದ ವೇಳೆ ಇವರು ಕೂಡ ಈ ತಂಡದ ಸದಸ್ಯರಾಗಿದ್ದರು.ಇದರ ಹೊರತಾಗಿಯೂ ಇವರನ್ನು 2025ರ ಮೆಗಾ ಹರಾಜಿಗೆ ರಿಲೀಸ್‌ ಮಾಡಲಾಗಿತ್ತು. ಆದರೆ, ಮತ್ತೆ ಕೋಲ್ಕತಾ ಫ್ರಾಂಚೈಸಿ 23.75 ಕೋಟಿ ರು. ಗಳಿಗೆ ಖರೀದಿಸಿತ್ತು.

4.ಅರ್ಷದೀಪ್‌ ಸಿಂಗ್‌

ಐಪಿಎಲ್‌ ಟೂರ್ನಿಯಲ್ಲಿ ಅರ್ಷದೀಪ್‌ ಸಿಂಗ್‌ ಅತ್ಯಂತ ಮೌಲ್ಯಯುತ ಆಟಗಾಎ. ಅವರು ಪಂಜಾಬ್‌ ಕಿಂಗ್ಸ್‌ ತಂಡದ ವೇಗದ ಬೌಲಿಂಗ್‌ ವಿಭಾಗದ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ. ಅವರನ್ನು ಕಳೆಸ ಸೀಸನ್‌ನಲ್ಲಿ ಪಂಜಾಬ್‌ ಫ್ರಾಂಚೈಸಿಯು 18 ಕೋಟಿ ರು. ಗಳಿಗೆ ಉಳಿಸಿಕೊಂಡಿತ್ತು. ಅದರಂತೆ ಅವರು ಪಂಜಾಬ್‌ ಕಳೆದ ಸೀಸನ್‌ನಲ್ಲಿ ಫೈನಲ್‌ಗೇರುವಲ್ಲಿ ಅರ್ಷದೀಪ್‌ ಪ್ರಮುಖ ಪಾತ್ರವನ್ನು ವಹಿಸಿದ್ದರು.

IPL 2026 Auction: ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಕೊಕ್‌ ನೀಡಲು ಬಲವಾದ ಕಾರಣ ತಿಳಿಸಿದ ರಿಕಿ ಪಾಂಟಿಂಗ್‌!

5.ಯುಜ್ವೇಂದ್ರ ಚಹಲ್‌

ಐಪಿಎಲ್‌ ಟೂರ್ನಿಯ ಮ್ಯಾಚ್‌ ವಿನ್ನಿಂಗ್‌ ಸ್ಪಿನ್ನರ್‌ಗಳ ಪೈಕಿ ಯುಜ್ವೇಂದ್ರ ಚಹಲ್‌ ಕೂಡ ಒಬ್ಬರು. ಅವರು ಕಳೆದ ಸೀಸನ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ನಿಂದ ಮೆಗಾ ಹರಾಜಿನಲ್ಲಿ ಪಂಜಾಬ್‌ ಕಿಂಗ್ಸ್‌ಗೆ ಸೇರ್ಪಡೆಯಾಗಿದ್ದರು. ಅವರನ್ನು ಪಂಜಾಬ್‌ ಕಿಂಗ್ಸ್‌ 18 ಕೋಟಿ ರು. ಗಳಿಗೆ ಖರೀದಿಸಿತ್ತು. ಅದರಂತೆ ಅವರು ತಮಗೆ ಸಿಕ್ಕ ಬೆಲೆಗೆ ತಕ್ಕಂತೆ ಉತ್ತಮ ಪ್ರದರ್ಶನವನ್ನು ತೋರಿದ್ದರು.