ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಉಸ್ಮಾನ್‌ ಖವಾಜರನ್ನು ಸಂಕಷ್ಟಕ್ಕೆ ತಳ್ಳಿದ್ದೀರಿʼ: ಪ್ಯಾಟ್‌ ಕಮಿನ್ಸ್‌ ವಿರುದ್ಧ ಡೇವಿಡ್‌ ವಾರ್ನರ್‌ ಕಿಡಿ!

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತೊಮ್ಮೆ ಉಸ್ಮಾನ್ ಖವಾಜ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಾಲ್ ಟ್ಯಾಂಪರಿಂಗ್ (ಸ್ಯಾಂಡ್‌ಪೇಪರ್ ಗೇಟ್) ವಿವಾದದ ಕುರಿತು ಖವಾಜ ನೀಡಿದ್ದ ಹೇಳಿಕೆಗಳ ಬಗ್ಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಪ್ರತಿಕ್ರಿಯಿಸಿದ ಬೆನ್ನಲ್ಲೇ ವಾರ್ನರ್, ಖವಾಜಾ ಪರವಾಗಿ ಮಾತನಾಡಿದ್ದಾರೆ.

ಪ್ಯಾಟ್‌ ಕಮಿನ್ಸ್‌ ವಿರುದ್ಧ ಡೇವಿಡ್‌ ವಾರ್ನರ್‌ ಅಸಮಾಧಾನ.

ನವದೆಹಲಿ: ಸ್ಯಾಂಡ್ ಪೇಪರ್ ವಿವಾದದ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದ ಉಸ್ಮಾನ್ ಖವಾಜ (Usman Khawaja) ಅವರಿಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಮತ್ತೊಮ್ಮೆಬೆಂಬಲ ವ್ಯಕ್ತಪಡಿಸಿದ್ದಾರೆ. ಖವಾಜ ತಮ್ಮ ಹೊಸ ಪುಸ್ತಕ ‘Sabr’ನಲ್ಲಿ ಸ್ಯಾಂಡ್ ಪೇಪರ್ ವಿವಾದದ ಬಗ್ಗೆ ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ತಿಳಿದಿತ್ತು ಎಂದು ಹೇಳಿದ್ದರು. ಈ ಬಗ್ಗೆ ಇತ್ತೀಚೆಗೆ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಪ್ರತಿಕ್ರಿಯೆ ನೀಡಿದ್ದರು.

ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ತಂಡದ ಎಲ್ಲ ಸದಸ್ಯರೂ ಸಾಮೂಹಿಕವಾಗಿ ಹೊತ್ತುಕೊಳ್ಳಬೇಕು ಎಂದು ಖವಾಜ ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಕೇಪ್‌ಟೌನ್‌ನಲ್ಲಿ ನಡೆದಿದ್ದ ಪಂದ್ಯವೊಂದರಲ್ಲಿ ಮಾತ್ರವಲ್ಲದೆ, ಹಲವು ಪಂದ್ಯಗಳಲ್ಲಿ ಚೆಂಡಿನ ಸ್ವರೂಪ ಬದಲಿಸಲು ಸ್ಯಾಂಡ್ ಪೇಪರ್ ಬಳಸಲಾಗಿತ್ತು ಎಂದು ಅವರು ಆರೋಪಿಸಿದ್ದರು.

ಖವಾಜ ಅವರ ಈ ಹೇಳಿಕೆ ಆಸ್ಟ್ರೇಲಿಯಾದ ಹಲವು ಮಾಜಿ ಹಾಗೂ ಹಾಲಿ ಕ್ರಿಕೆಟಿಗರ ನಡುವೆ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಡೇವಿಡ್ ವಾರ್ನರ್ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಖವಾಜ ಪರವಾಗಿ ಮಾತನಾಡಿದ್ದಾರೆ. ಮತ್ತೊಂದೆಡೆ, ಖವಾಜ ಅವರ ಹೇಳಿಕೆಗಳನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ 'ಅಸಂಬದ್ಧ' ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ವಾರ್ನರ್, ಕಮಿನ್ಸ್ ಅವರು ಖವಾಜ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಫಾಕ್ಸ್ ಕ್ರಿಕೆಟ್ ಜೊತೆ ಮಾತನಾಡಿದ ವಾರ್ನರ್, “ಪ್ಯಾಟ್ ಕಮಿನ್ಸ್ ಇಂದು ಬೆಳಿಗ್ಗೆ ಮಾತನಾಡಲು ಚೆನ್ನಾಗಿ ಸಿದ್ಧರಾಗಿದ್ದರು. ಆದರೆ ನಾನು ಈಗಲೂ ಉಜ್ಜಿ (ಉಸ್ಮಾನ್ ಖವಾಜಾ) ಮತ್ತು ಅವರ ಪುಸ್ತಕದಲ್ಲಿ ಬರೆದಿರುವ ವಿಷಯವನ್ನು ಬೆಂಬಲಿಸುತ್ತೇನೆ. ಅದು ಸತ್ಯ. ನಾನು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಈ ಸಂದರ್ಭದಲ್ಲಿ ಅವರ ಬಗ್ಗೆ ನನಗೆ ನಿಜಕ್ಕೂ ಬೇಸರವಾಗುತ್ತಿದೆ. ಇಂದು ನಾಯಕರು ಉಜ್ಜಿಯನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ನನಗೆ ಅನಿಸುತ್ತಿದೆ. ಈ ವಿಚಾರದಲ್ಲಿ ನನಗೆ ತುಂಬಾ ನಿರಾಶೆಯಾಗಿದೆ,” ಎಂದು ಹೇಳಿದ್ದಾರೆ.

ಸ್ಯಾಂಡ್ ಪೇಪರ್ ವಿವಾದದ ಪರಿಣಾಮಗಳ ಬಗ್ಗೆ ಮಾತನಾಡಿದ ವಾರ್ನರ್

ಇದೇ ವೇಳೆ, 2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಚೆಂಡಿಗೆ ಸ್ಯಾಂಡ್ ಪೇಪರ್ ಬಳಸಿದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ತಾವು, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಎದುರಿಸಿದ ಪರಿಣಾಮಗಳ ಬಗ್ಗೆಯೂ ವಾರ್ನರ್ ಮನಬಿಚ್ಚಿ ಮಾತನಾಡಿದ್ದಾರೆ.

ʻಸ್ಮಿತ್‌, ವಾರ್ನರ್‌ ಮಾತ್ರವಲ್ಲ, ಎಲ್ಲರೂ ತಪ್ಪು ಮಾಡಿದ್ದಾರೆʼ: ಚೆಂಡು ವಿರೂಪ ಪ್ರಕರಣದ ಬಗ್ಗೆ ಬಾಂಬ್‌ ಸಿಡಿಸಿದ ಉಸ್ಮಾನ್‌ ಖವಾಜ!

“ಈ ಘಟನೆಯಿಂದ ನಮ್ಮ ಮೂವರಿಗೂ (ನಾನು, ಸ್ಟೀವ್ ಸ್ಮಿತ್ ಮತ್ತು ಕ್ಯಾಮರೂನ್ ಬ್ಯಾಂಕ್ರಾಫ್ಟ್) ದೊಡ್ಡ ಬೆಲೆ ತೆರಬೇಕಾಯಿತು. ಕಳೆದ ಎಂಟು ವರ್ಷಗಳಿಂದ ಈ ಬಗ್ಗೆ ನಾನು ಮಾತನಾಡಿರಲಿಲ್ಲ. ಆದರೆ ದಿನನಿತ್ಯವೂ ನಾವು ಈ ಘಟನೆಯ ಪರಿಣಾಮಗಳನ್ನು ಎದುರಿಸುತ್ತಲೇ ಇದ್ದೇವೆ. ನಮಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಗಿದೆ. ಈ ಘಟನೆಯಿಂದ ಇತರರಿಗೂ ತೊಂದರೆಯಾಗಿದೆ ಎಂದು ಕೆಲವರು ಮಾತನಾಡುತ್ತಾರೆ. ಆದರೆ ನಾನು, ಸ್ಟೀವ್ ಮತ್ತು ಕ್ಯಾಮರೂನ್ ಪ್ರತಿದಿನ ಹೊರಗೆ ಹೋಗುವಾಗ ಎದುರಿಸುವ ಪರಿಸ್ಥಿತಿಗಿಂತ ಕೆಟ್ಟದ್ದು ಮತ್ತೊಂದಿಲ್ಲ. ಜನರಿಂದ ನಿಂದನೆಗಳನ್ನು ಎದುರಿಸುತ್ತಿದ್ದೇವೆ. ಹೌದು, ನಾವು ನಮ್ಮ ತಪ್ಪಿನ ಪರಿಣಾಮಗಳನ್ನು ಒಪ್ಪಿಕೊಂಡಿದ್ದೇವೆ,” ಎಂದು ವಾರ್ನರ್ ಹೇಳಿದ್ದಾರೆ.

“ಆದರೆ ಕೊನೆಗೆ, ನನ್ನ ಪತ್ನಿ ಮತ್ತು ನಾನು ಕೂಡ ಅತ್ಯಂತ ದೊಡ್ಡ ಬೆಲೆಯನ್ನು ತೆರಬೇಕಾಯಿತು. ಆ ಸಮಯದಲ್ಲಿ ನಾವು ನಮ್ಮ ಮಗುವನ್ನು ಕಳೆದುಕೊಂಡೆವು. ಸತ್ಯವನ್ನು ಒಪ್ಪಿಕೊಳ್ಳುವವರೆಗೂ ಈ ನೋವು ನನ್ನನ್ನು ಅತಿ ಹೆಚ್ಚು ಕಾಡುತ್ತಲೇ ಇರುತ್ತದೆ,” ಎಂದು ವಾರ್ನರ್ ಭಾವುಕರಾಗಿ ತಿಳಿಸಿದ್ದಾರೆ.