ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

PSL ತೊರೆದು IPL ಆರಿಸಿಕೊಂಡ ಆಟಗಾರರ ವಿರುದ್ಧ ಕಠಿಣ ಕ್ರಮ: ಮೊಹ್ಸಿನ್‌ ನಖ್ವಿ!

ಪಾಕಿಸ್ತಾನ ಸೂಪರ್‌ ಲೀಗ್‌ ತೊರೆದು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಆಯ್ಕೆ ಮಾಡಿಕೊಂಡಿರುವ ವಿಶ್ವದ ವಿವಿಧ ಆಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಮುಂದಾಗಿದ್ದಾರೆ. ಬ್ಲೆಸಿಂಗ್‌ ಮುಝರಬಾನಿ ಸೇರಿದಂತೆ ಹಲವು ಆಟಗಾರರು ಪಿಎಸ್‌ಎಲ್‌ ಟೂರ್ನಿಯನ್ನು ತೊರೆದಿದ್ದಾರೆ.

ಆರ್‌ಸಿಬಿ ಮಾಜಿ ವೇಗಿಗೆ ಸಂಕಷ್ಟ, ಪಿಎಸ್‌ಎಲ್‌ ತೊರೆದ ಆಟಗಾರರ ವಿರುದ್ಧ ಕಠಿಣ ಕ್ರಮ.

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ, ಪಾಕಿಸ್ತಾನ ಸೂಪರ್ ಲೀಗ್ (PSL) ಬಿಟ್ಟು ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಭಾಗವಹಿಸುವ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 2025ರಲ್ಲಿ ಕಾರ್ಬಿನ್ ಬಾಷ್‌, ಪೇಶಾವರ್ ಝಲ್ಮಿ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್‌ಗೆ ಸೇರಿದ್ದರು. ಇದೀಗ 2026ರಲ್ಲಿ ಬ್ಲೆಸಿಂಗ್ ಮುಝರಬಾನಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ಬಿಟ್ಟು ಕೊಲ್ಕತ್ತಾ ನೈಟ್ ರೈಡರ್ಸ್ (KKR) ಸೇರಿದ್ದರೆ, ದಸೂನ್ ಶಾನಕ ಲಾಹೋರ್ ಖಲಂದರ್ಸ್ ತೊರೆದು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರುವ ನಿರೀಕ್ಷೆಯಲ್ಲಿದ್ದಾರೆ.

ಇದಲ್ಲದೆ, ಐಪಿಎಲ್ ಜೊತೆ ವೇಳಾಪಟ್ಟಿ ಸಂಘರ್ಷವು ಸಮಸ್ಯೆಯಲ್ಲ ಎಂದು ನಖ್ವಿ ಸ್ಪಷ್ಟಪಡಿಸಿದ್ದಾರೆ. ಕ್ಯಾಲೆಂಡರ್‌ ವರ್ಷದಲ್ಲಿ ಬೇರೆ ಯಾವುದೇ ಸಮಯಾವಕಾಶ ಲಭ್ಯವಿಲ್ಲದ ಕಾರಣ, ಪಿಎಸ್ಎಲ್ ಅನ್ನು ಮುಂದೂಡುವ ಸಾಧ್ಯತೆಯೇ ಇಲ್ಲ ಎಂದು ಅವರು ಖಚಿತಪಡಿಸಿದ್ದಾರೆ.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌, ʻಹಾಲ್‌ ಆಫ್‌ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್‌, ಸುರೇಶ್‌ ರೈನಾ!

ಪಿಎಸ್‌ಎಲ್‌ ತೊರೆದು ಐಪಿಎಲ್‌ ಆಡುವ ಆಟಗಾರರ ವಿರುದ್ಧ ಕ್ರಮ: ಪಿಸಿಬಿ ಅಧ್ಯಕ್ಷ

“ನಿಯಮಗಳ ಪ್ರಕಾರ, ಈ ರೀತಿಯ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಳೆದ ವರ್ಷವೂ ಒಂದು ಘಟನೆ ನಡೆದಿದೆ [ಕಾರ್ಬಿನ್ ಬಾಷ್‌, ಪಿಎಸ್ಎಲ್‌ನಲ್ಲಿ ಒಂದು ವರ್ಷ ಅಮಾನತು) ಮತ್ತು ಇದೀಗ ಅದೇ ಘಟನೆ ನಡೆಯುತ್ತಿದೆ," ಎಂದು ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

“ಐಪಿಎಲ್ ವೇಳಾಪಟ್ಟಿಯಲ್ಲಿನ ಸಂಘರ್ಷವು ಸಮಸ್ಯೆಯಲ್ಲ. ಏಕೆಂದರೆ ಆಟಗಾರರು ಐಪಿಎಲ್‌ ಟೂರ್ನಿಗೆ ಹೋಗುತ್ತಿದ್ದರೂ, ಇಲ್ಲಿಗೂ ಕೂಡ ನಮಗೆ ಉತ್ತಮ ಆಟಗಾರರು ಬರುತ್ತಿದ್ದಾರೆ. ವರ್ಷದ ಎಲ್ಲಾ ಸಮಯದಲ್ಲೂ ಬೇರೆ ಯಾವುದೇ ಸಮಯಾವಕಾಶ ಇಲ್ಲದ ಕಾರಣ, ಪಿಎಸ್ಎಲ್ ಅನ್ನು ಮುಂದೂಡಲು ಸಾಧ್ಯವಾಗುತ್ತಿರಲಿಲ್ಲ,” ಎಂದು ನಖ್ವಿ ಸ್ಪಷ್ಟಪಡಿಸಿದ್ದಾರೆ.

IPL 2026: ಕೆಎಲ್‌ ರಾಹುಲ್‌ಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಡಿಸಿ ಕೋಚ್‌ ಹೇಮಾಂಗ್‌ ಬದಾನಿ!

ಪಿಎಸ್‌ಎಲ್‌ ತೊರೆದ ಆಟಗಾರರಿಗೆ ಶಿಕ್ಷೆ ಇದೆಯಾ?

ಬ್ಲೆಸಿಂಗ್ ಮುಝರಬಾನಿ ಮತ್ತು ದಸೂನ್ ಶಾನಕ ಬಗ್ಗೆ ಅಧಿಕೃತ ನಿರ್ಧಾರ ಇನ್ನೂ ಕೈಗೊಂಡಿಲ್ಲ, ಆದರೆ ಕಳೆದ ಸೀಸನ್‌ನಲ್ಲಿ ಕಾರ್ಬಿನ್ ಬಾಷ್‌ ಪೇಶಾವರ್ ಝಾಲ್ಮಿ ತಂಡದ ಒಪ್ಪಂದವನ್ನು ವಾಪಸ್ ಪಡೆದ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಕಠಿಣ ಕ್ರಮ ಕೈಗೊಂಡಿತ್ತು.

ಬಾಶ್ 2025ರಿಂದ ಪಿಎಸ್‌ಎಲ್‌ನಿಂದ ಹಿಂದೆ ಸರಿದ ನಂತರ, ಪಿಎಸ್ಎಲ್ ವಿರುದ್ಧ ಐಪಿಎಲ್ ವೇಳಾಪಟ್ಟಿಯಲ್ಲಿ ಪ್ರಥಮ ಪ್ರಮುಖ ಸಂಘರ್ಷದ ಕೇಂದ್ರಬಿಂದು ಆಗಿದ್ದರು. ಝಾಲ್ಮಿ ತಂಡವು ಡೈಮಂಡ್ ಕ್ಯಾಟೆಗರಿ‌ನಲ್ಲಿ ಆಯ್ಕೆಮಾಡಿ ಸುಮಾರು ಯುಎಸ್‌ ಡಾಲರ್‌ 85,000ರ ರು. ಗಳಿಗೆ ಒಪ್ಪಂದ ನೀಡಿದ್ದರೂ, ಬಾಷ್‌ ತಂಡವನ್ನು ತೊರೆದು, ಐಪಿಎಲ್‌ನ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗಿದ್ದರು. ಅವರು ಗಾಯಾಳು ಲಿಜಾದ್‌ ವಿಲಿಯಮ್ಸನ್‌ ಅವರ ಸ್ಥಾನಕ್ಕೆ ಮುಂಬೈಗೆ ಬಂದಿದ್ದರು.

IPL 2026: ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್ ಅಯ್ಯರ್, ಜಾಕೋಬ್ ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಕಾರ್ಬಿನ್ ಬಾಷ್‌ಗೆ ಲೀಗಲ್‌ ನೋಟಿಸ್ ನೀಡಿದ್ದು, ಇದನ್ನು ಒಪ್ಪಂದ ಉಲ್ಲಂಘನೆ ಎಂದು ಘೋಷಿಸಿದೆ. ಬಾಷ್‌ ನಂತರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೂ, ಬೋರ್ಡ್ ಅವರ ಮೇಲೆ ಒಂದು ವರ್ಷದ ನಿರ್ಬಂಧ ಮತ್ತು ದಂಡವನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅವರು 2026ರಿಂದ ಪಿಎಸ್‌ಎಲ್‌ನಿಂದ ಹೊರಗೊಳಿಯಬೇಕಾಗಿದೆ.

2026ರ ಪಾಕಿಸ್ತಾನ ಸೂಪರ್ ಲೀಗ್ ಮಾರ್ಚ್ 26ರಿಂದ ಮೇ 3ರವರೆಗೆ ನಡೆಯುವಂತೆ ವೇಳಾಪಟ್ಟಿ ಸಿದ್ದವಾಗಿದೆ. ಪಂದ್ಯಗಳು ಲಾಹೋರ್ ಮತ್ತು ಕರಾಚಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಭದ್ರತಾ ಸಮಸ್ಯೆಗಳು ಮತ್ತು ದೇಶದ ಇಂಧನ ಸಂಕಷ್ಟವನ್ನು ಗಮನದಲ್ಲಿ ಇಟ್ಟುಕೊಂಡು, ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ನಡೆಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಉದ್ಘಾಟನಾ ಸಮಾರಂಭವನ್ನು ಕೂಡ ಹಣಕಾಸು ಉಳಿತಾಯದ ಭಾಗವಾಗಿ ರದ್ದು ಮಾಡಲಾಗಿದೆ.