ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs MI: ʻಆಮೆಗತಿಯ ಬ್ಯಾಟಿಂಗ್‌ʼ-ವಿರಾಟ್‌ ಕೊಹ್ಲಿಯ ಆಟದ ಬಗ್ಗೆ ಆಕಾಶ್‌ ಚೋಪ್ರಾ ಅಪಸ್ವರ!

Aakash chopra on Virat Kohli's Slow Fifty: ಮುಂಬೈ ಇಂಡಿಯನ್ಸ್‌ ವಿರುದ್ಧ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ನಿಧಾನಗತಿಯಲ್ಲಿ ಅರ್ಧಶತಕ ಗಳಿಸಿದ್ದ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಅನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್‌ ನಿರೂಪಕ ಆಕಾಶ್‌ ಚೋಪ್ರಾ ಪ್ರಶ್ನಿಸಿದ್ದಾರೆ.

ವಿರಾಟ್‌ ಕೊಹ್ಲಿ ಸ್ಲೋ ಬ್ಯಾಟಿಂಗ್‌ ಅನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ.

ನವದೆಹಲಿ: ಭಾನುವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ (RCB vs MI Match Highlights) ನಿಧಾನಗತಿಯ ಅರ್ಧಶತಕಗಳಿಸಿದ ವಿರಾಟ್‌ ಕೊಹ್ಲಿಯ (Virat Kohli) ಬ್ಯಾಟಿಂಗ್‌ ಅನ್ನು ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash chopra) ಪ್ರಶ್ನೆ ಮಾಡಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ 38 ಎಸೆತಗಳಲ್ಲಿ ವಿರಾಟ್‌ ಕೊಹ್ಲಿ 50 ರನ್‌ ಗಳಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 240 ರನ್‌ಗಳನ್ನು ಕಲೆ ಹಾಕಿತ್ತು.

ಈ ಪಂದ್ಯದಲ್ಲಿ ಒಂದು ಕಡೆ ವಿರಾಟ್‌ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದ್ದರೆ, ಮತ್ತೊಂದು ಕಡೆ ಫಿಲ್‌ ಸಾಲ್ಟ್‌ ಹಾಗೂ ರಜತ್‌ ಪಾಟಿದಾರ್‌ 200ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಬಾರಿಸಿದ್ದರು. ಆದರೆ, ಕೊಹ್ಲಿ 131.58ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದರು. ಇದು ಆಕಾಶ್‌ ಚೋಪ್ರಾ ಅವರನ್ನು ಕೆರಳಿಸಿದೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, “ವಿರಾಟ್ ಕೊಹ್ಲಿ ಬಹಳ ನಿಧಾನವಾಗಿ ರನ್ ಗಳಿಸಿದ್ದಾರೆ. ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ತಂಡ ಗೆದ್ದಿರುವುದರಿಂದ ಅದು ಅಷ್ಟಾಗಿ ಗಮನಕ್ಕೆ ಬಂದಿಲ್ಲ. ಆದರೆ ಕ್ರಿಕೆಟ್ ದೃಷ್ಟಿಯಿಂದ ಪರಿಶೀಲಿಸಿದರೆ, ಅದು ಬಹಳ ನಿಧಾನ ಇನಿಂಗ್ಸ್ ಆಗಿತ್ತು. ಇಂತಹ ಇನಿಂಗ್ಸ್‌ ಈ ಮಟ್ಟದ ಸ್ಪರ್ಧೆಗೆ ಸರಿ ಹೊಂದುವುದಿಲ್ಲ, ಹಾಗೆಯೇ ವಿರಾಟ್ ಕೊಹ್ಲಿಯ ಮಟ್ಟಕ್ಕೂ ಸರಿಹೊಂದುವುದಿಲ್ಲ,” ಎಂದು ಹೇಳಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಔಟ್‌? ಎಲ್‌ಎಸ್‌ಜಿ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶೇಕಡಾ 100ರಷ್ಟು ಫಿಟ್‌ ಆಗಿದ್ದಾರೆಂಬುದು ಅನುಮಾನ. ಏಕೆಂದರೆ, ಬ್ಯಾಟಿಂಗ್‌ ವೇಳೆಯೂ ಕೊಹ್ಲಿ ವಿಶ್ವಾಸದಲ್ಲಿ ಆಡುತ್ತಿರಲಿಲ್ಲ. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲಿ ಅವರು ಕ್ಷೇತ್ರ ರಕ್ಷಣೆಗೆ ಆಗಮಿಸಿರಲಿಲ್ಲ.

"ವಿರಾಟ್‌ ಕೊಹ್ಲಿ ಕೂಡ ಇತರೆ ಬ್ಯಾಟ್ಸ್‌ಮನ್‌ಗಳ ರೀತಿ ವೇಗವಾಗಿ ರನ್‌ ಗಳಿಸಲು ಪ್ರಯತ್ನ ನಡೆಸುತ್ತಿದ್ದರು. ಬಹುಶಃ ಅವರು ಮನಸ್ಸು ಬೇರೆಡೆ ತೊಡಗಿಸಿಕೊಂಡಿದ್ದರಿಂದ, ವೈಡ್ ಬಾಲ್‌ಗಳಿಗೆ ಎರಡು ರಿವ್ಯೂಗಳನ್ನು ವ್ಯರ್ಥಗೊಳಿಸಿದ್ದರು. ಇದರಿಂದ ಅವರ ಮನೋಭಾವದ ಬಗ್ಗೆ ನನಗೆ ಕೆಲವು ಸೂಚನೆಗಳು ದೊರಕಿದವು. ಇದರ ಜೊತೆಗೆ ಅವರು ಗಾಯಗೊಂಡಿದ್ದರು. ಅದು ಕೂಡ ಒಂದು ಸಮಸ್ಯೆಯಾಗಿರಬಹುದು, ಏಕೆಂದರೆ ನಾನು ಮೊದಲ ಬಾರಿ ಕೊಹ್ಲಿ ಫೀಲ್ಡಿಂಗ್‌ನಿಂದ ಹೊರಗೆ ಕುಳಿತಿದ್ದನ್ನು ನೋಡಿದ್ದೇನೆ. ಹೀಗಾಗಿ ಅವರು ಗಾಯಗೊಂಡಿದ್ದರು ಮತ್ತು ಅವರ ಇನಿಂಗ್ಸ್‌ ಕೂಡ ನಿಧಾನವಾಗಿತ್ತು,” ಎಂದು ಅವರು ತಿಳಿಸಿದ್ದಾರೆ.

IPL 2026: ಮುಂದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಆಡುತ್ತಾರಾ? ಅಪ್‌ಡೇಟ್‌ ಕೊಟ್ಟ ಕೃಣಾಲ್‌ ಪಾಂಡ್ಯ!

ಈ ಐಪಿಎಲ್‌ ಸೀಸನ್‌ನಲ್ಲಿಯೇ ಮುಂಬೈ ಇಂಡಿಯನ್ಸ್‌ ಎದುರಿನ ಇನಿಂಗ್ಸ್‌ ಅತ್ಯಂತ ನಿಧಾನಗತಿಯಿಂದ ಕೂಡಿತ್ತು. ಆರ್‌ಸಿಬಿ ಬ್ಯಾಟರ್‌ ಇಲ್ಲಿಯವರೆಗೂ ಆಡಿದ ನಾಲ್ಕು ಇನಿಂಗ್ಸ್‌ಗಳಿಂದ 179 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು 162.72ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ.

ಆರ್‌ಸಿಬಿಗೆ ಮುಂದಿನ ಪಂದ್ಯ ಯಾವಾಗ?

ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದು, ರಾಜಸ್ಥಾನ್‌ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್‌ 15 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಕಾದಾಟ ನಡೆಸಲಿದೆ.