ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊಹಮ್ಮದ್ ಅಝರುದ್ದೀನ್ ಸ್ಫೋಟಕ ಶತಕ: ಹಿಮಾಚಲ ಪ್ರದೇಶ ವಿರುದ್ಧ ಕೇರಳಕ್ಕೆ ಭರ್ಜರಿ ಜಯ!

ಮೊಹಮ್ಮದ್ ಅಝರುದ್ದೀನ್ ಅವರ 57 ಎಸೆತಗಳಲ್ಲಿ 101 ರನ್‌ಗಳ ಸ್ಫೋಟಕ ಶತಕದ ನೆರವಿನಿಂದ ಕೇರಳ ತಂಡ, ಹಿಮಾಚಲ ಪ್ರದೇಶ ವಿರುದ್ಧ 67 ರನ್‌ಗಳ ಭರ್ಜರಿ ಜಯ ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಕೇರಳ 268 ರನ್ ಗಳಿಸಿದರೆ, ಹಿಮಾಚಲ 201 ರನ್ ಗಳಿಸಲಷ್ಟೇ ಶಕ್ತವಾಯಿತು.

ಹಿಮಾಚಲ ಪ್ರದೇಶ ವಿರುದ್ಧ ಭರ್ಜರಿ ಶತಕ ಬಾರಿಸಿದ ಮೊಹಮ್ಮದ್‌ ಅಝರುದ್ದೀನ್‌.

ನ್ಯೂ ಚಂಡೀಗಢ: ಮೊಹಮ್ಮದ್ ಅಝರುದ್ದೀನ್ (Mohammed Azharuddeen) ಅವರ ಸ್ಪೋಟಕ ಶತಕದ ನೆರವಿನಿಂದ ಕೇರಳ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 (Syed Mushtaq Ali Trophy) ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧ 67 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಕೇರಳ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 268 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಗುರಿ ಬೆನ್ನಟ್ಟಿದ ಹಿಮಾಚಲ ಪ್ರದೇಶ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೇರಳಕ್ಕೆ ಆರಂಭಿಕರಾದ ಮೊಹಮ್ಮದ್ ಅಝರುದ್ದೀನ್ ಮತ್ತು ರೋಹನ್ ಕುನ್ನಮ್ಮಲ್ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಕೇವಲ 5.4 ಓವರ್‌ಗಳಲ್ಲಿ 82 ರನ್‌ಗಳ ಜೊತೆಯಾಟವಾಡಿದರು. ರೋಹನ್ 16 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 35 ರನ್ ಗಳಿಸಿದರು.

‘ನಾನು ಇದು ಟಿ20 ಪಂದ್ಯ ಅಂದುಕೊಂಡಿದ್ದೆ’: ವೈಭವ್‌ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್‌ ಬಗ್ಗೆ ಕ್ರಿಸ್‌ ಗೇಲ್‌ ಹೇಳಿದ್ದಿದು!

ಬಳಿಕ ನಾಯಕ ಸಂಜು ಸ್ಯಾಮ್ಸನ್ ಕ್ರೀಸ್‌ಗೆ ಆಗಮಿಸಿ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 21 ಎಸೆತಗಳನ್ನು ಎದುರಿಸಿದ ಸಂಜು 5 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 44 ರನ್ ಸಿಡಿಸಿದರು. ಮತ್ತೊಂದೆಡೆ ತಮ್ಮ ಸ್ಫೋಟಕ ಆಟ ಮುಂದುವರಿಸಿದ ಅಝರುದ್ದೀನ್ 57 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 101 ರನ್ ಗಳಿಸಿ ಶತಕದ ಸಂಭ್ರಮ ಆಚರಿಸಿದರು.

ಕೊನೆಯ ಹಂತದಲ್ಲಿ ಸಲ್ಮಾನ್ ನಿಜಾರ್ 15 ಎಸೆತಗಳಲ್ಲಿ ಅಜೇಯ 26 ರನ್ ಹಾಗೂ ಅಬ್ದುಲ್ ಬಾಸಿತ್ ಕೇವಲ 5 ಎಸೆತಗಳಲ್ಲಿ ಅಜೇಯ 24 ರನ್ ಸಿಡಿಸಿದರು. ಪರಿಣಾಮ ಕೇರಳ 268 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

IND vs NZ 2nd Test: ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಗೆಲುವಿನ ಮೇಲೆ ಭಾರತ ಚಿತ್ತ, ಮೊಹಮ್ಮದ್‌ ಸಿರಾಜ್‌ಗೆ ಸ್ಥಾನ?

ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಹಿಮಾಚಲ ಪ್ರದೇಶ

269 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಹಿಮಾಚಲ ಪ್ರದೇಶ ಆರಂಭದಲ್ಲೇ ಆಘಾತ ಎದುರಿಸಿತು. ಆರಂಭಿಕ ಎರಡು ವಿಕೆಟ್‌ಗಳನ್ನು ಕೇವಲ 8 ರನ್‌ಗಳಿಗೆ ಕಳೆದುಕೊಂಡಿತು. ಬಳಿಕ ಏಕಾಂತ್ ಸೇನ್ 27 ಎಸೆತಗಳಲ್ಲಿ 39 ರನ್ ಗಳಿಸಿದರೆ, ವೈಭವ್ ಕಲ್ಟಾ 28 ಎಸೆತಗಳಲ್ಲಿ ಅಜೇಯ 57 ರನ್ ಸಿಡಿಸಿದರು. ಆದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಕೇರಳ ಪರ ವೈಶಾಖ್ ಚಂದ್ರನ್ 2 ವಿಕೆಟ್ ಪಡೆದು ಮಿಂಚಿದರು. ಅಂತಿಮವಾಗಿ ಹಿಮಾಚಲ ಪ್ರದೇಶ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆ ಮೂಲಕ ಕೇರಳ 67 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ʻವೈಭವ್‌ ಸೂರ್ಯವಂಶಿಯನ್ನು ಬೆಂಚ್‌ ಕಾಯಿಸಬೇಡಿʼ: ಗೌತಮ್‌ ಗಂಭೀರ್‌ಗೆ ಬಾಲ್ಯದ ಕೋಚ್‌ ಮನವಿ!

ಸ್ಕೋರ್‌ ವಿವರ

ಕೇರಳ: 20 ಓವರ್‌ಗಳಿಗೆ 268/4 (ಮೊಹಮ್ಮದ್‌ಅಝರುದ್ದೀನ್‌ 101, ಸಂಜು ಸ್ಯಾಮ್ಸನ್‌ 44, ರೋಹನ್‌ ಕನ್ನುಮಲ್‌ 35; ಮೃದುಲ್‌ ಸುರೋಚ್‌ 33 ಕ್ಕೆ 2)

ಹಿಮಾಚಲ ಪ್ರದೇಶ: 20 ಓವರ್‌ಗಳಿಗೆ 201/6; ವೈಭವ್‌ ಕಲ್ಟಾ 57*, ಏಕಾಂತ್‌ ಸೇನ್‌ 39, ಆರ್ಯಮನ್‌ ಸಿಂಗ್‌ 30*; ವೈಶಾಖ್‌ ಚಂದ್ರನ್‌ 33 ಕ್ಕೆ 2)