ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌, ʻಹಾಲ್‌ ಆಫ್‌ ಫೇಮ್‌ಗೆʼ ಭಾಜನರಾದ ಮ್ಯಾಥ್ಯೂ ಹೇಡನ್‌, ಸುರೇಶ್‌ ರೈನಾ!

CSK's Hall of Fame: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವ ಮ್ಯಾಥ್ಯೂ ಹೇಡನ್‌ ಹಾಗೂ ಸುರೇಶ್‌ ರೈನಾ ಅವರು ಸಿಎಸ್‌ಕೆ ತಂಡದ ʻಹಾಲ್‌ ಆಫ್‌ ಫೇಮ್‌' ಗೌರವಕ್ಕೆ ಭಾಜನರಾಗಿದ್ದಾರೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಈ ಗೌರವವನ್ನು ನೀಡಲಾಯಿತು. ಈ ವೇಳೆ ಸಿಎಸ್‌ಕೆ ಮಾಜಿ ಆಟಗಾರರಾದ ಮುತ್ತಯ್ಯ ಮುರಳಿಧರನ್‌, ಅಂಬಾಟಿ ರಾಯುಡು ಸೇರಿದಂತೆ ಪ್ರಮುಖರ ಈ ಕ್ಷಣಕ್ಕೆ ಸಾಕ್ಷಿಯಾದರು.

ಸಿಎಸ್‌ಕೆಯ ʻಹಾಲ್‌ ಆಫ್‌ ಫೇಮ್‌ʼಗೆ ಭಾಜನರಾದ ಹೇಡನ್‌, ರೈನಾ!

ಸಿಎಸ್‌ಕೆಯ ಹಾಲ್‌ ಫೇಮ್‌ ಗೌರವಕ್ಕೆ ಭಾಜನರಾದ ಹೇಡನ್‌, ರೈನಾ. -

Profile
Ramesh Kote Mar 23, 2026 4:56 PM

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ತನ್ನ ಮೊದಲ ʻಹಾಲ್ ಆಫ್ ಫೇಮ್‌ʼ ಗೌರವಕ್ಕೆ ದಿಗ್ಗಜ ಕ್ರಿಕೆಟಿಗರಾದ ಸುರೇಶ್ ರೈನಾ (Suresh Raina) ಮತ್ತು ಮ್ಯಾಥ್ಯೂ ಹೇಡನ್ (Matthew Hayden) ಭಾಜನರಾಗಿದ್ದಾರೆ. ಚೆನ್ನೈನ ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ‘ರೋರ್ ‘26’ ಎಂಬ ಭವ್ಯ ಅಭಿಮಾನಿ ಸಮಾರಂಭದಲ್ಲಿ ಚೆನ್ನೈ ಫ್ರಾಂಚೈಸಿ ಇದನ್ನು ಪ್ರಕಟಿಸಿತು. ಸಿಎಸ್‌ಕೆ ತನ್ನ ದಿಗ್ಗಜರು ಮತ್ತು ಮಾಜಿ ಆಟಗಾರರನ್ನು ಅಧೀಕೃತವಾಗಿ ಗೌರವಿಸಿದ ಮೊದಲ ಐತಿಹಾಸಿಕ ಕ್ಷಣ ಇದಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಮುತ್ತಯ್ಯ ಮುರಳೀಧರನ್, ಅಂಬಾಟಿ ರಾಯುಡು, ಶದಾಬ್ ಜಕಾತಿ, ಡ್ವೇನ್ ಬ್ರಾವೋ, ಹರ್ಭಜನ್ ಸಿಂಗ್ ಮತ್ತು ಎಸ್‌ ಬದ್ರಿನಾಥ್ ಸೇರಿದಂತೆ ಹಲವು ಮಾಜಿ ಆಟಗಾರರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರರಲ್ಲಿ ಒಬ್ಬರಾದ ಸುರೇಶ್ ರೈನಾ, ‘ಚಿನ್ನ ಥಲಾ’ ಎಂದೇ ಅಭಿಮಾನಿಗಳಿಂದ ಪ್ರೀತಿಪಾತ್ರರಾಗಿದ್ದಾರೆ. 2010, 2011, 2018 ಮತ್ತು 2021ರಲ್ಲಿ ಸಿಎಸ್‌ಕೆ ಗೆದ್ದ ಐಪಿಎಲ್ ಪ್ರಶಸ್ತಿಗಳಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಇದಲ್ಲದೆ, 2010 ಮತ್ತು 2014ರಲ್ಲಿ ಸಿಎಸ್‌ಕೆ ಗೆದ್ದ ಚಾಂಪಿಯನ್ಸ್ ಲೀಗ್ ಟಿ20 (CLT20) ಪ್ರಶಸ್ತಿಗಳಲ್ಲೂ ರೈನಾ ಪ್ರಮುಖ ಪಾತ್ರವಹಿಸಿದ್ದರು.

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ನ ಕೀ ಆಟಗಾರನನ್ನು ಆರಿಸಿದ ಇರ್ಫಾನ್‌ ಪಠಾಣ್‌!

2014ರಲ್ಲಿ ಅವರು 234 ರನ್ ಗಳಿಸಿ, ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಫೈನಲ್‌ನಲ್ಲಿ ಅಜೇಯ ಶತಕ ಸಿಡಿಸಿ ‘ಪ್ಲೇಯರ್ ಆಫ್ ದ ಟೂರ್ನಮೆಂಟ್’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಒಟ್ಟು 200 ಪಂದ್ಯಗಳಲ್ಲಿ 5,529 ರನ್ ಗಳಿಸಿರುವ ರೈನಾ, ಇನ್ನೂ ಸಿಎಸ್‌ಕೆ ಪರ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ಖಾತೆಯಲ್ಲಿ 38 ಅರ್ಧಶತಕಗಳು ಮತ್ತು ಎರಡು ಶತಕಗಳಿವೆ.

ಮ್ಯಾಥ್ಯೂ ಹೇಡನ್‌ ಅವರ ಅಂಕಿಅಂಶಗಳು

ಇನ್ನೊಂದೆಡೆ, ಆಸ್ಟ್ರೇಲಿಯಾದ ದಿಗ್ಗಜ ಓಪನರ್ ಮ್ಯಾಥ್ಯೂ ಹೇಡನ್ ಕೂಡ ಸಿಎಸ್‌ಕೆ ತಂಡದ ಆರಂಭಿಕ ವರ್ಷಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2008ರ ಮೊದಲ ಐಪಿಎಲ್ ಸೀಸನ್‌ನಲ್ಲಿ ತಂಡಕ್ಕೆ ಸೇರಿಕೊಂಡ ಅವರು, 2009ರಲ್ಲಿ 527 ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಗೆದ್ದ ಮೊದಲ ಸಿಎಸ್‌ಕೆ ಬ್ಯಾಟ್ಸ್‌ಮನ್ ಆಗಿದ್ದರು. ಮೂರು ವರ್ಷಗಳ ಅವಧಿಯಲ್ಲಿ (2008–2010), ಹೇಡನ್ 32 ಪಂದ್ಯಗಳಲ್ಲಿ ಒಟ್ಟು 1107 ರನ್ ಗಳಿಸಿ ಸಿಎಸ್‌ಕೆ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

IPL 2026: ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್ ಅಯ್ಯರ್, ಜಾಕೋಬ್ ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

ಚೆನ್ನೈ ಸೂಪರ್ ಕಿಂಗ್ಸ್ ತಂಡದ ʻಹಾಲ್ ಆಫ್ ಫೇಮ್ʼ, ತನ್ನ ಮಾಜಿ ಆಟಗಾರರ ಮಹತ್ವದ ಕೊಡುಗೆಗಳನ್ನು ಗುರುತಿಸುವ ವೇದಿಕೆಯಾಗಿದೆ. ಇದು ಫ್ರಾಂಚೈಸಿಯ ಯಶಸ್ಸಿಗೆ ಮಾನದಂಡವನ್ನು ನಿರ್ಮಿಸುವುದರ ಜೊತೆಗೆ, ಕಳೆದ ಸಾಧನೆಗಳನ್ನು ಸ್ಮರಿಸುವ ಮತ್ತು ಅದರಲ್ಲಿ ಪಾತ್ರವಹಿಸಿದವರನ್ನು ಗೌರವಿಸುವ ಒಂದು ಪ್ರಯತ್ನವಾಗಿದೆ.

ಸಿಎಸ್‌ಕೆಗೆ ಮೊದಲ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌

ಇದರ ನಡುವೆ, ಸಿಎಸ್‌ಕೆ ತಂಡ, 2026ರ ಐಪಿಎಲ್ ಅಭಿಯಾನವನ್ನು ಮಾರ್ಚ್ 30ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರಂಭಿಸಲಿದೆ. ನಂತರ ಏಪ್ರಿಲ್ 3ರಂದು ಚೆಪಾಕ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ತವರು ಪಂದ್ಯವನ್ನು ಆಡಲಿದೆ. 2025ರಲ್ಲಿ ನೀರಸ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಸಿಎಸ್‌ಕೆ, ಈ ಬಾರಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಗೆಲುವಿನ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.