ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025ರ ದುಲೀಪ್‌ ಟ್ರೋಫಿ ಟೂರ್ನಿಯಿಂದ ತಿಲಕ್‌ ವರ್ಮಾ ಔಟ್‌! ಇದಕ್ಕೆ ಕಾರಣ ಇಲ್ಲಿದೆ..

2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಆಡುವ ಕಾರಣ ಭಾರತ ತಂಡದ ಎಡಗೈ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ ಅವರು ದುಲೀಪ್‌ ಟ್ರೋಫಿ ಟೂರ್ನಿಯ ಸೆಮಿಫೈನಲ್‌ನಿಂದ ಹೊರ ಬಿದ್ದಿದ್ದಾರೆ. ಅವರು ಸೆಪ್ಟಂಬರ್‌ 4 ರಿಂದ 7 ರವರೆಗೆ ನಡೆಯಬೇಕಿದ್ದ ಸೆಮೀಸ್‌ ಪಂದ್ಯದಲ್ಲಿ ದಕ್ಷಿಣ ವಲಯ ತಂಡದಲ್ಲಿ ಆಡಬೇಕಾಗಿತ್ತು.

2025ರ ದುಲೀಪ್‌ ಟ್ರೋಫಿ ಟೂರ್ನಿಯಿಂದ ತಿಲಕ್‌ ವರ್ಮಾ ಔಟ್‌!

ದುಲೀಪ್‌ ಟ್ರೋಫಿ ಸೆಮಿಫೈನಲ್‌ನಿಂದ ತಿಲಕ್‌ ವರ್ಮಾ ಔಟ್‌. -

Profile Ramesh Kote Aug 31, 2025 7:40 PM

ಬೆಂಗಳೂರು: ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಯ ನಿಮಿತ್ತ ಭಾರತ ತಂಡದ ಬ್ಯಾಟ್ಸ್‌ಮನ್‌ ತಿಲಕ್‌ ವರ್ಮಾ (Tilav Verma) ಅವರು ದುಲೀಪ್‌ ಟ್ರೋಫಿ (Duleep Trophy 2025) ಟೂರ್ನಿಯ ಸೆಮಿಫೈನಲ್‌ನಿಂದ ಹೊರ ನಡೆದಿದ್ದಾರೆ. ಸೆಪ್ಟಂಬರ್‌ 4 ರಿಂದ 7 ರವರೆಗೆ ನಡೆಯುವ ಸೆಮೀಸ್‌ ಪಂದ್ಯದಲ್ಲಿ ದಕ್ಷಿಣ ವಲಯ ತಂಡದಲ್ಲಿ ಆಡಬೇಕಾಗಿತ್ತು. ಅವರು ಹೈದರಾಬಾದ್‌ ಪರ ದೇಶಿ ಕ್ರಿಕೆಟ್‌ ಆಡಲಿದ್ದಾರೆ. ಅಂದ ಹಾಗೆ ಏಷ್ಯಾ ಕಪ್‌ಗೂ ಆಯ್ಕೆ ಮಾಡುವ ಮೊದಲೇ ತಿಲಕ್‌ ವರ್ಮಾ ಅವರನ್ನು ದಕ್ಷಿಣ ವಲಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಸೆಪ್ಟಂಬರ್‌ 9 ರಂದು ಆರಂಭವಾಗುವ ಏಷ್ಯಾ ಕಪ್‌ಗೆ ತಯಾರಿ ನಡೆಸುವ ಸಲುವಾಗಿ ತಿಲಕ್‌ ವರ್ಮಾ ದಕ್ಷಿಣ ವಲಯದಿಂದ ಹೊರಗೆ ನಡೆದಿದ್ದಾರೆ.

ತಿಲಕ್‌ ವರ್ಮಾ ಅವರ ಜೊತೆಗೆ ಆರ್‌ ಸಾಯಿ ಕಿಶೋರ್‌ ಅವರು ದುಲೀಪ್‌ ಟ್ರೋಫಿ ಸೆಮಿಫೈನಲ್‌ನಿಂದ ಹೊರ ನಡೆದಿದ್ದಾರೆ. ಸಾಯಿ ಕಿಶೋರ್‌ ಅವರು ಕೈ ಗಾಯದಿಂದ ಗುಣಮುಖರಾಗಿದ್ದಾರೆ. ಈ ಇಬ್ಬರ ಅಲಭ್ಯತೆಯ ಕಾರಣ ಇವರ ಸ್ಥಾನಕ್ಕೆ ಅಂಕಿತ್‌ ಶರ್ಮಾ ಹಾಗೂ ಶೈಕ್‌ ರಶೀದ್‌ಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಕೇರಳದ ಮೊಹಮ್ಮದ್‌ ಅಝರುದ್ದೀನ್‌ ಅವರು ದಕ್ಷಿಣ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. ಇವರನ್ನು ಈ ಹಿಂದ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿತ್ತು.ಇದೀಗ ನಾರಯಣ್‌ ಜಗದೀಶನ್‌ ಅವರನ್ನು ಕೂಡ ಸೌಥ್‌ ಝೋನ್‌ ತಂಡಕ್ಕೆ ಸೇರಿಸಲಾಗಿದೆ.

Hockey Asia Cup 2025: ಜಪಾನ್‌ ವಿರುದ್ದ ಗೆದ್ದು ಸೂಪರ್‌ ಫೋರ್‌ಗೆ ಅರ್ಹತೆ ಪಡೆದ ಭಾರತ!

ಮೂರನೇ ಕ್ರಮಾಂಕದಲ್ಲಿ ಆಡಲಿರುವ ತಿಲಕ್‌ ವರ್ಮಾ

ಭಾರತ ಟಿ20 ತಂಡಕ್ಕೆ ತಿಲಕ್‌ ವರ್ಮಾ ಮರಳಿದ್ದಾರೆ. ಅವರು ಏಷ್ಯಾ ಕಪ್‌ ಟೂರ್ನಿಯ ಭಾರತ ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು ಟಿ20ಐ ತಂಡಕ್ಕೆ ಮರಳಿರುವ ಶುಭಮನ್‌ ಗಿಲ್‌ ಅವರು ಅಭಿಷೇಕ್‌ ಶರ್ಮಾ ಅವರ ಜೊತೆ ಇನಿಂಗ್ಸ್‌ ಆರಂಭಿಸಬಹುದು. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಯಲ್ಲಿ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಿದ್ದರು. ಅಂದ ಹಾಗೆ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟು ವಿಕೆಟ್‌ ಕೀಪರ್‌ ಹಾಗೂ ಮ್ಯಾಚ್‌ ಫಿನಿಷರ್‌ ಆಗಿ ಜಿತೇಶ ಶರ್ಮಾ ಆಡಬಹದು.

ಇದರಲ್ಲಿ ತಿಲಕ್‌ ವರ್ಮಾ ಹಾಗೂ ಅಭಿಷೇಕ್‌ ಶರ್ಮಾ ಅವರು ಬ್ಯಾಟಿಂಗ್‌ ಜೊತೆಗೆ ಸ್ಪಿನ್‌ ಕೂಡ ಮಾಡಬಲ್ಲರು. ಸೆಪ್ಟಂಬರ್‌ 10 ರಂದು ಯುಎಇ ವಿರುದ್ದ ಮೊದಲನೇ ಪಂದ್ಯದಲ್ಲಿ ಭಾರತ ತಂಡ, ಏಷ್ಯಾ ಕಪ್‌ ಟೂರ್ನಿಯಲ್ಲಿ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಸೆಪ್ಟಂಬರ್‌ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು 19 ರಂದು ಒಮನ್‌ ವಿರುದ್ಧ ಕಾದಾಟ ನಡೆಸಲಿದೆ.

Asia Cup 2025: ಏಷ್ಯಾಕಪ್‌ಗೆ ಪ್ರತ್ಯೇಕವಾಗಿ ಪ್ರಯಾಣ ಬೇಳೆಸಲಿರುವ ಭಾರತೀಯ ಆಟಗಾರರು

ಭಾರತ ತಂಡದ ಏಷ್ಯಾ ಕಪ್‌ ಟೂರ್ನಿ: ಸೂರ್ಯ ಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿ.ಕೀ), ಜಸ್‌ಪ್ರೀತ್ ಬುಮ್ರಾ, ಅರ್ಷ್‌ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್‌ದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿ.ಕೀ), ಹರ್ಷಿತ್ ಸಿಂಗ್ ರಾಣಾ

ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಪ್ರಸಿಧ್‌ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್