2025ರ ಏಷ್ಯಾ ಕಪ್ ಟೂರ್ನಿಯಿಂದ ನವೀನ್ ಉಲ್ ಹಕ್ ಔಟ್! ಆಫ್ಘನ್‌ಗೆ ಭಾರಿ ಹಿನ್ನಡೆ
2025ರ ಏಷ್ಯಾ ಕಪ್ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ, ಬಾಂಗ್ಲಾದೇಶದ ವಿರುದ್ಧ ಆಡಬೇಕಾಗಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ರಶೀದ್ ಖಾನ್ ನಾಯಕತ್ವದ ಅಫ್ಘಾನಿಸ್ತಾನ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಪ್ರಮುಖ ವೇಗಿ ನವೀನ್ ಉಲ್ ಹಕ್ ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಏಷ್ಯಾ ಕಪ್ ಟೂರ್ನಿಯಿಂದ ನವೀಮ್ ಉಲ್ ಹಕ್ ಔಟ್. -

ನವದೆಹಲಿ: ಅಫ್ಘಾನಿಸ್ತಾನ ತಂಡವು 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಗೆಲುವಿನೊಂದಿಗೆ ಆರಂಭಿಸಿತು. ರಶೀದ್ ಖಾನ್ ನಾಯಕತ್ವದ ಆಫ್ಘನ್ ತಂಡ ತನ್ನ ಮೊದಲ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಜಯಗಳಿಸಿತ್ತು. ತನ್ನ ಎರಡನೇ ಪ್ರಮುಖ ಪಂದ್ಯದಲ್ಲಿ (AFG vs BAN) ಬಾಂಗ್ಲಾದೇಶವನ್ನು ಎದುರಿಸಬೇಕಾಗಿದೆ. ಎರಡನೇ ಪಂದ್ಯಕ್ಕೂ ಮುನ್ನ ಅಫ್ಘಾನಿಸ್ತಾನ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಅನುಭವಿ ವೇಗದ ಬೌಲರ್ ನವೀನ್ ಉಲ್ ಹಕ್ (Naveen Ul Haq) ಅವರು ಗಾಯದಿಂದಾಗಿ 2025ರ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರು ಇನ್ನೂ ಭುಜದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ.
25ರ ಪ್ರಾಯದ ಬಲಗೈ ವೇಗದ ಬೌಲರ್ ನವೀನ್ ಉಲ್ ಹಕ್ ಅವರನ್ನು ಎಸಿಬಿ ವೈದ್ಯಕೀಯ ತಂಡವು ಉಳಿದ ಪಂದ್ಯಗಳಲ್ಲಿ ಆಡಲು ಸಂಪೂರ್ಣವಾಗಿ ಫಿಟ್ ಇಲ್ಲ ಎಂದು ಘೋಷಿಸಿದೆ. ಜೂನ್‌ನಿಂದ ಅವರು ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಅವರು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. 2024ರ ಡಿಸೆಂಬರ್‌ನಿಂದ ಅಫ್ಘಾನಿಸ್ತಾನ ಪರ ಆಡಲು ಅವರಿಗೆ ಅವಕಾಶ ಸಿಕ್ಕಿಲ್ಲ. ನವೀನ್ ಇದುವರೆಗೆ 15 ಏಕದಿನ ಪಂದ್ಯಗಳಲ್ಲಿ 22 ವಿಕೆಟ್‌ಗಳು ಮತ್ತು 48 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 67 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
IND vs PAK: ಮೊದಲ ಎಸೆತದಲ್ಲೇ ವಿಕೆಟ್ ಕಿತ್ತು ದಾಖಲೆ ಬರೆದ ಹಾರ್ದಿಕ್ ಪಾಂಡ್ಯ
ಅಬ್ದುಲ್ಲಾ ಅಹ್ಮದ್‌ಜಾಯ್‌ಗೆ ಸ್ಥಾನ
ನವೀನ್ ಉಲ್ ಹಕ್ ಬದಲಿಗೆ ಯುವ ಬೌಲರ್ ಅಬ್ದುಲ್ಲಾ ಅಹ್ಮದ್‌ಜಾಯ್ ಅವರನ್ನು ಅಫ್ಘಾನಿಸ್ತಾನ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. 22 ವರ್ಷದ ವೇಗಿ ಅಹ್ಮದ್‌ಜೈ ಬಲಗೈ ವೇಗದ ಬೌಲರ್. ಅವರು ಇತ್ತೀಚೆಗೆ ತ್ರಿಕೋನ ಸರಣಿಯಲ್ಲಿ ಯುಎಇ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಹ್ಮದ್‌ಜಾಯ್ 3 ಓವರ್‌ಗಳಲ್ಲಿ ಒಂದು ವಿಕೆಟ್ ಪಡೆದರು. ಇಲ್ಲಿಯವರೆಗೆ, ಅವರು ಮೂರು ಪ್ರಥಮ ದರ್ಜೆ ಪಂದ್ಯಗಳನ್ನು ಹೊರತುಪಡಿಸಿ 7 ಲಿಸ್ಟ್ ಎ ಮತ್ತು 11 ಟಿ20 ಪಂದ್ಯಗಳನ್ನು ಆಡಿದ್ದಾರೆ.
Asia Cup 2025: ಸಂಜು ಸ್ಯಾಮ್ಸನ್ ಬದಲು ಜಿತೇಶ್ ಶರ್ಮಾ ಆಡಬೇಕೆಂದ ಕೆ ಶ್ರೀಕಾಂತ್!
ಅಹ್ಮದ್‌ಜಾಯ್ ಅವರು ಈ ಹಿಂದೆ ಅಫ್ಘಾನಿಸ್ತಾನ ತಂಡದ ಮೀಸಲು ಆಟಗಾರನಾಗಿ ಸ್ಥಾನವನ್ನು ಪಡೆದಿದ್ದರು. ಇದೀಗ ಅವರು ನವೀನ್ ಉಲ್ ಹಕ್ ಸ್ಥಾನವನ್ನು ಆಫ್ಘನ್ ತಂಡದಲ್ಲಿ ತುಂಬಿದ್ದಾರೆ. ಅಂದ ಹಾಗೆ ಕಳೆದ ತ್ರಿಕೋನ ಸರಣಿಯಲ್ಲಿ ನವೀನ್ ಉಲ್ ಹಕ್ ಆಡಿರಲಿಲ್ಲ ಹಾಗೂ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿಯೂ ಕೂಡ ಆಡಿರಲಿಲ್ಲ. ಇದೀಗ ನವೀನ್ ತವರಿಗೆ ಪ್ರಯಾಣ ಬೆಳೆಸಲಿದ್ದು, ಪುನಶ್ಚೇತನ ಕಾರ್ಯದಲ್ಲಿ ತೊಡಗಬಹುದು.
🚨 SQUAD UPDATE 🚨
— Afghanistan Cricket Board (@ACBofficials) September 15, 2025
Afghanistan's veteran fast bowler, Naveen Ul Haq, has been ruled out of the ACC Men's T20 Asia Cup 2025. He is still recovering from a shoulder injury and has not been declared fit by the ACB medical team to participate in the remaining matches. Naveen will… pic.twitter.com/Sz4rJyV6k5
ತನ್ನ ಮೊದಲನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ, ಹಾಂಕಾಂಗ್ ತಂಡವನ್ನು 94 ರನ್‌ಗಳಿಂದ ಸೋಲಿಸಿತ್ತು. ಸೆಡಿಕುಲ್ಹಾ ಅಟಲ್ ಹಾಗೂ ಅಝಮತ್‌ವುಲ್ಲಾ ಒಮರ್ಜಾಯ್ ಅವರು ಆಫ್ಘನ್ ಪರ ತಲಾ ಅರ್ಧಶತಕಗಳನ್ನು ಬಾರಿಸಿದ್ದರು. ಇದೀಗ ಅಫ್ಘಾನುಸ್ತಾನ ತಂಡ ಸೆಪ್ಟಂಬರ್ 16 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಲಿದೆ.