ಡರ್ಬನ್: ಆಸ್ಟ್ರೇಲಿಯಾದ ವೇಗದ ಬೌಲರ್ ಜಾಶ್ ಹೇಝಲ್‌ವುಡ್ (Josh Hazlewood) ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (AUS vs SA) ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ, ಡರ್ಬನ್‌ನ ಕಿಂಗ್ಸ್‌ಮೀಡ್ ಮೈದಾನದಲ್ಲಿ ನಡೆದಿದ್ದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ 214 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 206 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಹೇಝಲ್‌ವುಡ್ ಪ್ರಮುಖ ಪಾತ್ರ ವಹಿಸಿದರು.
35ರ ವಯಸ್ಸಿನ ಹೇಝಲ್‌ವುಡ್ 16.5 ಓವರ್‌ಗಳಲ್ಲಿ 49 ರನ್ ನೀಡಿ ಆರು ವಿಕೆಟ್‌ಗಳನ್ನು ಕಬಳಿಸಿದರು. ರಯಾನ್ ರಿಕೆಲ್ಟನ್, ಡೇವಿಡ್ ಬೆಡಿಂಗ್‌ಹ್ಯಾಮ್, ವಿಯಾನ್ ಮಲ್ಡರ್, ಮಾರ್ಕೊ ಯೆನ್ಸನ್, ಸೈಮನ್ ಹಾರ್ಮರ್ ಮತ್ತು ಎನ್ರಿಕ್ ನೊರ್ಕಿಯಾ ಅವರ ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
IND vs WI 4th T20I: ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ವಿವರ!
ಡರ್ಬನ್‌ನಲ್ಲಿ ಹೇಜಲ್‌ವುಡ್ ವಿಶ್ವ ದಾಖಲೆ
ಡರ್ಬನ್‌ನಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ವಿದೇಶಿ ಬೌಲರ್ ದಾಖಲಿಸಿದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ಹೇಝಲ್‌ವುಡ್ ತಮ್ಮದಾಗಿಸಿಕೊಂಡರು. ಇದಕ್ಕೂ ಮೊದಲು ಪಾಕಿಸ್ತಾನದ ಸ್ಪಿನ್ನರ್ ಮುಷ್ತಾಕ್ ಅಹ್ಮದ್ 1998ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 78 ರನ್ ನೀಡಿ ಆರು ವಿಕೆಟ್ ಪಡೆದಿದ್ದು ದಾಖಲೆಯಾಗಿತ್ತು.
ಡರ್ಬನ್‌ನಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಎದುರಾಳಿ ತಂಡದ ವೇಗದ ಬೌಲರ್ ಆರು ವಿಕೆಟ್ ಪಡೆದ ಮೊದಲ ಸಾಧನೆಯೂ ಹೇಝಲ್‌ವುಡ್ ಅವರದ್ದಾಗಿದೆ. ಈ ಮೈದಾನದಲ್ಲಿ ವಿದೇಶಿ ವೇಗದ ಬೌಲರ್‌ನ ಹಿಂದಿನ ಅತ್ಯುತ್ತಮ ಪ್ರದರ್ಶನ 1923ರಲ್ಲಿ ದಾಖಲಾಗಿತ್ತು.
PAK vs SL: ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡ ಪ್ರಕಟ, ಕುಸಾಲ್ ಮೆಂಡಿಸ್ ನಾಯಕ!
75 ವರ್ಷಗಳ ಬಳಿಕ ವೇಗದ ಬೌಲರ್‌ನ ಶ್ರೇಷ್ಠ ಪ್ರದರ್ಶನ
ಡರ್ಬನ್‌ನಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನ ಒಟ್ಟಾರೆ ಬೌಲಿಂಗ್ ಸಾಧನೆಗಳ ಪಟ್ಟಿಯಲ್ಲಿ ಹೇಝಲ್‌ವುಡ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್‌ಗಳ ಪೈಕಿ ಅವರ ಪ್ರದರ್ಶನ ಮೂರನೇ ಅತ್ಯುತ್ತಮವಾಗಿದೆ. ತವರು ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್, ಗ್ರೇಮ್ ಪೊಲಾಕ್ ಮತ್ತು ಕ್ಯುವಾನ್ ಮೆಕಾರ್ಥಿ ಮಾತ್ರ ಈ ಇನಿಂಗ್ಸ್‌ನಲ್ಲಿ ಇದಕ್ಕಿಂತ ಉತ್ತಮ ಅಂಕಿಅಂಶಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ದಕ್ಷಿಣ ಆಫ್ರಿಕಾದ ನೆಲದಲ್ಲಿ ಎದುರಾಳಿ ತಂಡದ ಬೌಲರ್ ದಾಖಲಿಸಿದ ಅತ್ಯುತ್ತಮ ಪ್ರದರ್ಶನಗಳ ಪಟ್ಟಿಯಲ್ಲಿ ಹೇಝಲ್‌ವುಡ್ ಆರನೇ ಸ್ಥಾನ ಪಡೆದಿದ್ದಾರೆ.
ಅಗ್ರ ಸ್ಥಾನವನ್ನು ಉಳಿಸಿಕೊಂಡ ಸ್ಮೃತಿ ಮಂಧಾನಾ, ಮಹಿಳಾ ಟಿ20 ಶ್ರೇಯಾಂಕ ಹೇಗಿದೆ ನೋಡಿ!
ವಯಸ್ಸಿನಲ್ಲೂ ವಿಶೇಷ ಸಾಧನೆ
35 ವರ್ಷ ಮತ್ತು 274 ದಿನಗಳ ವಯಸ್ಸಿನಲ್ಲಿ ಹೇಝಲ್‌ವುಡ್ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯದ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದ ಮೂರನೇ ಹಿರಿಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಡರ್ಬನ್‌ನಲ್ಲಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್ ಪಡೆದ ಅತ್ಯಂತ ಹಿರಿಯ ವೇಗದ ಬೌಲರ್ ಎಂಬ ಹೆಗ್ಗಳಿಕೆಯನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ಹೇಝಲ್‌ವುಡ್ ಅವರ ಅಮೋಘ ಬೌಲಿಂಗ್ ಪ್ರದರ್ಶನ ಆಸ್ಟ್ರೇಲಿಯಾಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಲ್ಲದೆ, ಡರ್ಬನ್ ಟೆಸ್ಟ್ ಇತಿಹಾಸದಲ್ಲೂ ಹೊಸ ಅಧ್ಯಾಯ ಬರೆದಿದೆ.