ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಪಂಜಾಬ್‌ ಕಿಂಗ್ಸ್‌ ಮಿನಿ ಹರಾಜಿಗೆ ಬಿಡುಗಡೆ ಮಾಡಲಿರುವ ಐವರು ಆಟಗಾರರು!

ಪಂಜಾಬ್ ಕಿಂಗ್ಸ್ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತನ್ನ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪಂಜಾಬ್‌ ಕಿಂಗ್ಸ್‌ ಕಳೆದ ಋತುವಿನಲ್ಲಿ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಫೈನಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು.

ಪಂಜಾಬ್‌ ಕಿಂಗ್ಸ್‌ ರಿಲೀಸ್‌ ಮಾಡಲಿರುವ ಐವರು ಆಟಗಾರರು.

ನವದೆಹಲಿ: ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿತ್ತು. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್‌ ತಂಡ (Punjab Kings), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ವಿರುದ್ದ ಕೇವಲ 6 ರನ್‌ಗಳಿಂದ ಸೋತು ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಪಂಜಾಬ್ ಇನ್ನೂ ತನ್ನ ಮೊದಲ ಐಪಿಎಲ್ ಟ್ರೋಫಿಗಾಗಿ ಕಾಯುತ್ತಿದೆ. 2026ರ ಐಪಿಎಲ್ ಹರಾಜಿಗೂ ಮುನ್ನ ಎಲ್ಲಾ ತಂಡಗಳು ನವೆಂಬರ್ 15 ರೊಳಗೆ ತಮ್ಮ ಉಳಿಸಿಕೊಂಡ ಆಟಗಾರರನ್ನು ಬಿಡುಗಡೆ ಮಾಡಬೇಕು. ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಬಹುದಾದ ಐದು ಆಟಗಾರರ ಬಗ್ಗೆ ನಾವು ನಿಮಗೆ ಹೇಳುತ್ತೇವೆ.

ಈ ಬಾರಿಯೂ ಪಂಜಾಬ್‌ ಕಿಂಗ್ಸ್‌ ತಂಡ ಚೊಚ್ಚಲ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದೆ. ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ತಂಡ, ಕಳೆದ ಆವೃತ್ತಿಯಂತೆ ಈ ಬಾರಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಇದರ ನಡುವೆ ಪಂಜಾಬ್‌ ತಂಡ, ತನ್ನ ಸಂಯೋಜನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಎದುರು ನೋಡುತ್ತಿದೆ. ಹಾಗಾಗಿ, ಪಂಜಾಬ್‌ ಮಿನಿ ಹರಾಜಿಗೂ ಮುನ್ನ ರಿಲೀಸ್‌ ಮಾಡಲಿರುವ ಐವರು ಆಟಗಾರರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

IPL 2026: ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ನಿಂದ ಹೊರ ಬೀಳಲಿರುವ ಆಟಗಾರರು!

1.ಸೂರ್ಯಾಂಶ್‌ ಶೆಡ್ಜ್

ದೇಶಿ ಕ್ರಿಕೆಟ್‌ನಲ್ಲಿ ಮುಂಬೈ ಪರ ಅವರ ಅದ್ಭುತ ಪ್ರದರ್ಶನದ ನಂತರ ಪಂಜಾಬ್ ಕಿಂಗ್ಸ್, ಸೂರ್ಯಂಶ್‌ ಶೆಡ್ಜ್ ಅನ್ನು ಸ್ವಾಧೀನಪಡಿಸಿಕೊಂಡಿತು. ಶೆಡ್ಜ್ ಮೂರು ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿ ಕೇವಲ 7 ರನ್ ಗಳಿಸಿದರು. ಅವರ ಗರಿಷ್ಠ ಸ್ಕೋರ್ 4. ಇನ್ನೂ ಬೌಲಿಂಗ್‌ನಲ್ಲಿ ಅವರು ಮೂರು ಓವರ್‌ಗಳಲ್ಲಿ 40 ರನ್‌ಗಳನ್ನು ಬಿಟ್ಟುಕೊಟ್ಟರು.

2.ಲಾಕಿ ಫರ್ಗ್ಯೂಸನ್‌

ಪಂಜಾಬ್ ಕಿಂಗ್ಸ್ ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಅವರೊಂದಿಗೆ ಬೇರ್ಪಡಬಹುದು. ಕಳೆದ ಋತುವಿನಲ್ಲಿ ಅವರು 4 ಪಂದ್ಯಗಳಲ್ಲಿ ಕೇವಲ 5 ವಿಕೆಟ್‌ಗಳನ್ನು ಪಡೆದಿದ್ದರು. 9 ಕ್ಕಿಂತ ಹೆಚ್ಚು ಎಕಾನಮಿ ದರದಲ್ಲಿ ರನ್‌ಗಳನ್ನು ಬಿಟ್ಟುಕೊಟ್ಟರು. ಅವರಿಗೆ 34 ವರ್ಷ ವಯಸ್ಸಾಗಿದೆ ಮತ್ತು ನ್ಯೂಜಿಲೆಂಡ್ ತಂಡದಿಂದ ದೀರ್ಘಕಾಲ ಹೊರಗಿದ್ದಾರೆ. ಹಾಗಾಗಿ ಅವರನ್ನು ಈ ಬಾರಿ ರಿಲೀಸ್‌ ಮಾಡಬಹುದು.

3.ಅಜಮತ್‌ವುಲ್ಲಾ ಒಮರ್ಜಾಯ್‌

ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಪರ ಅಜ್ಮತ್‌ವುಲ್ಲಾ ಒಮರ್ಜಾಯ್ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರಿಗೆ 9 ಪಂದ್ಯಗಳಲ್ಲಿ ಆಡಲು ಅವಕಾಶ ಸಿಕ್ಕಿತು. ಅವರು 5 ಇನಿಂಗ್ಸ್‌ಗಳಲ್ಲಿ 57 ರನ್ ಗಳಿಸಿದರು. ಬೌಲಿಂಗ್ ವಿಷಯದಲ್ಲಿ ಅವರು 10 ಕ್ಕಿಂತ ಹೆಚ್ಚು ಎಕಾನಮಿ ದರದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದರು.

IPL 2026: ರೋಹಿತ್ ಶರ್ಮಾರನ್ನು ಕೆಕೆಆರ್‌ಗೆ ಬಿಟ್ಟುಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮುಂಬೈ ಇಂಡಿಯನ್ಸ್‌!

4.ಆರೋನ್ ಹಾರ್ಡಿ

26ನೇ ವಯಸ್ಸಿನ ಆಸ್ಟ್ರೇಲಿಯಾದ ಆಲ್‌ರೌಂಡರ್ ಆರೋನ್ ಹಾರ್ಡಿ ಅವರನ್ನು ಪಂಜಾಬ್ 1.25 ಕೋಟಿ ರು. ಗಳಿಗೆ ಖರೀದಿಸಿತು. ಅವರು ಇಡೀ ಋತುವಿನಲ್ಲಿ ಬೆಂಚ್‌ನಲ್ಲಿಯೇ ಇದ್ದರು. ಟಿ20 ಕ್ರಿಕೆಟ್‌ನಲ್ಲಿ ಅವರ ದಾಖಲೆ ಉತ್ತಮವಾಗಿಲ್ಲ. ಅವರು 87 ಪಂದ್ಯಗಳಲ್ಲಿ 130 ಸ್ಟ್ರೈಕ್ ರೇಟ್‌ನಲ್ಲಿ 1516 ರನ್ ಗಳಿಸಿದ್ದಾರೆ. ಅವರ ಬೌಲಿಂಗ್‌ನಲ್ಲಿ ಕೇವಲ 44 ವಿಕೆಟ್‌ಗಳು ಮಾತ್ರ ಇವೆ.

5.ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಟಿ20 ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇದರ ಹೊರತಾಗಿಯೂ, ಐಪಿಎಲ್‌ನಲ್ಲಿ ಅವರ ದಾಖಲೆ ತುಂಬಾ ಕಳಪೆಯಾಗಿದೆ. ಅವರು ಲೀಗ್‌ನಲ್ಲಿ 19 ಬಾರಿ ಡಕ್ ಔಟ್ ಆಗಿದ್ದಾರೆ. ಅವರು ಹರಾಜಿಗೆ ಹೋದರೆ ಅವರು ಮಾರಾಟವಾಗುವ ಸಾಧ್ಯತೆ ಕಡಿಮೆ.