ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂಗ್ಲೆಂಡ್‌ಗೆ ಕರೆತರಲು ಆರ್‌ಸಿಬಿ ಹೆಡ್‌ ಕೋಚ್‌ ಆಂಡಿ ಫ್ಲವರ್‌ ಮೇಲೆ ಕಣ್ಣಾಕಿದ ನಾಸೆರ್‌ ಹುಸೇನ್‌!

ಇಂಗ್ಲೆಂಡ್‌ ಟೆಸ್ಟ್ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಸ್ಥಾನಕ್ಕೆ ಜಿಂಬಾಬ್ವೆ ದಿಗ್ಗಜ ಆಂಡಿ ಫ್ಲವರ್‌ ಅವರನ್ನು ನೇಮಿಸಬೇಕೆಂದು ಆಂಗ್ಲರ ಮಾಜಿ ನಾಯಕ ನಾಸೆರ್‌ ಹುಸೇನ್‌ ಆಗ್ರಹಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ ತಂಡವನ್ನು ಅಗ್ರ ಸ್ಥಾನಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಹೆಡ್‌ ಕೋಚ್‌ ಮೇಲೆ ಕಣ್ಣಿಟ್ಟ ನಾಸೆರ್‌ ಹುಸೇನ್‌.

ನವದೆಹಲಿ: ಬೆಂಡನ್‌ ಮೆಕಲಮ್‌ ಅವರ ಇಂಗ್ಲೆಂಡ್‌ ಟೆಸ್ಟ್‌ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಹುದ್ದಗೆ ಜಿಂಬಾಬ್ವೆ ದಿಗ್ಗಜ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕೋಚ್‌ ಆಂಡಿ ಫ್ಲವರ್‌ (Andy Flower) ಅವರನ್ನು ನೇಮಿಸಬೇಕೆಂದು ಆಂಗ್ಲರ ಮಾಜಿ ನಾಯಕ ನಾಸೇರ್‌ ಹುಸೇನ್‌ (Nasser Hussain) ಆಗ್ರಹಿಸಿದ್ದಾರೆ. ಈ ಬಗ್ಗೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಬೋರ್ಡ್‌ಗೆ ಹುಸೇನ್‌ ಸಲಹೆ ನೀಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆಶಸ್ ಟೆಸ್ಟ್‌ ಸರಣಿಯಲ್ಲಿ 4-1 ಅಂತರದ ಸೋಲು ಅನುಭವಿಸಿದ ಬಳಿಕ ಬ್ರೆಂಡನ್ ಮೆಕಲಮ್ ಅವರ ನಾಲ್ಕು ವರ್ಷಗಳ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಅವಧಿ ಮುಕ್ತಾಯವಾಯಿತು. 2022ರಲ್ಲಿ ಕೋಚ್ ಹುದ್ದೆ ವಹಿಸಿಕೊಂಡ ನಂತರ ಮೊದಲ 13 ಟೆಸ್ಟ್ ಪಂದ್ಯಗಳಲ್ಲಿ 11 ಗೆಲುವು ದಾಖಲಿಸುವ ಮೂಲಕ ಇಂಗ್ಲೆಂಡ್ ತಂಡದ ಪ್ರದರ್ಶನದಲ್ಲಿ ಮಹತ್ತರ ಬದಲಾವಣೆ ತಂದಿದ್ದ ನ್ಯೂಜಿಲೆಂಡ್‌ನ ಮೆಕಲಮ್, ಕೊನೆಯ 12 ಪಂದ್ಯಗಳಲ್ಲಿ ಎಂಟು ಸೋಲು ಅನುಭವಿಸಿದ ಕಾರಣ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಕೋಚ್‌ನತ್ತ ಮುಖ ಮಾಡಿದೆ.

ಈ ಹಿನ್ನೆಲೆಯಲ್ಲಿ 2009ರಿಂದ 2014ರವರೆಗೆ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿದ್ದ ಆಂಡಿ ಫ್ಲವರ್ ಮತ್ತೆ ತಂಡದ ಜವಾಬ್ದಾರಿ ವಹಿಸಿಕೊಳ್ಳಲು ಅತ್ಯುತ್ತಮ ಆಯ್ಕೆ ಎಂದು ಮಾಜಿ ನಾಯಕ ನಾಸೆರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಂಡದಲ್ಲಿ ಕೊರತೆಯಾಗಿದ್ದ ಸೂಕ್ಷ್ಮ ಯೋಜನೆ ಮತ್ತು ಶಿಸ್ತುಬದ್ಧತೆಯನ್ನು ಮರುಸ್ಥಾಪಿಸುವ ಸಾಮರ್ಥ್ಯ ಫ್ಲವರ್ ಅವರಲ್ಲಿದೆ ಎಂದು ಅವರು ಹೇಳಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆ ರೇಸ್‌ನಲ್ಲಿ ರಾಹುಲ್ ದ್ರಾವಿಡ್!

ಆಂಡಿ ಫ್ಲವರ್ ಅವರ ಮಾರ್ಗದರ್ಶನದಲ್ಲಿ ಇಂಗ್ಲೆಂಡ್ ಮೂರು ಆಶಸ್ ಸರಣಿಗಳನ್ನು ಗೆದ್ದಿತ್ತು. ಅದರಲ್ಲೂ 2010-11ರಲ್ಲಿ ಆಸ್ಟ್ರೇಲಿಯಾದ ನೆಲದಲ್ಲಿ ದಾಖಲಿಸಿದ ಐತಿಹಾಸಿಕ ಆಶಸ್ ಸರಣಿ ಗೆಲುವು ಪ್ರಮುಖವಾಗಿತ್ತು. ಇದೇ ಅವಧಿಯಲ್ಲಿ ಇಂಗ್ಲೆಂಡ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೂ ಏರಿತ್ತು.

ಆಂಡಿ ಫ್ಲವರ್‌ ಪರ ಬ್ಯಾಟ್‌ ಬೀಸಿದ ನಾಸೆರ್‌ ಹುಸೇನ್‌

"ನೀವು ರಾಬ್ ಕೀ ಅವರನ್ನು ಮುಂದುವರಿಸಲು ನಿರ್ಧರಿಸಿದರೆ, ಅವರ ದೊಡ್ಡ ಬಲ ಸೂಕ್ಷ್ಮ ವಿಚಾರಗಳ ಮೇಲೆ ಗಮನ ಹರಿಸುವುದಲ್ಲ. ಆದ್ದರಿಂದ ಅವರ ಕೆಳಗೆ ಪ್ರತಿಯೊಂದು ವಿಷಯದ ಮೇಲೂ ಸಂಪೂರ್ಣ ಹಿಡಿತ ಹೊಂದಿರುವ, ಯಾವುದೇ ಸಣ್ಣ ವಿಚಾರವನ್ನೂ ತಪ್ಪಿಸದ ವ್ಯಕ್ತಿಯೊಬ್ಬರು ಇರಬೇಕು," ಎಂದು ನಾಸೆರ್ ಹುಸೇನ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದರು.

"ನನ್ನ ಪ್ರಕಾರ, ಆ ಜವಾಬ್ದಾರಿಗೆ ಆಂಡಿ ಫ್ಲವರ್‌ಗಿಂತ ಉತ್ತಮ ಆಯ್ಕೆ ಬೇರೆ ಯಾರೂ ಇಲ್ಲ. ಫ್ಲವರ್ ಇಂಗ್ಲೆಂಡ್ ತಂಡವನ್ನು ವಿಶ್ವದ ನಂ.1 ಸ್ಥಾನಕ್ಕೆ ಕೊಂಡೊಯ್ದಿದ್ದರು. ಅವರ ಕೋಚಿಂಗ್ ವಿಧಾನ ನನಗೆ ತುಂಬಾ ಇಷ್ಟ. ಅವರು ಮಾಡಿದ ಪ್ರತಿಯೊಂದು ಕೆಲಸದಲ್ಲೂ ಅತ್ಯಂತ ಸೂಕ್ಷ್ಮತೆ ಮತ್ತು ಪರಿಪೂರ್ಣತೆ ಇತ್ತು. ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೊರತೆಯಾಗಿರುವುದು ಇದೇ ಅಂಶ. ನಾನು ರಾಬ್ ಕೀ ಅಥವಾ ಇಸಿಬಿ (ECB) ಸ್ಥಾನದಲ್ಲಿದ್ದರೆ, ಆಂಡಿ ಫ್ಲವರ್ ಅವರನ್ನು ಕರೆತರಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದೆ," ಎಂದು ಹುಸೇನ್ ಹೇಳಿದ್ದಾರೆ.

IND vs ENG: ಕೊಹ್ಲಿ ಕಮ್‌ಬ್ಯಾಕ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಫ್ಲವರ್‌ ಇಂಗ್ಲೆಂಡ್‌ಗೆ ಕೊಚ್‌ ಆಗುವುದು ಕಷ್ಟ

ಆಂಡಿ ಫ್ಲವರ್‌ ಅವರು ಇಂಗ್ಲೆಂಡ್‌ ಟೆಸ್ಟ್‌ ತಂಡದ ನೇರವಾಗಿ ಹೆಡ್‌ ಕೋಚ್‌ ಆಗಲು ಸಾಧ್ಯವಿಲ್ಲ. ಜಿಂಬಾಬ್ವೆ ದಿಗ್ಗಜ ಸದ್ಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಹೆಡ್‌ ಕೋಚ್‌ ಆಗಿದ್ದಾರೆ. ಹಾಗಾಗಿ ಅವರು ಆರ್‌ಸಿಬಿಯನ್ನು ತೊರೆದು ಇಂಗ್ಲೆಂಡ್‌ ತಂಡಕ್ಕೆ ಮರಳುವು ಕಷ್ಟ ಸಾಧ್ಯ.