IPL 2026: ವರುಣ್ ಚಕ್ರವರ್ತಿ ಬೌಲಿಂಗ್ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್ ನಾಯರ್!
ಕೋಲ್ಕತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಇತ್ತೀಚಿಗೆ ತಮ್ಮ ಪ್ರದರ್ಶನದಲ್ಲಿ ಕುಸಿತ ಕಂಡಿದ್ದಾರೆ. ಆದರೆ ಮುಖ್ಯ ಕೋಚ್ ಅಭಿಷೇಕ್ ನಾಯರ್, ವರುಣ್ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟಿದ್ದಾರೆ. ತಂಡ ಸಂಪೂರ್ಣವಾಗಿ ಚಕ್ರವರ್ತಿಯನ್ನು ಬೆಂಬಲಿಸುತ್ತಿದ್ದು, ಅವರ ಪ್ರದರ್ಶನ ಕುಗ್ಗಿರುವುದರಲ್ಲಿಯೂ ಮನೋವೈಜ್ಞಾನಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವರುಣ್ ಚಕ್ರವರ್ತಿಗೆ ಅಭಿಷೇಕ್ ನಾಯರ್ ಬೆಂಬಲ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿಯೂ ವೈಫಲ್ಯವನ್ನು ಮುಂದುವರಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು (Varun Chakravarthy ಹೆಡ್ ಕೋಚ್ ಅಭಿಷೇಕ್ ನಾಯರ್ (Abhishek Nayar) ಬೆಂಬಲಿಸಿದ್ದಾರೆ. ಅವರು ತಮ್ಮ ಆಟದಲ್ಲಿ ಕಮ್‌ಬ್ಯಾಕ್ ಮಾಡುವ ಬಗ್ಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಕೆಕೆಆರ್ ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಒಂದೇ ಒಂದು ವಿಕೆಟ್ ಪಡೆಯದ ಹೊರತಾಗಿಯೂ 48 ರನ್ ನೀಡಿ ಅತ್ಯಂತ ದುಬಾರಿಯಾಗಿದ್ದರು. ಈ ಪಂದ್ಯದ ಬಳಿಕ ಚೆನ್ನೈ ಮೂಲದ ಸ್ಪಿನ್ನರ್ ಕೌಶಲದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೂ ಕೆಕೆಆರ್ ಹೆಡ್ ಕೋಚ್ ಅಭಿಷೇಕ್ ನಾಯರ್ ತಮ್ಮ ಸ್ಪಿನ್ನರ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸನ್‌ರೈಸರ್ಸ್ ಹೈದರಬಾದ್ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಡ್ ಕೋಚ್ ಅಭಿಷೇಕ್ ನಾಯರ್, "ವರ್ಷಗಳ ಹಿಂದೆ, ಅವರು ಹಲವು ಕಷ್ಟಗಳನ್ನು ಅನುಭವಿಸಿದ್ದಾರೆ. ಫ್ರಾಂಚೈಸಿಯಾಗಿ ಸಹಾಯ ಸಿಬ್ಬಂದಿಯಂತೆ ನಾವು ಅವರಿಗೆ ಬೆಂಬಲ ನೀಡುತ್ತೇವೆ. ಯಾವುದೇ ಸಮಸ್ಯೆ ಇದೆ ಎಂಬುದು ನನಗೆ ತೋರುತ್ತಿಲ್ಲ. ಆದರೆ ಹೌದು, ತಂಡಗಳು ಅವರ ವಿರುದ್ಧ ಉತ್ತಮ ಆಟವಾಡುತ್ತಿವೆ. ಇದರಿಂದ ಅವರು ಕಮ್‌ಬ್ಯಾಕ್ ಮಾಡಲಾರರು ಎನ್ನುವುದಿಲ್ಲ. ಇದು ಈ ಹಿಂದೆ ಎದುರಿಸಿದ್ದ ಅವರ ಜೀವನದ ಮತ್ತೊಂದು ಸವಾಲು ಮಾತ್ರ," ಎಂದು ಹೇಳಿದ್ದಾರೆ.
IPL 2026: ʻವೈಭವ್ ಸೂರ್ಯವಂಶಿಯನ್ನು ನೋಡಿ ಕಲಿಯರಿʼ-ರಿಷಭ್ ಪಂತ್‌ಗೆ ಮೈಕಲ್ ವಾನ್ ಸಲಹೆ!
"ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಎಲ್ಲಾ ರೀತಿಯಲ್ಲಿ ಅವರನ್ನು ಬೆಂಬಲಿಸುತ್ತಿದ್ದೇವೆ. ಜಗತ್ತಿನ ಅಭಿಮಾನಿಗಳೂ ಸಹ ಹಾಗೆ ಮಾಡುವರು ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ಅಥವಾ ಭವಿಷ್ಯದಲ್ಲಿ ಅವರು ಈ ಹಿಂದಿನಂತೆ ಕಮ್‌ಬ್ಯಾಕ್ ಮಾಡಲಿದ್ದಾರೆಂದು ನಾವು ನಂಬುತ್ತೇವೆ. ಮನೋವೈಜ್ಞಾನಿಕವಾಗಿ ಅವರು ಈಗ ಬಹಳ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದರಲ್ಲಿ ನನಗೆ ಖಚಿತವಾಗಿ ನಂಬಿಕೆ ಇದೆ — ನಿಜವಾಗಿ ಹಿಂದಿನ ವರ್ಷಗಳಿಗಿಂತ ಹೆಚ್ಚು ಉತ್ತಮ ಸ್ಥಿತಿಯಲ್ಲಿದ್ದಾರೆ," ಎಂದು ವಿವರಿಸಿದ್ದಾರೆ.
ವರುಣ್ ಚಕ್ರವರ್ತಿಯ ಇತ್ತೀಚಿನ ಅಂಕಿಅಂಶಗಳನ್ನು ವಿಶ್ಲೇಷಿಸಿದಾಗ, ಅವರ ಪ್ರದರ್ಶನದಲ್ಲಿ ಕುಸಿತವಾಗಿರುವುದು ಸ್ಪಷ್ಟವಾಗುತ್ತದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು 14 ವಿಕೆಟ್‌ಗಳನ್ನು ಪಡೆದಿದ್ದರು. ಇದು ಜಸ್‌ಪ್ರೀತ್ ಬುಮ್ರಾ ಅವರ ಜೊತೆ ಜಂಟಿ ಸ್ಥಾನವನ್ನು ಪಡೆದಿದ್ದರು. ಆದರೆ ಅವರ ಎಕನಾಮಿ ರೇಟ್ 9.24 ಆಗಿತ್ತು. ವಿಶೇಷವಾಗಿ ದಕ್ಷಿಣ ಆಫ್ರಿಕಾ ವಿರುದ್ಧ 47 ರನ್ ನೀಡಿ ಅತ್ಯಂತ ದುಬಾರಿ ಎನಿಸಿಕೊಂಡಿದ್ದರು.
IPL 2026: ಲಖನೌ ಸೂಪರ್ ಜಯಂಟ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಧಿಕಾರಯುತ ಜಯ!
ಎದುರಾಳಿ ತಂಡಗಳು ಅವರನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದು ಈ ಅವಧಿಗೆ ಪ್ರಮುಖ ಕಾರಣವಾಗಿದೆ. ಒಂದು ಕಾಲದಲ್ಲಿ ಅವರ ಬೌಲಿಂಗ್ ಅನ್ನು ಅರ್ಥಮಾಡಿಕೊಳ್ಳಲು ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗುತ್ತಿತ್ತು. ಆದರೆ, ಈಗ ಎದುರಾಳಿ ಬ್ಯಾಟ್ಸ್‌ಮನ್‌ಗಳು ಲೀಲಾ-ಜಾಲವಾಗಿ ಬ್ಯಾಟ್ ಬೀಸುತ್ತಿದ್ದಾರೆ.