ನವದೆಹಲಿ: ಮುಂದಿನ ಏಕದಿನ ವಿಶ್ವಕಪ್ (ICC ODI World Cup 2026) ಟೂರ್ನಿಯಲ್ಲಿ ಭಾರತ ತಂಡದ ಪರ ಜಸ್‌ಪ್ರೀತ್ ಬುಮ್ರಾ (Jasprit Bumrah) ಹಾಗೂ ಭುವನೇಶ್ವರ್ ಕಮಾರ್ (Bhuvneshwar Kumar) ಇಬ್ಬರೂ ಕಣಕ್ಕೆ ಇಳಿಯಬೇಕೆಂದು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಆಗ್ರಹಿಸಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ಟಿ20ಐ ಸರಣಿಯ ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಿದ್ದಾರೆ. ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಇದರ ಬೆನ್ನಕ್ಕೆ ಆರ್ ಅಶ್ವಿನ್ ಅವರು ಈ ಹೇಳಿಕೆ ನೀಡಿದ್ದಾರೆ.
2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಭುವೇಶ್ವರ್ ಕುಮಾರ್ ಕೊನೆಯ ಬಾರಿ ಭಾರತ ತಂಡದ ಪರ ಆಡಿದ್ದರು. ಆದರೂ ಅವರು ವಿಶ್ವಾಸ ಕಳೆದುಕೊಳ್ಳದೆ ಸತತ ಪರಿಶ್ರಮ ಹಾಗೂ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದರು. ಇದರ ಫಲವಾಗಿ ಅವರು 2025 ಹಾಗೂ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 45 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಆರ್‌ಸಿಬಿ ಎರಡೂ ಋತುಗಳಲ್ಲಿ ಚಾಂಪಿಯನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅವರು ಇದೀಗ ಭಾರತ ಟಿ20 ತಂಡಕ್ಕೆ ಮರಳಿದ್ದಾರೆ.
ʻಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು 4 ವರ್ಷ ಬೇಕಾಯಿತುʼ: ದಿನೇಶ್ ಕಾರ್ತಿಕ್!
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಅಶ್ವಿನ್, "ಭುವನೇಶ್ವರ್ ಕುಮಾರ್ ಅವರಿಗಾಗಿ ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ಏಕೆಂದರೆ ಅವರು ತುಂಬಾ ಸರಳ ಸ್ವಭಾವದ ವ್ಯಕ್ತಿ. ಮತ್ತೊಮ್ಮೆ ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಅವರು ಸ್ವಲ್ಪ ಹೆಚ್ಚು ಕಠಿಣ ಪರಿಶ್ರಮ ಪಟ್ಟಿದ್ದರೆ, ಸಮಯವೂ ಅವರ ಪರವಾಗಿದ್ದರೆ ಮತ್ತು ಗಾಯಗಳಿಂದ ದೂರ ಉಳಿದಿದ್ದರೆ, ಅವರಲ್ಲಿದ್ದ ಕೌಶಲದಿಂದಾಗಿ ಅವರು ಭಾರತದ ಪರ ಎಲ್ಲಾ ಮಾದರಿಗಳಲ್ಲೂ ಅದ್ಭುತ ಆಟಗಾರನಾಗಬಹುದಿತ್ತು,” ಎಂದು ಅವರು ಹೇಳಿದ್ದಾರೆ.
"ನಿಮಗೆ ಸಿಂಗ್ ಬೇಕಾ? ಅವರು ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಒಂದು ಹಾದಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡಬೇಕಾ? ಇದನ್ನೂ ಅವರು ಮಾಡುತ್ತಾರೆ. ಎರಡೂ ಹಾದಿಯಲ್ಲಿ ಚೆಂಡನ್ನು ಸ್ವಿಂಗ್ ಮಾಡಬೇಕಾ? ಅದನ್ನೂ ಇವರು ಮಾಡುತ್ತಾರೆ. ಅದರಲ್ಲಿಯೂ ಅವರು ಯೋಗ್ಯ ವೇಗದಲ್ಲಿ ಬೌಲ್ ಮಾಡುತ್ತಾರೆ," ಎಂದು ಅವರು ತಿಳಿಸಿದ್ದಾರೆ.
ʻನಿಮ್ಮ ಕೊಡುಗೆಗೆ ಧನ್ಯವಾದʼ: ನಿರ್ಗಮಿತ ಸೆಲೆಕ್ಟರ್ ಅಜಿತ್ ಅಗರ್ಕರ್‌ಗೆ ಗೌತಮ್ ಗಂಭೀರ್ ಸಂದೇಶ!
“ಹೌದು, ಅವರು ಆಸ್ಟ್ರೇಲಿಯಾದಲ್ಲಿ ಒಂದೆರಡು ಪಂದ್ಯಗಳನ್ನು ಆಡಿದಾಗ ಸ್ವಲ್ಪ ಕಷ್ಟಪಡುತ್ತಿದ್ದರು. ಆದರೆ ಅವರಿಗೆ ಫಿಟ್‌ನೆಸ್ ಸಮಸ್ಯೆಗಳಿದ್ದವು. ಬ್ಯಾಟಿಂಗ್‌ನಲ್ಲೂ ಅವರು ಉತ್ತಮ ಕೊಡುಗೆ ನೀಡಬಲ್ಲರು. ಅವರ ಕೈಚಳಕ ತುಂಬಾ ಚೆನ್ನಾಗಿದೆ ಮತ್ತು ಅವರು ಅತ್ಯುತ್ತಮ ಕ್ಯಾಚರ್ ಕೂಡ ಹೌದು. ಭಾರತೀಯ ಕ್ರಿಕೆಟ್‌ಗೆ ಎಲ್ಲಾ ಮಾದರಿಗಳಲ್ಲೂ ಅವರು ಇನ್ನಷ್ಟು ಕೊಡುಗೆ ನೀಡಬಹುದಿತ್ತು ಎಂದು ನನಗೆ ಅನಿಸುತ್ತದೆ,” ಎಂದು ಅಶ್ವಿನ್ ಹೇಳಿದ್ದಾರೆ.
ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ಪ್ರವಾಸದಲ್ಲಿ ಫಿಟ್‌ನೆಸ್ ಮತ್ತು ಫಾರ್ಮ್ ಪ್ರದರ್ಶಿಸಿದರೆ, ಭಾರತ ತಂಡಕ್ಕೆ ಮರಳಿದ ತಕ್ಷಣವೇ ಅವರನ್ನು ಏಕದಿನ ತಂಡಕ್ಕೂ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮಾಜಿ ಸ್ಪಿನ್ನರ್ ಅಭಿಪ್ರಾಯಪಟ್ಟಿದ್ದಾರೆ.
IND vs WI: ಪದಾರ್ಪಣೆ ಪಂದ್ಯದಲ್ಲಿಯೇ 3 ವಿಕೆಟ್ ಕಿತ್ತು ಓಜಾ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ನಮನ್ ಧೀರ್!
“ಅವರು ಈಗ ನ್ಯೂಜಿಲೆಂಡ್‌ಗೆ ತೆರಳುತ್ತಿದ್ದಾರೆ. ಅವರು ಉತ್ತಮ ಪ್ರದರ್ಶನ ನೀಡಿದರೆ, ‘ಅವರನ್ನು ಏಕದಿನ ತಂಡಕ್ಕೂ ಆಯ್ಕೆ ಮಾಡಿ’ ಎಂದು ಎಲ್ಲರೂ ತಕ್ಷಣ ಹೇಳುತ್ತಾರೆ. ಆಯ್ಕೆದಾರರು ಅವರ ಪ್ರದರ್ಶನವನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಿದ್ದಾರೆ."
"ಅವರು ಚೆಂಡನ್ನು ಸ್ವಿಂಗ್ ಮಾಡಿ, ಉತ್ತಮ ಫಿಟ್‌ನೆಸ್ ತೋರಿಸಿದರೆ, ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಒಟ್ಟಿಗೆ ವಿಶ್ವಕಪ್‌ಗೆ ತೆರಳುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವಿಶ್ವಕಪ್‌ನ ಮೊದಲ ಎಸೆತವನ್ನು ಭುವನೇಶ್ವರ್ ಬೌಲ್ ಮಾಡುವುದನ್ನೂ ನಾವು ನೋಡಬಹುದು,” ಎಂದು ಅಶ್ವಿನ್ ತಿಳಿಸಿದ್ದಾರೆ.