ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ball-tampering scandal: ʻಇದು ಶೇ 100 ರಷ್ಟು ಸತ್ಯʼ-ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಆಸ್ಟ್ರೇಲಿಯಾದ 2018ರ ಚೆಂಡು ವಿರೂಪ ಪ್ರಕರಣ ಕುರಿತು ಉಸ್ಮಾನ್ ಖವಾಜ ಬಹಿರಂಗಪಡಿಸಿರುವ ವಿಚಾರಗಳಿಗೆ ಡೇವಿಡ್ ವಾರ್ನರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಖವಾಜ ಅವರ ಹೇಳಿಕೆಗಳು ಶೇ.100ರಷ್ಟು ಸತ್ಯ ಎಂದು ವಾರ್ನರ್ ಹೇಳಿದ್ದಾರೆ. ಅಲ್ಲದೆ, ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ ತನಿಖೆಯನ್ನು ತರಾತುರಿಯಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ನಡೆಸಿಲ್ಲ ಎಂದು ಟೀಕಿಸಿದ್ದಾರೆ.

ಉಸ್ಮಾನ್‌ ಖವಾಜ ಆರೋಪಕ್ಕೆ ಡೇವಿಡ್‌ ವಾರ್ನರ್‌ ಪ್ರತಿಕ್ರಿಯೆ!

ಉಸ್ಮಾನ್‌ ಖವಾಜ ಅವರ ಆರೋಪಗಳಿಗೆ ಡೇವಿಡ್‌ ವಾರ್ನರ್‌ ಬೆಂಬಲ. -

Profile
Ramesh Kote Nov 9, 2026 6:59 PM

ನವದೆಹಲಿ: ಆಸ್ಟ್ರೇಲಿಯಾದ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣ ( Ball Tampering Scandal) ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ಕುರಿತು ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖವಾಜ (Usman Khawaja) ಮಾಡಿರುವ ಬಹಿರಂಗ ಹೇಳಿಕೆಗಳಿಗೆ ಮತ್ತೊಬ್ಬ ಮಾಜಿ ಆಟಗಾರ ಡೇವಿಡ್ ವಾರ್ನರ್ (David Warner) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಖವಾಜ ಹೇಳಿರುವ ಪ್ರತಿಯೊಂದು ವಿಚಾರವೂ ಶೇ.100ರಷ್ಟು ಸತ್ಯ ಎಂದು ವಾರ್ನರ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ ನಡೆಸಿದ್ದ ತನಿಖೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಪ್ರಸ್ತುತ ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ವಾರ್ನರ್, ಖವಾಜ ಅವರ ಆತ್ಮಕಥೆ 'ಸಬ್ರ್' (Sabr) ಬಿಡುಗಡೆಯಾಗುವ ಮುನ್ನ ಇನ್‌ಸ್ಟಾಗ್ರಾಮ್ ವಿಡಿಯೊ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಂಗಳವಾರ ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ಹಲವು ಒಳವಿಚಾರಗಳನ್ನು ಖವಾಜ ಬಹಿರಂಗಪಡಿಸಿದ್ದಾರೆ.

ʻಸ್ಮಿತ್‌, ವಾರ್ನರ್‌ ಮಾತ್ರವಲ್ಲ, ಎಲ್ಲರೂ ತಪ್ಪು ಮಾಡಿದ್ದಾರೆʼ: ಚೆಂಡು ವಿರೂಪ ಪ್ರಕರಣದ ಬಗ್ಗೆ ಬಾಂಬ್‌ ಸಿಡಿಸಿದ ಉಸ್ಮಾನ್‌ ಖವಾಜ!

ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾ ಆಟಗಾರರು ಸ್ಯಾಂಡ್‌ ಪೇಪರ್‌ ಬಳಸಿ ಚೆಂಡನ್ನು ವಿರೂಪಗೊಳಿಸಿದ ಘಟನೆ ಜಾಗತಿಕ ಮಟ್ಟದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಇತರ ಆಟಗಾರರಿಗೆ ಎಷ್ಟು ಮಾಹಿತಿ ಇತ್ತು ಮತ್ತು ತಪ್ಪಿನ ಹೊಣೆಯನ್ನು ಕೆಲವೇ ಆಟಗಾರರು ಏಕೆ ಹೊತ್ತುಕೊಳ್ಳಬೇಕಾಯಿತು ಎಂಬ ಪ್ರಶ್ನೆಗಳನ್ನು ಖವಾಜ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.



ಖವಾಜಾ ಬೆಂಬಲಕ್ಕೆ ನಿಂತ ವಾರ್ನರ್

ಈ ವಿವಾದದ ಕುರಿತು ಎಂಟು ವರ್ಷಗಳ ಬಳಿಕ ಮಾತನಾಡಿರುವ ವಾರ್ನರ್, ಖವಾಜಾ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.

"ಈ ವಿಚಾರದ ಕುರಿತು ನಾನು ಮಾತನಾಡದೆ ಎಂಟು ವರ್ಷಗಳಾಗಿವೆ. ಉಜ್ಜಿ, ನಾನು ಸಂಪೂರ್ಣವಾಗಿ ನಿನ್ನ ಬೆಂಬಲಕ್ಕೆ ನಿಲ್ಲುತ್ತೇನೆ. ನೀನು ಹೇಳಿರುವುದು ಶೇ.100ರಷ್ಟು ನಿಖರವಾಗಿದೆ. ಈಗ ಸತ್ಯ ಎಲ್ಲರಿಗೂ ತಿಳಿದಿದೆ. ಜನರು ತಿಳಿದುಕೊಳ್ಳಲು ಬಯಸಿದ್ದ ವಿಚಾರವನ್ನು ನೀನು ಬಹಿರಂಗಪಡಿಸಿದ್ದೀಯ. ಪುಸ್ತಕ ಮಾರಾಟಕ್ಕಾಗಿ ಈಗ ಮಾತನಾಡುತ್ತಿದ್ದೀಯ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ ಇದು ಉಸ್ಮಾನ್ ಅವರ ಕಥೆ ಮತ್ತು ಅವರ ನಂಬಿಕೆ. ಆ ದಿನದಿಂದ ನಡೆದ ಪ್ರತಿಯೊಂದು ವಿಚಾರವನ್ನೂ ಅವರು ದಾಖಲಿಸಿದ್ದಾರೆ. ಇದಕ್ಕಾಗಿ ಧನ್ಯವಾದಗಳು," ಎಂದು ಡೇವಿಡ್‌ ವಾರ್ನರ್ ಹೇಳಿದ್ದಾರೆ.

IND vs NZ: ಮೂರನೇ ಒಡಿಐಗೆ ಸಂಭಾವ್ಯ ಪ್ಲೇಯಿಂಗ್‌ XI, ಪಿಚ್‌ ರಿಪೋರ್ಟ್‌, ಹೆಡ್‌ ಟು ಹೆಡ್‌ ದಾಖಲೆ ವಿವರ!

ಕ್ರಿಕೆಟ್ ಆಸ್ಟ್ರೇಲಿಯಾ ತನಿಖೆಗೆ ವಾರ್ನರ್ ಅಸಮಾಧಾನ

2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ತನಿಖೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ತರಾತುರಿಯಲ್ಲಿ ಮತ್ತು ಸರಿಯಾದ ರೀತಿಯಲ್ಲಿ ನಡೆಸಿಲ್ಲ ಎಂದು ವಾರ್ನರ್ ಆರೋಪಿಸಿದ್ದಾರೆ. ವಿಶೇಷವಾಗಿ ಘಟನೆಯ ಸಂದರ್ಭದಲ್ಲಿ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದ ಉಸ್ಮಾನ್ ಖವಾಜ ಅವರನ್ನು ತನಿಖೆಯ ವೇಳೆ ವಿಚಾರಣೆ ನಡೆಸದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಸಂಪೂರ್ಣ ವಿಚಾರಣೆ ಪ್ರಕ್ರಿಯೆಯನ್ನು ತರಾತುರಿಯಲ್ಲಿ ಮತ್ತು ತಪ್ಪು ರೀತಿಯಲ್ಲಿ ನಡೆಸಲಾಗಿದೆ. ಉಸ್ಮಾನ್ ಖವಾಜ ಅವರು ಕ್ಯಾಮರೂನ್ ಬ್ಯಾಂಕ್ರಾಫ್ಟ್ ಪಕ್ಕದಲ್ಲೇ ಕುಳಿತಿದ್ದರು. ಆದರೆ ಅವರನ್ನು ವಿಚಾರಣೆಗೇ ಒಳಪಡಿಸಲಿಲ್ಲ. ಇದನ್ನು ಹೇಗೆ ಸಮಗ್ರ ತನಿಖೆ ಎಂದು ಕರೆಯಲು ಸಾಧ್ಯ?" ಎಂದು ವಾರ್ನರ್ ಪ್ರಶ್ನಿಸಿದ್ದಾರೆ.

"ಅಲ್ಲದೆ, ಆಟಗಾರರನ್ನು ಮಾತ್ರ ಪ್ರಶ್ನಿಸುವ ಬದಲು ತನಿಖೆ ನಡೆಸಿದ ಅಧಿಕಾರಿಗಳ ಹೊಣೆಗಾರಿಕೆಯನ್ನು ಪರಿಶೀಲಿಸುವ ಸಮಯ ಬಂದಿದೆ. ಪ್ರಕರಣದ ಕುರಿತು ಸತ್ಯಾಸತ್ಯತೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು," ಎಂದು ಆಗ್ರಹಿಸಿದ್ದಾರೆ.