ಈ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಭಾರತ-ಜಪಾನ್ ಸುಜುಕಿ ಕಪ್ ಟಿ20 ಪಂದ್ಯ
Japan vs India T20I: ಸೆಪ್ಟೆಂಬರ್ 23ರಂದು ಜಪಾನ್‌ನ ತೋಚಿಗಿ ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಇದಕ್ಕೆ ‘ಸುಜುಕಿ ಕಪ್’ ಎಂದು ಹೆಸೆರಿಡಲಾಗಿದೆ. ಜಪಾನ್ ಐಸಿಸಿ ಟಿ20ಐ ಶ್ರೇಯಾಂಕದಲ್ಲಿ 41 ನೇ ಸ್ಥಾನದಲ್ಲಿದೆ.
Japan vs India T20I -
ನವದೆಹಲಿ, ಸೆ.8: ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಮೊದಲ ಬಾರಿಗೆ ಜಪಾನ್ ವಿರುದ್ಧ ಅಂತಾರಾಷ್ಟ್ರೀಯ ಚುಟುಕು ಪಂದ್ಯವನ್ನಾಡಲಿದೆ. ಭಾರತ ಹಾಗೂ ಜಪಾನ್ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75ನೇ ವರ್ಷಾಚರಣೆಯ ಪ್ರಯುಕ್ತ ಈ ಪಂದ್ಯ ಆಯೋಜಿಸಲಾಗಿದೆ. ಈ ಪಂದ್ಯದ ಪ್ರಸಾರ ಮಾಹಿತಿಯನ್ನು ಜಪಾನ್ ಕ್ರಿಕೆಟ್ ಅಸೋಸಿಯೇಷನ್ (JCA) ದೃಢಪಡಿಸಿದೆ.
ಜಿಯೋಸ್ಟಾರ್ ಭಾರತದಲ್ಲಿ ದೂರದರ್ಶನ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಆನ್‌ಲೈನ್ ಸ್ಟ್ರೀಮಿಂಗ್ ಫ್ಯಾನ್‌ಕೋಡ್‌ನಲ್ಲಿ ಇರಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9:30 ಕ್ಕೆ ಆರಂಭವಾಗಲಿದ್ದು, ಜಪಾನ್‌ನಲ್ಲಿ ಸ್ಥಳೀಯ ಸಮಯ ಮಧ್ಯಾಹ್ನ 1:00 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವನ್ನು ಐಚಿ-ನಗೋಯಾದಲ್ಲಿ 2026 ರ ಏಷ್ಯನ್ ಕ್ರೀಡಾಕೂಟದ ಜೊತೆಗೆ ನಡೆಸಲಾಗುತ್ತಿದೆ.
ಸೆಪ್ಟೆಂಬರ್ 23ರಂದು ಜಪಾನ್‌ನ ತೋಚಿಗಿ ಸಾನೋ ಇಂಟರ್‌ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಇದಕ್ಕೆ ‘ಸುಜುಕಿ ಕಪ್’ ಎಂದು ಹೆಸೆರಿಡಲಾಗಿದೆ. ಜಪಾನ್ ಐಸಿಸಿ ಟಿ20ಐ ಶ್ರೇಯಾಂಕದಲ್ಲಿ 41 ನೇ ಸ್ಥಾನದಲ್ಲಿದೆ.
ಐಚಿ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅಂತಿಮ ಹಂತದ ಸಿದ್ಧತೆಯೂ ಇದಾಗಿರಲಿದೆ. ಸೆ.19 ರಿಂದ ಅಕ್ಟೋಬರ್ 4ರವರೆಗೆ ಏಷ್ಯಾಡ್ ನಡೆಯಲಿದ್ದು, ಭಾರತ ಪುರುಷರ ತಂಡ ಸೆ.28ರಂದು ಕ್ವಾರ್ಟರ್ ಫೈನಲ್‌ನಲ್ಲಿ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ವಯಸ್ಸಿನ ವಂಚನೆ; U19 ಆಸ್ಟ್ರೇಲಿಯಾ ಪ್ರವಾಸದಿಂದ ರೋಹಿತ್ ಯಾದವ್‌ಗೆ ಗೇಟ್‌ಪಾಸ್
"ಈ ಐತಿಹಾಸಿಕ ಪಂದ್ಯದ ವಿಶೇಷ ಹಕ್ಕುಗಳನ್ನು ಪಡೆದುಕೊಂಡಿರುವುದು ಐಟಿಡಬ್ಲ್ಯೂ ಯೂನಿವರ್ಸ್‌ಗೆ ಹೆಮ್ಮೆಯ ಮೈಲಿಗಲ್ಲು. ಭಾರತವು ಜಪಾನ್ ನೆಲದಲ್ಲಿ ಮೊದಲ ಬಾರಿಗೆ ಜಪಾನ್ ವಿರುದ್ಧ ಆಡುತ್ತಿರುವುದು ಜಾಗತಿಕ ಕ್ರಿಕೆಟ್‌ಗೆ ಒಂದು ಸ್ಮರಣೀಯ ಕ್ಷಣವಾಗಿದೆ. ಪ್ರಸಾರ ಮತ್ತು ವಾಣಿಜ್ಯ ಹೆಜ್ಜೆಗುರುತುಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದು ವೀಕ್ಷಕರಿಗೆ ಪ್ರೀಮಿಯಂ, ವಿಶ್ವ ದರ್ಜೆಯ ಅನುಭವವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ ಮತ್ತು ಬ್ರ್ಯಾಂಡ್‌ಗಳು ಮತ್ತು ಮಾಧ್ಯಮ ನೆಟ್‌ವರ್ಕ್‌ಗಳಿಗೆ ತಪ್ಪಿಸಿಕೊಳ್ಳಲಾಗದ, ಮೊದಲ-ಮೂವರ್ ವೇದಿಕೆಯನ್ನು ನೀಡುತ್ತದೆ" ಎಂದು ಜೆಸಿಎ ಸಿಇಒ ನವೋಕಿ ಅಲೆಕ್ಸ್ ಮಿಯಾಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ಐಚಿ-ನಗೋಯಾದಲ್ಲಿ 2026 ರ ಏಷ್ಯನ್ ಕ್ರೀಡಾಕೂಟದ ಜೊತೆಗೆ ನಡೆಯಲಿರುವ ಈ ಪಂದ್ಯವು ಭಾರತೀಯ ಕ್ರಿಕೆಟ್ ಅನ್ನು ಹೊಸ ಮಾರುಕಟ್ಟೆಗೆ ಕೊಂಡೊಯ್ಯಲು ಮತ್ತು ಜಪಾನ್‌ನಲ್ಲಿ ದೀರ್ಘಕಾಲೀನ ಗೋಚರತೆಯನ್ನು ನಿರ್ಮಿಸಲು ಅಭೂತಪೂರ್ವ ಅವಕಾಶವನ್ನು ಒದಗಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.