ಮುಂಬೈ: ವನಿತೆಯರ ಏಕದಿನ ವಿಶ್ವಕಪ್ ಅಭಿಯಾನದಲ್ಲಿ ಟೀಂ ಇಂಡಿಯಾ ಫೈನಲ್ ಹಂತಕ್ಕೇರಲು ಮಹತ್ತರ ಪಾತ್ರ ವಹಿಸಿದ್ದ ಜೆಮಿಮಾ ರೊಡ್ರಿಗಸ್(Jemimah Rodrigues) ಅವರಿಗೆ ನಾಯಕತ್ವ ಪಟ್ಟ ಒಲಿದಿದೆ. ಜೆಮಿಮಾ ವಿಶ್ವಕಪ್ʼನ ಸೆಮಿ ಫೈನಲ್ʼನಲ್ಲಿ ಆಸೀಸ್ ತಂಡವನ್ನು ಸೋಲುಣಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಮುಂಬರುವ ಮಹಿಳಾ ಐಪಿಎಲ್ ಲೀಗಿ(WIPL 2026)ನ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಕ್ಕೆ ಜೆಮಿಮಾ ರೊಡ್ರಿಗಸ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತು ಇನ್ನಷ್ಟೇ ಅಧಿಕೃತ ಘೋಷಣೆ (ಡಿ.23)ಹೊರ ಬೀಳಬೇಕಿದೆ. ಜೆಮಿಯಾ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ 2026 ಮೆಗಾ ಆಕ್ಷನ್ ನಲ್ಲಿ ರಿಟೇನ್ ಮಾಡಲಾಗಿತ್ತು.
ಈ ಮುನ್ನ ಉಪನಾಯಕಿಯಾಗಿ ಜೆಮಿಮಾ ರೊಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು ಹಾಗೂ ಕಳೆದ ಎರಡು ವರ್ಷ ಡೆಲ್ಲಿ ಕ್ಯಾಪಿಟಲ್ಸ್ʼಗೆ ಆಸೀಸ್ ಆಟಗಾರ್ತಿ ಮೆಗ್ ಲ್ಯಾನಿಂಗ್(Meg Lanning) ನಾಯಕಿಯಾಗಿದ್ದರು.
ಇದನ್ನೂ ಓದಿ: Jemimah Rodrigues ವಿಶ್ವಕಪ್ ಸೆಮಿಯಲ್ಲಿ ಭಾರತ ಗೆಲುವಿಗೆ ಕಾರಣವಾದ ಜೆಮಿಮಾ ಮಂಗಳೂರು ಮೂಲದ ಹುಡುಗಿ!
ತಂಡದ ನಾಯಕತ್ವ ಬದಲಾವಣೆ ಕುರಿತಂತೆ ಕಳೆದ ತಿಂಗಳು ನಡೆದ ಮೆಜಾ ಆಕ್ಷನ್ʼನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ʼನ ಸಹ ಮಾಲೀಕ ಪಾರ್ಥ ಜಿಂದಾಲ್, ತಂಡಕ್ಕೆ ಭಾರತೀಯರೊಬ್ಬರು ನಾಯಕಿ ಯಾಗಬೇಕೆಂದು ನಿರ್ಧರಿಸಿದ್ದೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದರು.
2023ರಲ್ಲಿ ನಡೆದ ಹರಾಜಿನಲ್ಲಿ ಜೆಮಿಯಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಿಡ್ʼನಲ್ಲಿ ಖರೀದಿಸಿತ್ತು. ಜೊತೆಗೆ, ಶೆಫಾಲಿ ವರ್ಮಾ(Shefali Verma) , ಅನ್ನಾಬೆಲ್ ಸುಥರ್‌ಲ್ಯಾಂಡ್(Annabel Sutherland-Australia) (ಆಸ್ಟ್ರೇಲಿಯಾ),, ಮೆರಿಜನ್ನೆ ಕ್ಯಾಪ್(Marizanne Kapp-South Africa) (ದಕ್ಷಿಣ ಆಫ್ರಿಕಾ), ಹೊಸಮುಖ ನಿಕಿ ಪ್ರಸಾದ್ ಮುಂತಾದವರನ್ನು ಖರೀದಿಸಿತ್ತು. ನಾಲ್ವರು ವಿದೇಶಿ ಆಟಗಾರ್ತಿಯರನ್ನು ತಲಾ 2.2 ಕೋಟಿ ರೂ ಹಾಗೂ ನಿಕ್ಕಿ ಅವರನ್ನು 60 ಲಕ್ಷ ರೂ ನೀಡಿ ಖರೀದಿಸಲಾಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ನಾಯಕಿಯಾಗಿದ್ದ ಲ್ಯಾನಿಂಗ್ ಅವರು ಯುಪಿ ವಾರಿಯರ್ಸ್ ತಂಡದ ಪಾಲಾ ದರು. ಅವರನ್ನು ಯುಪಿ ವಾರಿಯರ್ಸ್ ತಂಡ 1.9 ಕೋಟಿ ರೂ. ಬಿಡ್ ಮಾಡಿತ್ತು.
WIPL 2026ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂತಿದೆ.
ಜೆಮಿಮಾ ರೋಡ್ರಿಗಸ್
ಶಫಾಲಿ ವರ್ಮಾ
ಅನ್ನಾಬೆಲ್ ಸದರ್ಲ್ಯಾಂಡ್
ಮರಿಜಾನ್ನೆ ಕಪ್
ನಿಕಿ ಪ್ರಸಾದ್
ಲಾರಾ ವೋಲ್ವಾರ್ಡ್
ಚಿನೆಲ್ಲೆ ಹೆನ್ರಿ
ನಲ್ಲಪುರರೆಡ್ಡಿ ಶ್ರೀ ಚರಣಿ
ಸ್ನೇಹ ರಾಣಾ
ಲಿಜೆಲ್ಲೆ ಲೀ
ದೀಯಾ ಯಾದವ್
ತಾನಿಯಾ ಭಾಟಿಯಾ
ನಂದನಿ ಶರ್ಮಾ
ಮಮತಾ ಮಡಿವಾಳ
ಲೂಸಿ ಹ್ಯಾಮಿಲ್ಟನ್
ಮಿನು ಮನ್ನಿ