ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನಿಮ್ಮ ಕೊಡುಗೆಗೆ ಧನ್ಯವಾದʼ: ನಿರ್ಗಮಿತ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ಗೆ ಗೌತಮ್‌ ಗಂಭೀರ್‌ ಸಂದೇಶ!

ಭಾರತ ಪುರುಷರ ಕ್ರಿಕೆಟ್‌ ತಂಡದ ಚೀಫ್‌ ಸೆಲೆಕ್ಟರ್‌ ಹುದ್ದೆಯಿಂದ ಕೆಳಗೆ ಇಳಿದ ಅಜಿತ್‌ ಅಗರ್ಕರ್‌ಗೆ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ. ಅಕ್ಟೋಬರ್‌ 4 ರಂದು ಅಗರ್ಕರ್‌ ಅವರ ಚೀಫ್‌ ಸೆಲೆಕ್ಟರ್‌ ಹುದ್ದೆಯ ಅವಧಿ ಅಂತ್ಯವಾಗಿತ್ತು. ಇದೀಗ ಬಿಸಿಸಿಐ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ನಿರ್ಗಮಿತ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ಗೆ ಗೌತಮ್‌ ಗಂಭೀರ್‌ ವಿಶೇಷ ಸಂದೇಶ!

ಅಜಿತ್‌ ಅಗರ್ಕರ್‌ಗೆ ಗೌತಮ್‌ ಗಂಭೀರ್‌ ವಿಶೇಷ ಸಂದೇಶ. -

Profile
Ramesh Kote Oct 7, 2026 3:52 PM

ನವದೆಹಲಿ: ಭಾರತ ಪುರುಷರ ಕ್ರಿಕೆಟ್‌ ತಂಡದ ಮುಖ್ಯ ಆಯ್ಕೆದಾರ ಹುದ್ದೆಯಿಂದ ಅಧಿಕೃತವಾಗಿ ಹೊರ ನಡೆದ ಅಜಿತ್‌ ಅಗರ್ಕರ್‌ಗೆ (Ajit Agarkar) ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಗೌರವಯುತ ಸಂದೇಶವನ್ನು ರವಾನಿಸಿದ್ದಾರೆ. ಅಕ್ಟೋಬರ್‌ 4 ರಂದು ಅಜಿತ್‌ ಅಗರ್ಕರ್‌ ಅವರ ಹೆಡ್‌ ಕೋಚ್‌ ಅವಧಿ ಅಂತ್ಯವಾಗಿತ್ತು. ಇದೀಗ ಬಿಸಿಸಿ ಚೀಫ್‌ ಸೆಲೆಕ್ಟರ್‌ ಹುದ್ದೆಯನ್ನು ತುಂಬಲು ಸೂಕ್ತ ಅಭ್ಯರ್ಥಿಗೆ ಅರ್ಜಿಯನ್ನು ಆಹ್ವಾನಿಸಿದೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಗೌತಮ್‌ ಗಂಭೀರ್‌ ಅವರು, ಭಾರತ ತಂಡಕ್ಕೆ ಚೀಫ್‌ ಸೆಲೆಕ್ಟರ್‌ ಆಗಿ ಅಜಿತ್‌ ಅಗರ್ಕರ್‌ ನೀಡಿದ ಕೊಡುಗೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ ಹಾಗೂ ಅಗರ್ಕರ್‌ ಅವರನ್ನು ಟೀಕಿಸಿದವರಿಗೆ ತಿರಗೇಟು ನೀಡಿದ್ದಾರೆ. ಈ ವಾರದ ಆರಂಭದಲ್ಲಿ ಅಗರ್ಕರ್‌ ಅವರ ಅವಧಿ ಅಂತ್ಯವಾಗಿತ್ತು. ಇವರ ಅವಧಿಯಲ್ಲಿಯೇ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ತಮ್ಮ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರು.

ಅಜಿತ್‌ ಅಗರ್ಕರ್‌ ಚೀಫ್‌ ಸೆಲೆಕ್ಟರ್‌ ಹುದ್ದೆಯನ್ನು ತೊರೆಯಲು ರೋಹಿತ್‌ ಶರ್ಮಾ, ವಿವಿಎಸ್‌ ಲಕ್ಷ್ಮಣ್‌ ಕಾರಣ?

ಅಜಿತ್‌ ಅಗರ್ಕರ್‌ಗೆ ಗೌತಮ್‌ ಗಂಭೀರ್‌ ಸಂದೇಶ

“ಪ್ರೀತಿಯ ಅಜಿತ್ ಭಾಯ್, ನಿಮ್ಮೊಂದಿಗೆ ಕೆಲಸ ಮಾಡಿದ್ದು ನನಗೆ ಅತ್ಯಂತ ಗೌರವದ ವಿಷಯ. ನೀವು ಗೆದ್ದ ಮೂರು ಐಸಿಸಿ ಟ್ರೋಫಿಗಳು ನಿಮ್ಮ ದೃಢ ನಂಬಿಕೆಗೆ ಸಾಕ್ಷಿಯಾಗಿವೆ. ‘ತಂಡವೇ ಮೊದಲು, ತಂಡವೇ ಎಲ್ಲಕ್ಕಿಂತ ಮುಖ್ಯ’ ಎಂಬ ಸಿದ್ಧಾಂತವನ್ನು ನೀವು ಸದಾ ಪಾಲಿಸಿದ್ದೀರಿ. ನಾನು ಹೇಳಲೇಬೇಕು, ಇತಿಹಾಸವು ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಮುಂದಿನ ಪ್ರಯತ್ನಗಳಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು!” ಎಂದು ಗೌತಮ್ ಗಂಭೀರ್ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.



ಆಯ್ಕೆ ಸಮಿತಿಯು ಭವಿಷ್ಯದ ತಂಡ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಿತ್ತು. ಅಜಿತ್ ಅಗರ್ಕರ್ ಅವರು ಹಲವು ಬಾರಿ ಅನುಭವಿ ಆಟಗಾರರಿಗಿಂತ ಯುವ ಆಟಗಾರರಿಗೆ ಅವಕಾಶ ನೀಡುವ ನಿಲುವು ತಳೆದಿದ್ದರು. ಅವರ ಕೆಲವು ನಿರ್ಧಾರಗಳು ನಿರೀಕ್ಷಿತ ಫಲಿತಾಂಶ ನೀಡದಿದ್ದರೂ, ಕೆಲ ನಿರ್ಧಾರಗಳಿಗೆ ಟೀಕೆಗಳು ವ್ಯಕ್ತವಾಗಿದ್ದರೂ, ಒಟ್ಟಾರೆ ಅವರ ಕಾರ್ಯವಿಧಾನದಲ್ಲಿ ಸ್ಥಿರತೆ ಇತ್ತು. ಭಾರತ ತಂಡ ಹಿಂದಿನತ್ತ ನೋಡುವ ಬದಲು ಭವಿಷ್ಯದತ್ತ ಸಾಗುತ್ತಲೇ ಇತ್ತು.

ಅಗರ್ಕರ್ ಅವರ ನಿರ್ಗಮನದ ಬಳಿಕವೇ ಭುವನೇಶ್ವರ್ ಕುಮಾರ್ ಅವರನ್ನು ಟಿ20 ಅಂತಾರಾಷ್ಟ್ರೀಯ ತಂಡಕ್ಕೆ ಮರಳಿ ಕರೆಸಿಕೊಂಡಿರುವುದು ಈ ನಿಲುವಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಸುಮಾರು ನಾಲ್ಕು ವರ್ಷಗಳ ಬಳಿಕ ಅನುಭವಿ ವೇಗಿ ಮತ್ತೆ ಭಾರತ ತಂಡಕ್ಕೆ ವಾಪಸಾಗಿದ್ದಾರೆ.

ʻಭುವನೇಶ್ವರ್‌ ಕುಮಾರ್‌ ಭಾರತ ತಂಡಕ್ಕೆ ಮರಳಲು 4 ವರ್ಷ ಬೇಕಾಯಿತುʼ: ದಿನೇಶ್‌ ಕಾರ್ತಿಕ್‌!

ಅಗರ್ಕರ್ ಅವರ ಮುಖ್ಯ ಆಯ್ಕೆದಾರರ ಅವಧಿ ಅಕ್ಟೋಬರ್ 4ರಂದು ಅಂತ್ಯಗೊಂಡಿದ್ದು, ಕೇವಲ 48 ಗಂಟೆಗಳ ಬಳಿಕ ಮಂಗಳವಾರ ಬಿಸಿಸಿಐ ಹೊಸ ಮುಖ್ಯ ಆಯ್ಕೆದಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. 2023ರ ಜುಲೈನಲ್ಲಿ ಹಿರಿಯ ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದ ಅಗರ್ಕರ್ ಅವರು ಮುಂದುವರಿಯಲು ಆಸಕ್ತಿ ಹೊಂದಿಲ್ಲ ಎಂಬ ವರದಿಗಳು ಈ ಹಿಂದೆಯೇ ಹರಿದಾಡಿದ್ದವು.

ಅಗರ್ಕರ್ ಅವರ ಅಧಿಕಾರಾವಧಿಯಲ್ಲೇ ಗೌತಮ್ ಗಂಭೀರ್ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಇಬ್ಬರೂ ಒಟ್ಟಾಗಿ ಕಾರ್ಯನಿರ್ವಹಿಸಿ 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.