ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಶ್ರೀಲಂಕಾ ಎ ವಿರುದ್ದ ಒಮಾನ್‌ ತಂಡಕ್ಕೆ 5 ವಿಕೆಟ್‌ ಜಯ!

ಆಮಿರ್‌ ಖಾನ್‌ ಅವರ ಸ್ಪೋಟಕ ಅರ್ಧಶತಕದ ಬಲದಿಂದ ಒಮಾನ್‌ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ 5 ವಿಕೆಟ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಂಡಿದೆ.

ಶ್ರೀಲಂಕಾ ಎ ಎದುರು ಆಮಿರ್‌ ಕಲೀಮ್‌ ಅರ್ಧಶತಕ.

ಕೊಲಂಬೊ: ಆಮಿರ್‌ ಸಲೀಮ್‌ (Amir Saleem) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಒಮಾನ್‌ (Oman) ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧ 5 ವಿಕೆಟ್‌ಗಳ ಗೆಲುವು ಪಡೆದಿದೆ. ಬುಧವಾರ ಕೊಲಂಬೊ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ಎ ತಂಡ, 9 ವಿಕೆಟ್‌ಗಳಿಗೆ 145 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಒಮಾನ್ ತಂಡ 18 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಆ ಮೂಲಕ ಚುಟುಕು ವಿಶ್ವಕಪ್‌ ಟೂರ್ನಿಗೆ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ಎ ತಂಡದ ಬ್ಯಾಟಿಂಗ್ ಫಲ ನೀಡಲಿಲ್ಲ. ಓಪನರ್ ಸಿನೆತ್ ಜಯವರ್ಧನ ಕೇವಲ 9 ರನ್‌ಗಳಿಗೆ ಔಟಾದರು. ಪುಲಿಂದು ಪೆರೆರಾ 9 ರನ್ ಗಳಿಸಿದರು, ಮತ್ತು ವಿಕೆಟ್ ಕೀಪರ್ ಪವನ್ ಸಂದೇಶ್ 3 ರನ್ ಗಳಿಸಿದರು. ದುಲ್ನಿತ್ ಸಿಗೇರಾ 20 ರನ್ ಗಳಿಸಿದರು. ಪವರ್‌ಪ್ಲೇನಲ್ಲಿ ನಾಲ್ವರು ಬ್ಯಾಟ್ಸ್‌ಮನ್‌ಗಳು ಔಟಾದರು. 49 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಗುಣಶೇಖರ ಸೇನಾವಿರತ್ನಾಗೆ, ಡಾನ್ ಸಹನಾ ಕೋಸಲ ಮತ್ತು ಕವಿಜಾ ಗಮಾಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು.

ಪಾಕಿಸ್ತಾನ ವಿರುದ್ಧ ಟಿ20ಐ ಸರಣಿ ಸೋತ ಆಸ್ಟ್ರೇಲಿಯಾ ಬಗ್ಗೆ ರಿಕಿ ಪಾಂಟಿಂಗ್‌ ದೊಡ್ಡ ಹೇಳಿಕೆ!

ಇಬ್ಬರೂ ಬಹಳ ನಿಧಾನವಾಗಿ ಬ್ಯಾಟ್‌ ಮಾಡಿದರು. ಕೋಸಲ 25 ಎಸೆತಗಳಲ್ಲಿ 21 ರನ್ ಗಳಿಸಿದರೆ, ಗಮಗೆ 12 ಎಸೆತಗಳಲ್ಲಿ 12 ರನ್ ಗಳಿಸಿದರು. ಅಂತಿಮವಾಗಿ, ಚಾಮಿಂದು ವಿಕ್ರಮಸಿಂಘೆ 13 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ ತಂಡವನ್ನು 145ಕ್ಕೆ ಕೊಂಡೊಯ್ದರು. ಶಾ ಫೈಸಲ್, ಶಕೀಲ್ ಅಹ್ಮದ್ ಮತ್ತು ಜೇ ಒಡೆದ್ರಾ ತಲಾ ಎರಡು ವಿಕೆಟ್ ಪಡೆದರು.

80 ರನ್ ಸಿಡಿಸಿ ಆಮಿರ್‌ ಕಲೀಮ್‌

ಓಪನರ್ ಅಮೀರ್ ಕಲೀಮ್ ಒಮಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ವರು ಎರಡಂಕಿ ತಲುಪಲು ವಿಫಲರಾದರು. ಹಮ್ಮದ್ ಮಿರ್ಜಾ 5, ವಾಸಿಮ್ ಅಲಿ 2 ಮತ್ತು ಕರಣ್ ಸೋನಾವಾಲೆ 8 ರನ್ ಗಳಿಸಿ ಔಟಾದರು, ಆದರೆ ಮೊಹಮ್ಮದ್ ನದೀಮ್ ಅಜೇಯರಾಗಿ ಉಳಿದರು. ಏತನ್ಮಧ್ಯೆ, ಅಮೀರ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 80 ರನ್ ಗಳಿಸಿದ ನಂತರ 14 ನೇ ಓವರ್‌ನಲ್ಲಿ ಔಟಾದರು. ಆ ಸಮಯದಲ್ಲಿ ಒಮಾನ್ ತಂಡದ ಸ್ಕೋರ್ 114 ಆಗಿತ್ತು. 47 ಎಸೆತಗಳಲ್ಲಿ ಅಮೀರ್ 8 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಅಲ್ಲಿಂದ ವಿನಾಯಕ್ ಶುಕ್ಲಾ ಅಜೇಯ 39 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅವರು 24 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಬ್ಯಾನ್‌ ಮಾಡಿದ ಐಸಿಸಿ? ಇದರ ಅಸಲಿ ಸತ್ಯ ಇಲ್ಲಿದೆ!

ಆಮಿರ್ ಅತ್ಯಂತ ಹಿರಿಯ ಆಟಗಾರ

2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಮಿರ್ ಕಲೀಮ್ ಅತ್ಯಂತ ಹಿರಿಯ ಆಟಗಾರ. ಅವರನ್ನು ಆರಂಭದಲ್ಲಿ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ ಆದರೆ ಬದಲಿಯಾಗಿ ಟಿ20 ವಿಶ್ವಕಪ್‌ನಲ್ಲಿ ಸೇರಿಸಿಕೊಳ್ಳಲಾಯಿತು. ಇತ್ತೀಚಿನವರೆಗೂ, ಅವರು ಓಮನ್‌ನ ಅಂಡರ್-19 ತಂಡದ ತರಬೇತುದಾರರಾಗಿದ್ದರು. 2026 ರ ಏಷ್ಯಾ ಕಪ್‌ಗೆ ಮೊದಲು ಅವರು ತಂಡಕ್ಕೆ ಮರಳಿದರು. ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ ಅರ್ಧಶತಕವನ್ನೂ ಗಳಿಸಿದರು.