ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻ2014ರಲ್ಲಿ ಫಿಲ್‌ ಹ್ಯೂಸ್‌, ಈಗ ಬೆನ್‌ ಸ್ಟೋಕ್ಸ್‌ʼ:ಇಂಗ್ಲೆಂಡ್‌ ನಾಯಕನ ಪ್ರಾಣ ಕಾಪಾಡಿದ ಹೆಲ್ಮೆಟ್‌!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ 2025-26ರ ಆಷಸ್‌ ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಎರಡನೇ ದಿನ ದೊಡ್ಡ ಅನಾಹುತ ತಪ್ಪಿದೆ. 2014ರಲ್ಲಿ ಆಸೀಸ್‌ ಮಾಜಿ ವಿಕೆಟ್‌ ಕೀಪರ್‌ ಫಿಲ್‌ ಹ್ಯೂಸ್‌ಗೆ ತಗುಲಿದ್ದ ಅದೇ ರೀತಿಯ ಬೌನ್ಸರ್‌, ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ಗೆ ಗುರುವಾರ ಬಡಿಯಿತು. ಆದರೆ, ಅವರನ್ನು ಹೆಲ್ಮೆಟ್‌ ಕಾಪಾಡಿದೆ.

ಫಿಲ್‌ ಹ್ಯೂಸ್‌ ರೀತಿ ಚೆಂಡನ್ನು ಹೆಲ್ಮೆಟ್‌ಗೆ ತಗುಲಿಸಿಕೊಂಡ ಬೆನ್‌ ಸ್ಟೋಕ್ಸ್‌.

ನವದೆಹಲಿ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಆಷಸ್‌ ಟ್ರೋಫಿ (Ashes) ಟೆಸ್ಟ್‌ ಸರಣಿಯ ಮೂರನೇ ಪಂದ್ಯದ ಎರಡನೇ ದಿನ ಪ್ರವಾಸಿ ತಂಡದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಅಪಾಯದಿಂದ ಪಾರಾದರು. ಆಸ್ಟ್ರೇಲಿಯಾ ವೇಗಿ ಮಿಚೆಲ್‌ ಸ್ಟಾರ್ಕ್‌ ಮಾರಕ ಬೌನ್ಸರ್‌ ಅನ್ನು ಸಮರ್ಥವಾಗಿ ಎದುರಿಸುವಲ್ಲಿ ಬೆನ್‌ ಸ್ಟೋಕ್ಸ್‌ ವಿಫಲರಾದರು. 2014ರಲ್ಲಿ ಫಿಲ್‌ ಹ್ಯೂಸ್‌ (Phil Hughes) ಅವರ ರೀತಿ ಬೆನ್‌ ಸ್ಟೋಕ್ಸ್‌ ಅವರು ಚೆಂಡನ್ನು ಹೆಲ್ಮೆಟ್‌ನ ಹಿಂಭಾಗಕ್ಕೆ ತಗುಲಿಸಿಕೊಂಡಿದ್ದಾರೆ. ಆದರೆ, ಅವರು ಬಳಸಿದ ಹೆಲ್ಮೆಟ್‌ ಹೆಚ್ಚಿನ ಸುರಕ್ಷತೆಯನ್ನು ಹೊಂದಿದ್ದರಿಂದ ಇಂಗ್ಲೆಂಡ್‌ ನಾಯಕ ಗಂಭೀರ ಗಾಯಕ್ಕೆ ತುತ್ತಾಗಿರುವುದರಿಂದ ಪಾರಾಗಿದ್ದಾರೆ. ಆದರೆ, ಈ ಘಟನೆ ದಿವಂಗತ ಫಿಲ್‌ ಹ್ಯೂಸ್‌ ಅವರ ಘಟನೆಯನ್ನು ನೆನಪಿಸುತ್ತದೆ.

ಹನ್ನೊಂದು ವರ್ಷಗಳ ಹಿಂದೆ ಅಂದರೆ 2014 ಕ್ರಿಕೆಟ್‌ ಇತಿಹಾಸದ ಅತ್ಯಂತ ಕರಾಳ ದಿನ ಎಂದೇ ಹೇಳಬಹುದು. ಏಕೆಂದರೆ ಆಸ್ಟ್ರೇಲಿಯಾದ 25ರ ವಯಸ್ಸಿನ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಫಿಲ್‌ ಹ್ಯೂಸ್‌ ತಲೆಗೆ ಚೆಂಡನ್ನು ತಗುಲಿಸಿಕೊಂಡು ಅಸುನೀಗಿದ್ದರು. ಶೆಫಿಲ್ಡ್‌ ಶೀಲ್ಡ್‌ ಟೂರ್ನಿಯ ಪಂದ್ಯದ ವೇಳೆ ಶೇನ್‌ ಎಬಾಟ್‌ ಅವರ ಮಾರಕ ಬೌನ್ಸರ್‌ ಅವರನ್ನು ಎದುರಿಸುವಾಗ ಚೆಂಡು ಫಿಲ್‌ ಹ್ಯೂಸ್‌ ಅವರ ಹೆಲ್ಮೆಟ್‌ ಹಿಂಭಾಗ ತಗುಲಿ ತೀವ್ರವಾಗಿ ಗಾಯಗೊಂಡಿದ್ದರು ಹಾಗೂ ಮೈದಾನದಲ್ಲಿ ಪ್ರಜ್ಞೆ ಕಳೆದುಕೊಂಡು ನೆಲಕ್ಕೆ ಕುಸಿದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಅವರು ಮೃತಪಟ್ಟಿದ್ದರು.

Ashes: ಬೆನ್‌ ಸ್ಟೋಕ್ಸ್‌-ಜೋಫ್ರಾ ಆರ್ಚರ್‌ ನಡುವೆ ಮಾತಿಕ ಚಕಮಕಿ! ವಿಡಿಯೊ ವೈರಲ್‌

45 ರನ್‌ ಗಳಿಸಿದ ಬೆನ್‌ ಸ್ಟೋಕ್ಸ್‌

ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 371 ರನ್‌ಗಳನ್ನು ಕಲೆ ಹಾಕಿದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಬ್ಯಾಟ್‌ ಮಾಡಿದ ನಾಯಕ ಬೆನ್‌ ಸ್ಟೋಕ್ಸ್‌ ಅವರು, 151 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ ಅಜೇಯ 45 ರನ್‌ಗಳನ್ನು ಕಲೆ ಹಾಕಿದರು. ಅಲ್ಲದೆ ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಅವರು ಕೂಡ ಬೆನ್‌ ಸ್ಟೋಕ್ಸ್‌ಗೆ ಸಾಥ್‌ ನೀಡಿದರು. ಆರ್ಚರ್‌ ಅವರು 48 ಎಸೆತಗಳಲ್ಲಿ ಅಜೇಯ 30 ರನ್‌ ಗಳಿಸಿದರು. ಸ್ಟೋಕ್ಸ್‌ ಹಾಗೂ ಆರ್ಚರ್‌ 9ನೇ ವಿಕೆಟ್‌ಗೆ 45 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇಂಗ್ಲೆಂಡ್‌ ಫಾಲೋ ಆನ್‌ನಿಂದ ಪಾರಾಗಲು ನೆರವು ನೀಡಿದ್ದರು. ಅಂತಿಮವಾಗಿ ಇಂಗ್ಲೆಂಡ್‌ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 68 ಓವರ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡು 213 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 158 ರನ್‌ಗಳ ಹಿನ್ನಡೆಯಲ್ಲಿದೆ.



ಇಂಗ್ಲೆಂಡ್‌ ಪರ ಹ್ಯಾರಿ ಬ್ರೂಕ್‌ 45 ರನ್‌ ಹಾಗೂ ಬೆನ್‌ ಡಕೆಟ್‌ 29 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ ಪರ ಪ್ಯಾಟ್‌ ಕಮಿನ್ಸ್‌ 3 ವಿಕೆಟ್‌ ಹಾಗೂ ಸ್ಕಾಟ್‌ ಬೋಲೆಂಡ್‌ ಮತ್ತು ನೇಥನ್‌ ಲಯಾನ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದರು.