RCB vs MI: ಅರ್ಧಶತಕ ಬಾರಿಸಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ವಿರಾಟ್ ಕೊಹ್ಲಿ!
ಮುಂಬೈ ಇಂಡಿಯನ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಐದು ಬಾರಿ ಚಾಂಪಿಯನ್ಸ್ ವಿರುದ್ಧ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಮುರಿದ ವಿರಾಟ್ ಕೊಹ್ಲಿ. -
ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಮುಂಬೈ ಇಂಡಿಯನ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ (RCB vs MI) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಆರ್‌ಸಿಬಿ ಪರ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ 8814* ರನ್‌ಗಳ ಮೂಲಕ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇದರೊಂದಿಗೆ ಅವರು ಐಪಿಎಲ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳನ್ನು ಒಬ್ಬರಾಗಿದ್ದಾರೆ.
ಭಾನುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ, 38 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಮುಂಬೈ ಇಂಡಿಯನ್ಸ್ ಎದುರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಮಹತ್ವದ ದಾಖಲೆಯನ್ನು ಕಿಂಗ್ ಕೊಹ್ಲಿ ಬರೆದಿದ್ದಾರೆ. ಐದು ಚಾಂಪಿಯನ್ಸ್ ಎದುರು 1000 ರನ್‌ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಆರ್‌ಸಿಬಿ ಮಾಜಿ ನಾಯಕ ಭಾಜನರಾದರು. ತಮ್ಮ 36ನೇ ಇನಿಂಗ್ಸ್ ಕೊಹ್ಲಿ ಈ ಮೈಲುಗಲ್ಲು ತಲುಪಿದ್ದಾರೆ. ಆ ಮೂಲಕ ಕೆಎಲ್ ರಾಹುಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ರಾಹುಲ್ ಮುಂಬೈ ಇಂಡಿಯನ್ಸ್ ಎದುರು 21 ಇನಿಂಗ್ಸ್‌ಗಳಿಂದ 977 ರನ್‌ಗಳನ್ನು ಗಳಿಸಿದ್ದಾರೆ.
IPL 2026: 4000 ಐಪಿಎಲ್ ರನ್ ಗಳಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್!
ಮುಂಬೈ ಇಂಡಿಯನ್ಸ್ ಎದುರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ವಿರಾಟ್ ಕೊಹ್ಲಿ: 1003*(36 ಇನಿಂಗ್ಸ್)
ಕೆಎಲ್ ರಾಹುಲ್: 977 (21 ಇನಿಂಗ್ಸ್)
ಶಿಖರ್ ಧವನ್: 901(28 ಇನಿಂಗ್ಸ್)
ಅಜಿಂಕ್ಯ ರಹಾನೆ: 888 (29 ಇನಿಂಗ್ಸ್)
ಸುರೇಶ್ ರೈನಾ: 850 (36ಇನಿಂಗ್ಸ್)
A Virat Kohli fifty at Wankhede. Classic. 🫡👑
— Royal Challengers Bengaluru (@RCBTweets) April 12, 2026
Held the fort like a true King. Well played, 🐐!#PlayBold #ನಮ್ಮRCB #IPL2026 #MIvRCB pic.twitter.com/GJoMM1BX9Y
ಟಿ20 ಕ್ರಿಕೆಟ್‌ನಲ್ಲಿ ಏಕೈಕ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ಬರೆದಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1,188 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಅವರು ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದಿದ್ದರು. ಕೋಲ್ಕತಾ ನೈಟ್ ರೈಡರ್ಸ್ ಎದುರು ರೋಹಿತ್ ಶರ್ಮಾ 1,161 ರನ್‌ಗಳನ್ನು ಸಿಡಿಸಿದ್ದರು.
9000 ಐಪಿಎಲ್ ರನ್ ಸನಿಹದಲ್ಲಿ ಕೊಹ್ಲಿ
ಇದೀಗ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ದೊಡ್ಡ ದಾಖಲೆಯ ಸನಿಹದಲ್ಲಿದ್ದಾರೆ. ಕೊಹ್ಲಿ ಈಗಾಗಲೇ 8800ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದು, ಐಪಿಎಲ್‌ನಲ್ಲಿ 9000 ರನ್‌ಗಳನ್ನು ಪೂರೈಸುವ ವಿಶ್ವದ ಮೊದಲ ಆಟಗಾರನಾಗಲು ಇನ್ನೂ 200 ರನ್‌ಗಳ ಅಗತ್ಯವಿದೆ. ಅವರು ತೋರಿಸಿರುವ ಉತ್ತಮ ಫಾರ್ಮ್ ಗಮನಿಸಿದರೆ, ಪ್ರಸ್ತುತ ನಡೆಯುತ್ತಿರುವ 2026ರ ಐಪಿಎಲ್ ಟೂರ್ನಿಯಲ್ಲಿ ಈ ಮೈಲುಗಲ್ಲು ತಲುಪುವ ಸಾಧ್ಯತೆ ಇದೆ.
IPL 2026: ಸಿಎಸ್‌ಕೆ ತೆಗೆದುಕೊಂಡ ʻರಿಟೈರ್ಡ್ ಔಟ್ʼ ನಿರ್ಧಾರದ ಬಗ್ಗೆ ಆಯುಷ್ ಮ್ಹಾತ್ರೆ ಪ್ರಾಮಾಣಿಕ ಅಭಿಪ್ರಾಯ!
ಕ್ರಿಸ್ ಗೇಲ್ ದಾಖಲೆ ಮುರಿಯಲಿರುವ ಕೊಹ್ಲಿ
ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ 13,500ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ ಮತ್ತು ಟಿ20 ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಹೊಂದಿರುವ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯಲು ಇನ್ನೂ ಸುಮಾರು 1000 ರನ್‌ಗಳ ಅಗತ್ಯವಿದೆ. ಅವರು ಉತ್ತಮ ಫಾರ್ಮ್‌ನಲ್ಲಿ ರನ್ ಬಾರಿಸಿದರೆ 2027ರ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ದಾಖಲೆಯನ್ನು ಮುರಿಯಬಹುದಾಗಿದೆ.