ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ, ಮೊಹಮ್ಮದ್‌ ಶಮಿಗೆ ಸ್ಥಾನವಿಲ್ಲ!

India's test Squad for NZ Series: ನ್ಯೂಜಿಲೆಂಡ್‌ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಯ್ಕೆ ಸಮಿತಿ ಪ್ರಕಟಿಸಿದ್ದು, ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ನವೆಂಬರ್‌ 19 ರಂದು ಟೆಸ್ಟ್‌ ಸರಣಿ ಆರಂಭವಾಗಲಿದೆ.

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಯ ಭಾರತ ತಂಡದಲ್ಲಿ ಶಮಿಗೆ ಸ್ಥಾನವಿಲ್ಲ.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ 15 ಸದಸ್ಯರ ಭಾರತ ತಂಡವನ್ನು (India's Test Squad) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಶುಕ್ರವಾರ ಪ್ರಕಟಿಸಿದೆ. ರಾಷ್ಟ್ರೀಯ ತಂಡಕ್ಕೆ ಮರಳಬೇಕೆಂಬ ನಿರೀಕ್ಷೆಯಲ್ಲಿದ್ದ ಹಿರಿಯ ವೇಗಿ ಮೊಹಮ್ಮದ್‌ ಶಮಿ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಮತ್ತೊಮ್ಮೆ ಕಡೆಗಣಿಸಿದೆ. ಆದರೆ, ಬಂಗಾಳದ ವೇಗಿ ಆಕಾಶ್‌ ದೀಪ್‌ಗೆ ರೆಡ್‌ ಬಾಲ್‌ ತಂಡದಲ್ಲಿ ಪುನಃ ಸ್ಥಾನವನ್ನು ಕಲ್ಪಿಸಲಾಗಿದೆ. ಉಭಯ ತಂಡಗಳ ನಡುವಣ ಟೆಸ್ಟ್‌ ಸರಣಿ ನವೆಂಬರ್‌ 19 ರಂದು ಮೊದಲನೇ ಪಂದ್ಯದ ಮೂಲಕ ಆರಂಭವಾಗಲಿದೆ.

ಐದು ಪಂದ್ಯಗಳ ಏಕದಿನ ಸರಣಿ ಮುಗಿದ ನಾಲ್ಕು ದಿನಗಳ ಬಳಿಕ ಮೊದನೇ ಟೆಸ್ಟ್‌ ಪಂದ್ಯ ನವೆಂಬರ್‌ 19 ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್‌ ಪಂದ್ಯ ನವೆಂಬರ್‌ 27 ರಂದು ಕ್ರೈಸ್ಟ್‌ ಚರ್ಚ್‌ನಲ್ಲಿ ಶುರುವಾಗಲಿದೆ. ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯಲು ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡಕ್ಕೆ ಈ ಟೆಸ್ಟ್‌ ಸರಣಿ ಅತ್ಯಂತ ಮಹತ್ವವಾಗಿದೆ.

IND vs WI: ಭವನೇಶ್ವರ್‌ ಕುಮಾರ್‌ ಇನ್‌? ಐದನೇ ಟಿ20ಐಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

ಭಾರತ ಟೆಸ್ಟ್ ತಂಡದ ಆಟಗಾರರು

  1. ಶುಭ್‌ಮನ್ ಗಿಲ್ (ನಾಯಕ)
  2. ಯಶಸ್ವಿ ಜೈಸ್ವಾಲ್
  3. ಕೆ.ಎಲ್. ರಾಹುಲ್ (ಉಪನಾಯಕ)
  4. ದೇವದತ್ ಪಡಿಕ್ಕಲ್
  5. ರಿಷಭ್ ಪಂತ್ (ವಿಕೆಟ್ ಕೀಪರ್)*
  6. ಧ್ರುವ್ ಜುರೇಲ್ (ವಿಕೆಟ್ ಕೀಪರ್)
  7. ರವೀಂದ್ರ ಜಡೇಜಾ
  8. ಅನ್ಶುಲ್ ಕಾಂಬೋಜ್
  9. ಜಸ್‌ಪ್ರೀತ್ ಬುಮ್ರಾ
  10. ಪ್ರಸಿದ್ಧ್ ಕೃಷ್ಣ
  11. ಆಕಾಶ್ ದೀಪ್
  12. ಸಾಯಿ ಸುದರ್ಶನ್
  13. ನಿತೀಶ್ ಕುಮಾರ್ ರೆಡ್ಡಿ
  14. ವಾಷಿಂಗ್ಟನ್ ಸುಂದರ್
  15. ಕುಲ್‌ದೀಪ್ ಯಾದವ್
  16. ಮೊಹಮ್ಮದ್ ಸಿರಾಜ್

ಒಟ್ಟು ಆಟಗಾರರು: 16



ಸಂಕ್ಷಿಪ್ತ ಮಾಹಿತಿ: ಶುಭ್‌ಮನ್ ಗಿಲ್ ತಂಡದ ನಾಯಕರಾಗಿದ್ದು, ಕೆ.ಎಲ್. ರಾಹುಲ್ ಉಪನಾಯಕರಾಗಿದ್ದಾರೆ. ರಿಷಭ್ ಪಂತ್ ಮತ್ತು ಧ್ರುವ್ ಜುರೇಲ್ ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿದ್ದಾರೆ.

ಭಾರತ vs ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಯ ವೇಳಾಪಟ್ಟಿ

ಮೊದಲನೇ ಟೆಸ್ಟ್‌ ಪಂದ್ಯ: ನವೆಂಬರ್‌ 19, ಮಧ್ಯಾಹ್ನ 03: 30ಕ್ಕೆ (ಭಾರತೀಯ ಕಾಲಮಾನ), ವೆಲ್ಲಿಂಗ್ಟನ್‌

ಎರಡನೇ ಟೆಸ್ಟ್‌ ಪಂದ್ಯ: ನವೆಂಬರ್‌ 27, ಮಧ್ಯಾಹ್ನ 03:30 ಕ್ಕೆ (ಭಾರತೀಯ ಕಾಲಮಾನ), ಕ್ರೈಸ್ಟ್‌ ಚರ್ಚ್‌