ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಬ್ಯಾನ್‌ ಮಾಡಿದ ಐಸಿಸಿ? ಇದರ ಅಸಲಿ ಸತ್ಯ ಇಲ್ಲಿದೆ!

ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಕ್ಕೆ ಇನ್ನೂ ಒಂದು ವಾರ ಮಾತ್ರ ಬಾಕಿ ಇದೆ. ಇದರ ನಡುವೆ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪಂದ್ಯಗಳನ್ನು ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ಹಾಗಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ಬ್ಯಾನ್‌ ಮಾಡಿದೆ ಎಂಬ ಸುದ್ದಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ಅಸಲಿ ಸತ್ಯವನ್ನು ಇಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಬ್ಯಾನ್‌ ಮಾಡಿದ ಐಸಿಸಿ?

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು ಬ್ಯಾನ್‌ ಮಾಡಿದ ಐಸಿಸಿ? -

Profile
Ramesh Kote Feb 3, 2026 3:05 PM

ನವದೆಹಲಿ: ಬಹುನಿರೀಕ್ಷಿತ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವೆ ಭಾರಿ ಚರ್ಚೆಗಳು ನಡೆಯುತ್ತಿವೆ. ಚುಟಕು ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ವಿರುದ್ದದ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸಿದೆ. ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌, ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯನ್ನು (PCB) ಒಂದು ವರ್ಷ ಅವಧಿಗೆ ಬ್ಯಾನ್‌ ಮಾಡಿದೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದು ನಿಜವೇ? ಅಥವಾ ಸುಳ್ಳಾ? ಎಂಬಂತೆ ಇದರ ಅಸಲಿ ಸತ್ಯವನ್ನು ಇಲ್ಲಿ ವಿವರಿಸಲಾಗಿದೆ.

ಪಾಕಿಸ್ತಾನ ಸರ್ಕಾರದ ನಿರ್ದೇಶನಗಳ ಮೇರೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಮುಂದಿನ ಟೆ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ವಿರುದ್ಧ ಫೆಬ್ರವರಿ 15 ರಂದು ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯವನ್ನು ಬಾಯ್ಕಾಟ್ ಮಾಡುವ ನಿರ್ಧಾರ ಕೈಗೊಂಡಿದೆ. ಆದರೆ ಟೂರ್ನಿಯ ಉಳಿದ ಎಲ್ಲಾ ಪಂದ್ಯಗಳಲ್ಲಿ ಭಾಗವಹಿಸುವುದಾಗಿ ಪಿಸಿಬಿ ಸ್ಪಷ್ಟಪಡಿಸಿದೆ.

ಈ ಬಾಯ್ಕಾಟ್ ನಿರ್ಧಾರದಿಂದ ಪಾಕಿಸ್ತಾನ ತಂಡಕ್ಕೆ ಎರಡು ಅಂಕಗಳ ನಷ್ಟವಾಗಲಿದೆ. ಇದಲ್ಲದೆ, ಹಾಲಿ ಚಾಂಪಿಯನ್ ಭಾರತ ವಿರುದ್ಧ ಪಂದ್ಯ ಆಡುವುದನ್ನು ನಿರಾಕರಿಸಿರುವುದು ಪಾಕಿಸ್ತಾನವನ್ನು ಐಸಿಸಿ ಶಿಸ್ತು ಕ್ರಮಗಳ ಅಪಾಯಕ್ಕೆ ಒಳಪಡಿಸಬಹುದು. ಈ ಶಿಸ್ತು ಕ್ರಮಗಳಲ್ಲಿ ಸಂಪೂರ್ಣ ದ್ವಿಪಕ್ಷೀಯ ಸರಣಿಗಳ ನಿಷೇಧ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್‌ಒಸಿ ನಿರಾಕರಣೆ ಹಾಗೂ ಪಾಕಿಸ್ತಾನವಿಲ್ಲದ ಏಷ್ಯಾ ಕಪ್ ನಡೆಯುವ ಸಾಧ್ಯತೆಗಳೂ ಸೇರಿವೆ. ಇದನ್ನು ಇನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿಲ್ಲ.

T20 World Cup: ಪಾಕಿಸ್ತಾನ ತಂಡ ತನ್ನ ನಿರ್ಧಾರವನ್ನು ಬದಲಿಸಲಿದೆ ಎಂದ ಸುನೀಲ್‌ ಗವಾಸ್ಕರ್‌!

ಇದರ ನಡುವೆ, ಬೆಂಬಾ ಟವುಮಾ ಎಂಬ ಹೆಸರಿನ ಎಕ್ಸ್ ಬಳಕೆದಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ ಎಂದು ಪೋಸ್ಟ್‌ ಹಾಕಿದ್ದಾರೆ. ಇದರ ಜೊತೆಗೆ, ಪಿಸಿಬಿಗೆ ದೊರೆಯುತ್ತಿದ್ದ ವಾರ್ಷಿಕ ಆದಾಯ ಹಂಚಿಕೆಯನ್ನು ಶೇಕಡಾ 5.75 ರಿಂದ 2.25ಕ್ಕೆ ಕಡಿತಗೊಳಿಸಲಾಗಿದೆ ಎಂದು ಅವರು ತನ್ನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದರೆ, ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಸಿಸಿ ಅಥವಾ ಪಿಸಿಬಿ ವತಿಯಿಂದ ಇನ್ನೂ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

“ಪಾಕಿಸ್ತಾನ ತಂಡದ ವಿಶ್ವಕಪ್ ಭಾಗವಹಿಸುವಿಕೆ ಕುರಿತು ನಡೆದ ಐಸಿಸಿ ಮಂಡಳಿ ಸದಸ್ಯರ ಸಭೆಯಲ್ಲಿ ಮತದಾನ ನಡೆಸಲಾಗಿದ್ದು, ಪಾಕಿಸ್ತಾನವನ್ನು ಒಂದು ವರ್ಷದ ಅವಧಿಗೆ ನಿಷೇಧಿಸುವ ಪ್ರಸ್ತಾವನೆ 14–2 ಮತಗಳ ಅಂತರದಿಂದ ಅಂಗೀಕಾರಗೊಂಡಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಕೂಡ ಒಂದು ವರ್ಷ ನಿಷೇಧಕ್ಕೆ ಒಳಪಡಲಿದೆ,” ಎಂದು ಎಕ್ಸ್ ಬಳಕೆದಾರರು ಹಾಕಿದ್ದಾರೆ.

ಭಾರತದ ಪಂದ್ಯವನ್ನು ಬಾಯ್ಕಟ್‌ ಮಾಡಿದ್ದಕ್ಕೆ ಐಸಿಸಿ ಪಾಕ್‌ಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ: ಎಹ್ಸಾನ್‌ ಮಣಿ!

ಇದಲ್ಲದೆ, “ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ವಾರ್ಷಿಕ ಆದಾಯ ಹಂಚಿಕೆಯನ್ನು ಶೇ 5.75 ರಿಂದ 2.25ಕ್ಕೆ ಕಡಿತಗೊಳಿಸಲಾಗುತ್ತದೆ. 2040ರವರೆಗೆ ಪಾಕಿಸ್ತಾನ ಯಾವುದೇ ಐಸಿಸಿ ಟೂರ್ನಿಗಳನ್ನು ಆತಿಥ್ಯ ವಹಿಸಲು ಅವಕಾಶ ನೀಡಲಾಗುವುದಿಲ್ಲ. ಆಟದ ಪಾವಿತ್ರ್ಯ ಮತ್ತು ನ್ಯಾಯಸಮ್ಮತ ಆಟದ ಆತ್ಮವನ್ನು ಸದಾ ಕಾಪಾಡಬೇಕು ಎಂಬುದನ್ನು ಐಸಿಸಿ ಮರುಉಲ್ಲೇಖಿಸಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.

ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಐಸಿಸಿ ಅಥವಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯಿಂದ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹಾಗಾಗಿ, ಇದು ಸುಳ್ಳು ಸುದ್ದಿಯಾಗಿದೆ.