ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಲಖನೌ ಸೂಪರ್ ಜಯಂಟ್ಸ್ ತಂಡದ ನಾಯಕ ರಿಷಭ್ ಪಂತ್‌ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಒತ್ತಡಕ್ಕೆ ಒಳಗಾಗದೆ, ನಿಮ್ಮ ಆಟವನ್ನು ನೀವು ಆನಂದಿಸಿ ಎಂದು ಕರೆ ನೀಡಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಪಂತ್ ಇನಿಂಗ್ಸ್ ಆರಂಭಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು ಹಾಗೂ ಅವರು ಆಡಿದ 9 ಎಸೆತಗಳಲ್ಲಿ 7 ರನ್ ಗಳಿಸಿದ ಬಳಿಕ ಅಚ್ಚರಿ ರೀತಿಯಲ್ಲಿ ರನ್‌ಔಟ್ ಆದರು. ಮುಖೇಶ್ ಕುಮಾರ್ ಅವರ ಭುಜಕ್ಕೆ ಚೆಂಡು ತಾಗಿ ಸ್ಟಂಪ್ಸ್‌ಗೆ ಬಡಿದಿತ್ತು, ಆ ಮೂಲಕ ಅವರು ರನ್‌ಔಟ್ ಆದರು. ಈ ಪಂದ್ಯದಲ್ಲಿ ಎಲ್‌ಎಸ್‌ಜಿ 6 ವಿಕೆಟ್‌ಗಳ ಸೋಲು ಅನುಭವಿಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ಬಳಿಕ ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್ ಗೊಯಂಕಾ ಅವರು ರಿಷಭ್ ಪಂತ್ ಹಾಗೂ ಕೋಚಿಂಗ್ ಸಿಬ್ಬಂದಿಯೊಂದಿಗೆ ಚರ್ಚೆಯಲ್ಲಿ ತೊಡಗಿದರು. ಬಳಿಕ ಅವರು ತಂಡದ ಕಮ್‌ಬ್ಯಾಕ್ ಮಾಡುವ ಸಾಮರ್ಥ್ಯದ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು. ಇಂತಹ ಕ್ಷಣಗಳು ಅರ್ಥಪೂರ್ಣವಾದುದನ್ನು ನಿರ್ಮಿಸಲು ಬಹುಮುಖ್ಯವೆಂದು ಗೊಯೆಂಕಾ ಒತ್ತಿ ಹೇಳಿದರು. ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದಗಳನ್ನು ತಿಳಿಸಿ, ತಂಡದ ಪ್ರದರ್ಶನದಲ್ಲಿ ತಿರುವು ಬರಲಿದೆ ಹಾಗೂ ಆಟಗಾರರು ಆಶಾವಾದಿಯಾಗಿರಲು ಮನವಿ ಮಾಡಿದರು.
IPL 2026: ವರುಣ್ ಚಕ್ರವರ್ತಿ ಬೌಲಿಂಗ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್ ನಾಯರ್!
ಕೆವಿನ್ ಪೀಟರ್ಸನ್ ಹೇಳಿದ್ದೇನು?
"ಎಲ್‌ಎಸ್‌ಜಿ ಬೌಲರ್‌ಗಳಿಂದ ಸಾಕಷ್ಟು ಶಿಸ್ತಿನ ಕೊರತೆ ಕಂಡುಬಂತು. ರಿಷಭ್ ಪಂತ್ ಅದನ್ನು ಉಲ್ಲೇಖಿಸಿ, ವಿಕೆಟ್ ಪಡೆಯಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕಾಗಿತ್ತು ಎಂದು ಹೇಳಿದರು, ಅದನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆ. ಆದರೆ ಎಲ್‌ಎಸ್‌ಜಿ ಬ್ಯಾಟಿಂಗ್ ಶಕ್ತಿ ಮತ್ತು ಡೆಪ್ತ್ ಗಮನಿಸಿದಾಗ, ರಿಷಭ್ ಪಂತ್ ನಿಜವಾಗಿಯೂ ಓಪನರ್ ಆಗಲು ಸೂಕ್ತವೇ? ಕಳೆದ ವರ್ಷ ಅವರ ಬ್ಯಾಟಿಂಗ್ ಕ್ರಮದೊಂದಿಗೆ ಹೋಲಿಸಿದರೆ, ಅವರು ಸ್ವಲ್ಪ ಹೆಚ್ಚು ಮುಂದೆ ಬಂದಿರುವಂತೆ ನನಗೆ ಅನಿಸುತ್ತದೆ," ಎಂದು ಕೆವಿನ್ ಪೀಟರ್ಸನ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಪಂತ್ ಮೂರನೇ ಕ್ರಮಾಂಕದಲ್ಲಿ ಆಡಬೇಕು
"ಕಳೆದ ವರ್ಷ ಅವರು ಬ್ಯಾಟಿಂಗ್ ಕೆಳ ಕ್ರಮಾಂಕಕ್ಕೆ ಸರಿದಿದ್ದರು, ಆದರೆ ಈಗ ಏಕಾಏಕಿ ‘ನಾನು ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತೇನೆ’ ಎಂದು ಬಂದಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರು ಕೇವಲ ತಮ್ಮ ಕ್ರಿಕೆಟ್ ಆಟವನ್ನು ಆನಂದಿಸಬೇಕು. ಮೂರನೇ ಕ್ರಮದಲ್ಲಿ ಬ್ಯಾಟ್ ಮಾಡುವ ಒತ್ತಡವನ್ನು ತಮಗೇ ಹಾಕಿಕೊಳ್ಳಬಾರದು, ಆ ಸ್ಥಾನದಲ್ಲಿರುವ ಸೌಲಭ್ಯವನ್ನು ಆನಂದಿಸಬೇಕು. ಓಪನಿಂಗ್ ಮಾಡಲು ಹೋಗುವ ಮೂಲಕ ಅವರು ತಮ್ಮ ಮೇಲೆಯೇ ಅಪಾರ ಒತ್ತಡವನ್ನು ಹಾಕಿಕೊಳ್ಳುತ್ತಿದ್ದಾರೆ," ಎಂದು ಅವರು ಹೇಳಿದ್ದಾರೆ.
IPL 2026: ʻವೈಭವ್ ಸೂರ್ಯವಂಶಿಯನ್ನು ನೋಡಿ ಕಲಿಯರಿʼ-ರಿಷಭ್ ಪಂತ್‌ಗೆ ಮೈಕಲ್ ವಾನ್ ಸಲಹೆ!
ಲಖನೌ ಗೆಲ್ಲುವ ಕನಸನ್ನು ಭಗ್ನಗೊಳಿಸಿದ ಸಮೀರ್ ರಿಝ್ವಿ
ಎಲ್‌ಎಸ್‌ಜಿ ತಂಡದ ಯಾವುದೇ ಬ್ಯಾಟ್ಸ್‌ಮನ್ 150ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ ಮತ್ತು ತಂಡ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲ್‌ಔಟ್ ಆಯಿತು. ಮಿಚೆಲ್ ಮಾರ್ಷ್ 28 ಬಾಲ್‌ಗಳಲ್ಲಿ 35 ರನ್ ಗಳಿಸಿದರೆ, ಅಬ್ದುಲ್ ಸಮದ್ 25 ಬಾಲ್‌ಗಳಲ್ಲಿ 36 ರನ್‌ಗಳನ್ನು ಬಾರಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಲುಂಗಿ ಎನ್‌ಗಿಡಿ ಮತ್ತು ಟಿ ನಟರಾಜನ್ ತಲಾ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು.
ಮೊಹಮ್ಮದ್ ಶಮಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕನಸಿನ ಆರಂಭ ಒದಗಿಸಿ, ಕೆಎಲ್ ರಾಹುಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಪ್ರಿನ್ಸ್ ಯಾದವ್ ಮತ್ತು ಮೊಹ್ಸಿನ್ ಖಾನ್ ಎಲ್‌ಎಸ್‌ಜಿಯನ್ನು 26/4 ಸ್ಥಿತಿಗೆ ತಳ್ಳಿದರು. ಆದರೆ ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್ ಸ್ಟಬ್ಸ್ ಐದನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟವಾಡಿ ಡಿಸಿ ತಂಡವನ್ನು ಮತ್ತೆ ಪಂದ್ಯಕ್ಕೆ ತಂದು ಜಯದತ್ತ ಮುನ್ನಡೆಸಿದರು. 47 ಬಾಲ್‌ಗಳಲ್ಲಿ ಅಜೇಯ 70 ರನ್ ಗಳಿಸಿದ ರಿಜ್ವಿಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಲಭಿಸಿತು.