ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ತಂಡದ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಶ್ರೇಯ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕೆಂದ ರಿಕಿ ಪಾಂಟಿಂಗ್‌!

Ricky Ponting Praised on Axar Patel: ಭಾರತ ತಂಡದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಶ್ರೇಯ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕೆಂದು ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಐದು ಪಂದ್ಯಗಳಿಂದ ಅಕ್ಷರ್‌ ಪಟೇಲ್‌ 5 ವಿಕೆಟ್‌ಗಳ ಜೊತೆಗೆ ಬ್ಯಾಟಿಂಗ್‌ನಲ್ಲಿ 109 ರನ್‌ಗಳನ್ನು ಕಲೆ ಹಾಕಿದ್ದರು.

ಭಾರತ ತಂಡದ ಜಯದ ಶ್ರೇಯ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕು: ಪಾಂಟಿಂಗ್‌!

ಅಕ್ಷರ್‌ ಪಟೇಲ್‌ಗೆ ರಿಕಿ ಪಾಂಟಿಂಗ್‌ ಮೆಚ್ಚುಗೆ.

Profile Ramesh Kote Mar 14, 2025 6:11 PM

ನವದೆಹಲಿ: ಭಾರತ ತಂಡದ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಶ್ರೇಯ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕೆಂದು ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಪಂಜಾಬ್‌ ಕಿಂಗ್ಸ್‌ ಕೋಚ್‌ ರಿಕಿ ಪಾಂಟಿಂಗ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಾರ್ಚ್‌ 9 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ ತಂಡ ಮೂರನೇ ಬಾರಿ ಚಾಂಪಿಯನ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಫೈನಲ್‌ ಪಂದ್ಯದಲ್ಲಿ 76 ರನ್‌ಗಳನ್ನು ಗಳಿಸಿದ್ದ ನಾಯಕ ರೋಹಿತ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದ ಹಾಗೆ ಈ ಟೂರ್ನಿಯುದ್ದಕ್ಕೂ ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ವರುಣ್‌ ಚಕ್ರವರ್ತಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು.

ವಿರಾಟ್‌ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ನಿರ್ಣಾಯಕ ಅರ್ಧಶತಕವನ್ನು ಬಾರಿಸಿದ್ದರು. ಆ ಮೂಲಕ ಎರಡೂ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇನ್ನು ಶ್ರೇಯಸ್‌ ಅಯ್ಯರ್‌ ಅವರು ಐದು ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 243 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ವರುಣ್‌ ಚಕ್ರವರ್ತಿ ವರುಣ್‌ ಚಕ್ರವರ್ತಿ ಮೂರು ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ, ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಂಟಿಂಗ್‌ ಅವರು, ಭಾರತ ತಂಡದ ಯಶಸ್ಸಿನ ಶ್ರೇಯ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕೆಂದು ಹೇಳಿದ್ದಾರೆ.

IND vs NZ: ನ್ಯೂಜಿಲೆಂಡ್‌ಗೆ ಮಣ್ಣು ಮುಕ್ಕಿಸಿ ಮೂರನೇ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ!

ಅಕ್ಷರ್‌ ಪಟೇಲ್‌ ಅವರು ಐದು ಪಂದ್ಯಗಳಿಂದ 5 ವಿಕೆಟ್‌ಗಳನ್ನು ಕಬಳಿಸಿದ್ದರ ಜೊತೆಗೆ ಬ್ಯಾಟಿಂಗ್‌ನಲ್ಲಿ 109 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರು ಭಾರತ ತಂಡದ ಐದನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡುವ ಮೂಲಕ ಪಂದ್ಯದ ದಿಕ್ಕನ್ನು ಬದಲಾಯಿಸಿದ್ದರು. ನ್ಯೂಜಿಲೆಂಡ್‌ ವಿರುದ್ದದ ಫೈನಲ್‌ ಪಂದ್ಯದಲ್ಲಿ ಅವರು ಶ್ರೇಯಸ್‌ ಅಯ್ಯರ್‌ ಜೊತೆಗೆ 61 ರನ್‌ಗಳ ಜೊತೆಯಾಟವನ್ನು ಆಡಿದ್ದರು.

ಅಕ್ಷರ್‌ ಪಟೇಲ್‌ಗೆ ರಿಕಿ ಪಾಂಟಿಂಗ್‌ ಮೆಚ್ಚುಗೆ

ಐಸಿಸಿ ರಿವ್ಯೂವ್‌ನ ಇತ್ತೀಚಿಗ ಶೋನಲ್ಲಿ ಮಾತನಾಡಿದ ರಿಕಿ ಪಾಂಟಿಂಗ್‌, ಭಾರತ ತಂಡದ ಚಾಂಪಿಯನ್ಸ್‌ ಟ್ರೋಫಿ ಗೆಲುವಿನ ಸಾಕಷ್ಟು ಶ್ರೇಯ ಅಕ್ಷರ್‌ ಪಟೇಲ್‌ಗೆ ಸಲ್ಲಬೇಕೆಂದು ಹೇಳಿದ್ದಾರೆ. ವಿಶೇಷವಾಗಿ ಅಕ್ಷರ್‌ ಪಟೇಲ್‌ ಬೌಲಿಂಗ್‌ನಲ್ಲಿ ಸಾಕಷ್ಟು ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡಿದ್ದಾರೆಂಬುದು ಆಸೀಸ್‌ ದಿಗ್ಗಜನ ಅಭಿಪ್ರಾಯ.

ಚಾಂಪಿಯನ್ಸ್‌ ಟ್ರೋಫಿ ವೈಫಲ್ಯದ ಬಳಿಕ ಪಾಕಿಸ್ತಾನ ಕ್ರಿಕೆಟಿಗರಿಗೆ ಮತ್ತೊಂದು ಶಾಕ್‌!

"ಈ ಟೂರ್ನಿಯಲ್ಲಿ ಸಿಗಬೇಕಾದ ಸಾಕಷ್ಟು ಶ್ರೇಯ ಅಕ್ಷರ್‌ ಪಟೇಲ್‌ಗೂ ಲಭಿಸಬೇಕಾಗಿದೆ. ಅವರು ಟೂರ್ನಿಯುದ್ದಕ್ಕೂ ಅತ್ಯಂತ ಸ್ಥಿರವಾಗಿ ಬೌಲ್‌ ಮಾಡಿದ್ದರು ಹಾಗೂ ನೀವು ನೋಡಿದ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ಇದಾಗಿದೆ," ಎಂದು ರಿಕಿ ಪಾಂಟಿಂಗ್‌ ತಿಳಿಸಿದ್ದಾರೆ.

"ಇತರೆ ತಂಡಗಳಿಗೆ ಹೋಲಿಕೆ ಮಾಡಿದರೆ, ಭಾರತ ತಂಡ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ರವೀಂದ್ರ ಜಡೇಜಾ ಒಳಗೊಂಡ ಅತ್ಯುತ್ತಮ ಆಲ್‌ರೌಂಡರ್‌ಗಳನ್ನು ಟೀಮ್‌ ಇಂಡಿಯಾ ಹೊಂದಿದೆ. ಎಡಗೈ ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ. ಇದು ತಂಡಕ್ಕೆ ಅತ್ಯುತ್ತಮ ಸಂಯೋಜನೆಯನ್ನು ತಂದುಕೊಡುತ್ತದೆ," ಎಂದು ಆಸೀಸ್‌ ದಿಗ್ಗಜ ತಿಳಿಸಿದ್ದಾರೆ.