ದಿಗ್ಗಜ ವೇಗಿ ಬ್ರೆಟ್ ಲೀಗೆ ʼಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್ʼ ಗೌರವ!
ಕ್ರಿಕೆಟ್ ಆಸ್ಟ್ರೇಲಿಯಾ ದಿಗ್ಗಜ ವೇಗದ ಬೌಲರ್ ಬ್ರೆಟ್ ಲೀ ಅವರನ್ನು ತನ್ನ ಹಾಲ್ ಆಫ್ ಫೇಮ್ ಗೌರವ ನೀಡಿದೆ. 1996 ರಲ್ಲಿ ಸ್ಥಾಪನೆಯಾದ ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ನಲ್ಲಿ ಶೇನ್ ವಾರ್ನ್ ಮತ್ತು ಸರ್ ಡಾನ್ ಬ್ರಾಡ್ಮನ್ ಈಗಾಗಲೇ ಸೇರ್ಪಡೆಯಾಗಿದ್ದಾರೆ.
ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ ಬ್ರೇಟ್ ಲೀ ಭಾಜನರಾಗಿದ್ದಾರೆ. -
ನವದೆಹಲಿ: ದಿಗ್ಗಜ ವೇಗದ ಬೌಲರ್ ಬ್ರೆಟ್ ಲೀ (Brett Lee) ಅವರನ್ನು ಆಸ್ಟ್ರೇಲಿಯನ್ ಕ್ರಿಕೆಟ್ ಹಾಲ್ ಆಫ್ ಫೇಮ್‌ಗೆ (Australian cricket Hall of Fame) ಸೇರಿಸಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಈ ಸಂಸ್ಥೆಯನ್ನು 1996 ರಲ್ಲಿ ಸ್ಥಾಪಿಸಿತ್ತು. ಸರ್ ಡಾನ್ ಬ್ರಾಡ್ಮನ್ ಸೇರಿದಂತೆ ಅನೇಕ ಆಸ್ಟ್ರೇಲಿಯಾದ ದಿಗ್ಗಜರನ್ನು ಹಾಲ್ ಆಫ್ ಫೇಮ್‌ಗೆ ಈಗಾಗಲೇ ಸೇರಿಸಲಾಗಿದೆ. ಬ್ರೆಟ್ ಲೀಗ್ ತಮ್ಮ ವೃತ್ತಿಜೀವನದ ಅವಧಿಯಲ್ಲಿ ತಮ್ಮ ವೇಗ ಮತ್ತು ಲೈನ್ ಅಂಡ್ ಲೆನ್ತ್‌ಗೆ ಹೆಸರುವಾಸಿಯಾಗಿದ್ದರು. ಅವರನ್ನು ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಶೋಯೆಬ್ ಅಖ್ತರ್ ಜೊತೆಗೆ ಪರಿಗಣಿಸಲಾಗುತ್ತದೆ. ಬ್ರೆಟ್ ಲೀ 1999ರಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ವಿರುದ್ಧದ ತಮ್ಮ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅವರು ಐದು ವಿಕೆಟ್‌ಗಳ ಸಾಧನೆ ಮಾಡಿದ್ದರು.
ಬ್ರೆಟ್ ಲೀ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತ್ಯಂತ ವೇಗದ ಎಸೆತದ ದಾಖಲೆಯನ್ನು ಹೊಂದಿದ್ದಾರೆ. 2003 ರಲ್ಲಿ ಅವರು ಶ್ರೀಲಂಕಾದ ಬ್ಯಾಟ್ಸ್‌ಮನ್ ಮಾರ್ವನ್ ಅಟಪಟ್ಟುಗೆ ಗಂಟೆಗೆ 161.1 ಕಿಮೀ ವೇಗದ ಎಸೆತವನ್ನು ಹಾಕಿ ಔಟ್ ಮಾಡಿದ್ದರು. ಶೋಯೆಬ್ ಅಖ್ತರ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಚೆಂಡಿನ ದಾಖಲೆಯನ್ನು ಹೊಂದಿದ್ದಾರೆ. 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಗಂಟೆಗೆ 161.3 ಕಿ.ಮೀ ವೇಗದಲ್ಲಿ ಚೆಂಡನ್ನು ಹಾಕಿದ್ದರು.
ʻನಮ್ಮ ವನಿತೆಯರು ಇತಿಹಾಸ ಸೃಷ್ಟಿಸಿದ್ದಾರೆʼ: ಭಾರತದ 2025ರ ಸ್ಮರಣೀಯ ವರ್ಷಕ್ಕೆ ಪಿಎಂ ಮೋದಿ ಮೆಚ್ಚುಗೆ!
ವಿಶ್ವಕಪ್ ವಿಜೇತ ತಂಡದ ಭಾಗ
ಬ್ರೆಟ್ ಲೀ 2003ರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು. ಅವರು 2006 ಮತ್ತು 2009 ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಗಳ ಭಾಗವಾಗಿದ್ದರು. ಅವರು 2008ರಲ್ಲಿ ಆಸ್ಟ್ರೇಲಿಯಾದ ವರ್ಷದ ಟೆಸ್ಟ್ ಆಟಗಾರ ಎಂಬ ಗೌರವಕ್ಕೆ ಭಾಜನರಾಗಿದ್ದರು. ಪ್ರತಿಷ್ಠಿತ ಅಲಾನ್ ಬಾರ್ಡರ್ ಪದಕವನ್ನು ಕೂಡ ಪಡೆದಿದ್ದರು. ಲೀ ಬಿಗ್ ಬ್ಯಾಷ್ ಲೀಗ್, ಐಪಿಎಲ್ ಮತ್ತು ಇತರ ಹಲವಾರು ಟಿ20 ಲೀಗ್‌ಗಳಲ್ಲಿಯೂ ಆಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಸಾಧನೆ ಕೂಡ ಬ್ರೆಟ್ ಲೀ ಹೆಸರಿನಲ್ಲಿದೆ.
A proven winner, a tearaway with ball in hand and true entertainer across all formats of the game.@BrettLee_58 is the newest member of the Australian Cricket Hall of Fame! pic.twitter.com/Qezxuf5cL7
— Cricket Australia (@CricketAus) December 27, 2025
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 718 ವಿಕೆಟ್‌ಗಳು
1999ರಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ 49ರ ವಯಸ್ಸಿನ ಬ್ರೆಟ್ ಲೀ, 2012ರವರೆಗೆ 76 ಟೆಸ್ಟ್ ಪಂದ್ಯಗಳ 150 ಇನಿಂಗ್ಸ್‌ಗಳಿಂದ 310 ವಿಕೆಟ್‌ಗಳನ್ನು ಪಡೆದಿದ್ದರು. ಇದರ ಜೊತೆಗೆ 221 ಏಕದಿನ ಪಂದ್ಯಗಳ 217 ಇನಿಂಗ್ಸ್‌ಗಳಲ್ಲಿ 380 ವಿಕೆಟ್‌ಗಳು ಹಾಗೂ 25 ಟಿ20ಐ ಪಂದ್ಯಗಳಿಂದ 28 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೂಡ ಆಗಿದ್ದರು, ಟೆಸ್ಟ್ ಕ್ರಿಕೆಟ್‌ನಲ್ಲಿ ಐದು ಅರ್ಧಶತಕಗಳೊಂದಿಗೆ 1451 ರನ್‌ಗಳನ್ನು ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮೂರು ಅರ್ಧಶತಕಗಳೊಂದಿಗೆ 1176 ರನ್‌ಗಳನ್ನು ದಾಖಲಿಸಿದ್ದಾರೆ.