ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs JAP ಭಾರತ ವಿರುದ್ದದ ಐತಿಹಾಸಿಕ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ ಪ್ರಕಟ!

Japan Squad for India's T20I: ಸೆಪ್ಟಂಬರ್‌ 22 ರಂದು ಸ್ಯಾನೊ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತದ ವಿರದ್ಧ ನಡೆಯುವ ಐತಿಹಾಸಿಕ ಏಕೈಕ ಟಿ20ಐ ಜಪಾನ್‌ ತಂಡವನ್ನು ಪ್ರಕಟಿಸಲಾಗಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ಇದೀಗ ಐಸಿಸಿ ಟಿ20ಐ ತಂಡಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದೆ.

ಭಾರತ ವಿರುದ್ಧದ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ ಪ್ರಕಟ.

ನವದೆಹಲಿ: ಭಾರತ ಹಾಗೂ ಜಪಾನ್‌ (IND vs JAP) ನಡುವಣ ಐತಿಹಾಸಿಕ ಏಕೈಕ ಟಿ20ಐ ಪಂದ್ಯ ಸೆಪ್ಟಂಬರ್‌ 22 ರಂದು ಸ್ಯಾನೊ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಐತಿಹಾಸಿಕ ಪಂದ್ಯಕ್ಕೆ ಜಪಾನ್‌ ತಂಡವನ್ನು (Japan T220 Squad) ಪ್ರಕಟಿಸಲಾಗಿದೆ. ಭಾರತದ ವಿರುದ್ಧದ ಪಂದ್ಯದ ಮೂಲಕ ಜಪಾನ್‌ ಏಷ್ಯಾ ಕಪ್‌ ಟೂರ್ನಿಗೆ ತಯಾರಿ ನಡೆಸಲಿದೆ. ಸದ್ಯ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಭಾರತ ತಂಡ ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಆಡಲಿರುವ ಅದೇ ಆಟಗಾರರ ತಂಡವನ್ನೇ ಭಾರತ ವಿರುದ್ಧದ ಏಕೈಕ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಭಾರತ ವಿರುದ್ಧದ ಪಂದ್ಯ ನಡೆದ ಎರಡು ದಿನಗಳ ಬಳಿಕವೇ ಜಪಾನ್‌ನ ಏಷ್ಯಾ ಕ್ರೀಡಾಕೂಟ ಅಭಿಯಾನ ಆರಂಭವಾಗಲಿದೆ. ಏಷ್ಯನ್ ಗೇಮ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಜಪಾನ್, ಐಸಿಸಿ ನಿಯಮಗಳ ಪ್ರಕಾರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅರ್ಹರಾಗಿದ್ದರೂ, ಏಷ್ಯನ್ ಗೇಮ್ಸ್ ನಿಯಮಗಳ ಪ್ರಕಾರ ಆಡಲು ಅನರ್ಹರಾಗಿರುವ ಆಟಗಾರರನ್ನು ತಂಡದಲ್ಲಿ ಸೇರಿಸಿಲ್ಲ. ಈ ನಿರ್ಧಾರವೇ ತಂಡದ ಸಂಯೋಜನೆಯ ಮೇಲೆ ಪ್ರಮುಖ ಪರಿಣಾಮ ಬೀರಿದೆ.

ಈ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಭಾರತ-ಜಪಾನ್ ಸುಜುಕಿ ಕಪ್ ಟಿ20 ಪಂದ್ಯ

ಭಾರತ ವಿರುದ್ಧದ ಈ ಪಂದ್ಯವು ‘ಸ್ಪೋರ್ಟ್ 75’ ಎಂಬ ಯೋಜನೆಯ ಮೊದಲ ಹೆಜ್ಜೆಯಾಗಿದೆ. ಈ ಯೋಜನೆಯು ಜಪಾನ್ ಪ್ರಧಾನಿ ಸನೇ ತಕೈಚಿ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ಒಪ್ಪಂದಕ್ಕೆ ಸಂಬಂಧಿಸಿದೆ. ಎರಡೂ ದೇಶಗಳ ನಡುವಿನ ಕ್ರೀಡಾ ಸಹಕಾರ ಮತ್ತು ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಭಾರತ 2036ರ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಗಳನ್ನು ಆಯೋಜಿಸಲು ಸಲ್ಲಿಸಿರುವ ಬಿಡ್ ಕೂಡ ಈ ವಿಸ್ತೃತ ಸಹಕಾರದ ಹಿನ್ನೆಲೆಯ ಪ್ರಮುಖ ಭಾಗವಾಗಿದೆ.

ಜಪಾನ್‌ನ ಟಿ20ಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ಕೆಂಡಲ್ ಕಾಡೋವಾಕಿ-ಫ್ಲೆಮಿಂಗ್ ಮತ್ತೊಮ್ಮೆ ತಂಡದ ನಾಯಕತ್ವ ವಹಿಸಲಿದ್ದಾರೆ. ಅವರ ಹೊರತಾಗಿ ಇಬ್ರಾಹಿಂ ತಕಹಾಶಿ ಮತ್ತು ಡೆಕ್ಲನ್ ಸುಜುಕಿ-ಮ್ಯಾಕ್‌ಕಾಂಬ್ ಮಾತ್ರ 50ಕ್ಕೂ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ತಂಡದ ಸದಸ್ಯರಾಗಿದ್ದಾರೆ.



ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಉದಯೋನ್ಮುಖ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಜೇಕ್ ಕುಸುಡಾ-ನೇರ್‍ನ ಮೊದಲ ಬಾರಿ ಜಪಾನ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇದೇ ವೇಳೆ ಅನುಭವಿ ಆಟಗಾರ ಟ್ಸುಯೋಶಿ ತಕಾಡಾ ಕೂಡ ತಂಡಕ್ಕೆ ಮರಳಿದ್ದಾರೆ. ತಕಾಡಾ ಅವರು 2013ರ ಐಸಿಸಿ ಈಸ್ಟ್ ಏಷ್ಯಾ-ಪೆಸಿಫಿಕ್ ಟ್ವೆಂಟಿ20 ಚಾಂಪಿಯನ್‌ಶಿಪ್‌ನಲ್ಲಿ ಜಪಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಹಲವು ವರ್ಷಗಳ ಬಳಿಕ ತಂಡಕ್ಕೆ ಮರಳಿರುವುದು ಜಪಾನ್ ತಂಡದ ಪ್ರಕಟಣೆಯ ಪ್ರಮುಖ ಅಂಶವಾಗಿದೆ.

ಗಾಯದಿಂದ ಹೊರಗುಳಿದಿದ್ದ ಸ್ಪಿನ್ನರ್ ವಾಪಸ್

ಸ್ಪಿನ್ನರ್ ಬೆಂಜಮಿನ್ ಇಟೊ-ಡೇವಿಸ್ ಕೂಡ ತಂಡಕ್ಕೆ ಮರಳಿದ್ದಾರೆ. ಈಸ್ಟ್ ಏಷ್ಯಾ-ಪೆಸಿಫಿಕ್ 2028 ಟಿ20 ವಿಶ್ವಕಪ್ ಸಬ್-ರೀಜನಲ್ ಕ್ವಾಲಿಫೈಯರ್‌ನಲ್ಲಿ ಕೈಗೆ ಗಾಯವಾಗಿದ್ದರಿಂದ ಅವರ ಅಭಿಯಾನ ಅರ್ಧದಲ್ಲೇ ಅಂತ್ಯಗೊಂಡಿತ್ತು. ಚಾರ್ಲಿ ಹರಾ-ಹಿಂಜೆ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ತಾಂಜಾನಿಯಾ ವಿರುದ್ಧ ಗೆಲುವು ಸಾಧಿಸಿದ್ದ ಜಪಾನ್‌ನ ಅಂಡರ್-19 ವಿಶ್ವಕಪ್ ತಂಡದ ಭಾಗವಾಗಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ ತೊರೆಯಲಿದ್ದಾರಾ ಕೆ.ಎಲ್‌ ರಾಹುಲ್? ಸ್ಪಷ್ಟನೆ ನೀಡಿದ ಫ್ರಾಂಚೈಸಿ

ಏಷ್ಯಾ ಕ್ರೀಡಾಕೂಟ, ಭಾರತ ವಿರುದ್ಧದ ಏಕೈಕ ಟಿ20ಐ ಪಂದ್ಯಕ್ಕೆ ಜಪಾನ್‌ ತಂಡ

  1. ಕೆಂಡೆಲ್ ಕಾಡೊವಾಕಿ-ಫ್ಲೆಮಿಂಗ್ (ನಾಯಕ)
  2. ಚಾರ್ಲಿ ಹರಾ-ಹಿಂಜೆ
  3. ಬೆಂಜಮಿನ್ ಇಟೊ-ಡೇವಿಸ್
  4. ಅಲೆಸ್ಟರ್ ಕಾಡೊವಾಕಿ-ಫ್ಲೆಮಿಂಗ್
  5. ಕೊಹೇ ಕುಬೊಟಾ
  6. ಜೇಕ್ ಕುಸುಡಾ-ನೈರ್ನ್
  7. ವಟಾರು ಮಿಯೌಚಿ (ವಿಕೆಟ್‌ಕೀಪರ್)
  8. ರಿಯೋ ಸಕುರಾನೊ-ಥಾಮಸ್
  9. ಅಲೆಕ್ಸ್ ಶಿರಾಯಿ-ಪಾಟ್ಮೋರ್ (ವಿಕೆಟ್‌ಕೀಪರ್)
  10. ಶೋಮಾ ಸುಗಾಯಾ-ಸ್ಲೇಟರ್
  11. ಡಿಕ್ಲಾನ್ ಸುಜುಕಿ-ಮ್ಯಾಕಾಂಬ್
  12. ತ್ಸುಯೋಶಿ ತಕಾಡಾ
  13. ಇಬ್ರಾಹಿಂ ತಕಹಾಶಿ
  14. ಮಕೋಟೊ ತಾನಿಯಾಮಾ
  15. ಲ್ಯಾಕ್ಲನ್ ಯಮಮೊಟೊ-ಲೇಕ್